Homeಸುದ್ದಿಗಳುಬಸವಕಲ್ಯಾಣ ದಲ್ಲಿ 20ನೇ ಕಲ್ಯಾಣ ಪರ್ವ

ಬಸವಕಲ್ಯಾಣ ದಲ್ಲಿ 20ನೇ ಕಲ್ಯಾಣ ಪರ್ವ

ಬೀದರ – ಬಸವಣ್ಣ ನವರ ಕರ್ಮಭೂಮಿ ಬಸವಕಲ್ಯಾಣದ ಮಹಾಮನೆ ಆವರಣದಲ್ಲಿ 20ನೇ ಕಲ್ಯಾಣ ಪರ್ವ ಕಾರ್ಯಕ್ರಮ ಉದ್ಘಾಟನೆ ಗೊಂಡಿತ್ತು.

ಮೂರು ದಿನಗಳ ಕಾಲ ಹಲವು ಧಾರ್ಮಿಕ ಗೋಷ್ಠಿ ಗಳು,ವಿಚಾರ ಸಂಕೀರ್ಣಗಳು ನಡೆಯಲಿವೆ‌. ಬಸವ ಧರ್ಮ ಪೀಠಾಧ್ಯಕ್ಷರಾದ ಜಗದ್ಗುರು ಡಾ. ಗಂಗಾ ಮಾತಾಜಿ ಅವರ ನೇತ್ರತ್ವದಲ್ಲಿ ನಡೆಯಲಿರುವ ಕಲ್ಯಾಣ ಪರ್ವ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಯ ಜನರು ಆಗಮಿಸಿದ್ದಾರೆ. ಅಲ್ಲದೆ ತೆಲಂಗಾಣ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯದ ಶರಣರು ಭಾಗಿ ಯಾಗಿದ್ದರು.

ಈ ಸಂದರ್ಭದಲ್ಲಿ ಕರೋನ ನಿಯಮಗಳನ್ನು ಗಾಳಿಗೆ ತೂರಿದ ಬಸವಣ್ಣನವರ ಭಕ್ತರು ಗಡಿ ಜಿಲ್ಲೆ ಗೆ ಹೊಂದಿರುವ ಮೂರು ರಾಜ್ಯದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಲಿಂ.ಮಾತೆಮಹಾದೇವಿ ಅವರು ಲಿಂಗೈಕ್ಯರಾದ ಮೇಲೆ 17 ಕಲ್ಯಾಣ ಪರ್ವ ಕಾರ್ಯಕ್ರಮ ಜರುಗಿದವು. ಮಾತೆ ಮಹಾದೇವಿ ಲಿಂಗೈಕ್ಯರಾದ ಮೇಲೆ ಮೂರನೇ ಕಲ್ಯಾಣ ‌ಪರ್ವ ಜರುಗಲಿದೆ. ಕಾರ್ಯಕ್ರಮದಲ್ಲಿ ಗುರು ಬಸವಣ್ಣನವರ ಪೂಜೆ ಮಾಡಿ ಬಸವಜ್ಯೋತಿ ಪ್ರಜ್ವಲಿಸಿದ ತೆಲಂಗಾಣ ಜಹೀರಾಬಾದ ಲೋಕಸಭಾ ಸದಸ್ಯ ಬಿ ಬಿ ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಡಾ.ಮಾತೆ ಮಹಾದೇವಿಯವತನ್ನು ಕಳೆದುಕೊಂಡು ಲಿಂಗಾಯತ ಹೋರಾಟ ಸಮಿತಿ ಬಡವಾಗಿದೆ.ಲಿಂಗಾಯತ ಹೋರಾಟದಲ್ಲಿ ನಾವು ಎಲ್ಲರೂ ಒಕ್ಕೊರಲಿನಿಂದ ಕಾರ್ಯ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಜಗದ್ಗುರು ಚನ್ನಬಸವಾನಂದ ಸ್ವಾಮಿಜೀ ಸೇರಿದಂತೆ ಸಾವಿರಾರು ಶರಣ ಶರಣೆಯರು ಭಾಗಿಯಾಗಿದ್ದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

RELATED ARTICLES

Most Popular

error: Content is protected !!
Join WhatsApp Group