spot_img
spot_img

22303 ಕೋಟಿ. ರೂ.ಗಳ ರಸಗೊಬ್ಬರಕ್ಕೆ ಸಬ್ಸಿಡಿ ನೀಡಿದ ಕೇಂದ್ರದ ಕ್ರಮ ಸ್ವಾಗತಾರ್ಹ-ಸಂಸದ ಈರಣ್ಣ ಕಡಾಡಿ

Must Read

- Advertisement -

ಮೂಡಲಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಿಂಗಾರು ಹಂಗಾಮಿಗೆ ಅನ್ವಯವಾಗುವಂತೆ ಕೃಷಿ ಬಳಕೆಯ ರಸಗೊಬ್ಬರ ಸಬ್ಸಿಡಿಗೆ 22,303 ಕೋಟಿ ರೂ.ಗಳನ್ನು  ಸಬ್ಸಿಡಿ ನೀಡಲು ತೀರ್ಮಾನಿಸಿದೆ ಜೊತೆಗೆ ಫಾಸ್ಪೆಟ್ ಹಾಗೂ ಪೋಟಾಷ್ ಯುಕ್ತ ರಸಗೊಬ್ಬರಗಳಿಗೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ ನೀಡಲು ಒಪ್ಪಿಗೆ ನೀಡಲಾಗಿದೆ. ಇದು ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರಗಳ ಲಭ್ಯತೆಯನ್ನು ಖಾತ್ರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.

ಗುರುವಾರ ಅ.26 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರ ಹಿಂಗಾರು ಋತುವಿನ ಬೆಳೆಗಳಿಗೆ ಸಾರಜನಕ, ರಂಜಕ, ಪೋಟ್ಯಾಶ್ ಮತ್ತು ಗಂಧಕದಂತಹ ವಿವಿಧ ಪೋಷಕಾಂಶಗಳಿಗೆ ಸಬ್ಸಿಡಿ ದರ ಒದಗಿಸಲು ಸರ್ಕಾರ ನಿರ್ಧರಿಸಿದೆ. ಹೆಚ್ಚಿನ ಜಾಗತಿಕ ಬೆಲೆಗಳ ಹೊರತಾಗಿಯೂ ರೈತರಿಗೆ ಸಮಂಜಸವಾದ ದರದಲ್ಲಿ ಮಣ್ಣಿಗೆ ಪೋಷಕಾಂಶಗಳು ಸಿಗುವುದನ್ನು ಖಚಿತಪಡಿಸಿಕೊಳ್ಳಲು ಸಹಾಯಧನಕ್ಕೆ ಕೇಂದ್ರ ಸರ್ಕಾರದ ಈ ತೀರ್ಮಾನ ಕೈಗೊಂಡಿದೆ ಇದು ಅನ್ನದಾತನ ಬಾಳಿನಲ್ಲಿ ಸಮಗ್ರ ಬದಲಾವಣೆ ತರುವತ್ತ ಹೆಜ್ಜೆ ಹಾಕಿದೆ ಎಂದರು.

ಡಿಎಪಿ ಪ್ರತಿ ಚೀಲಕ್ಕೆ ರೂ 1,470ರ ಹಳೆಯ ದರದಲ್ಲಿ ಮತ್ತು SSP (ಸಿಂಗಲ್ ಸೂಪರ್ ಫಾಸ್ಟೇಟ್) ಪ್ರತಿ ಚೀಲ ರೂ 500ಕ್ಕೆ ಲಭ್ಯವಿರಲಿದೆ. ಎಮ್ಓಪಿ (ಮ್ಯುರಿಯೇಟ್ ಆಫ್ ಪೊಟಾಷ್) ದರ ಪ್ರತಿ ಚೀಲಕ್ಕೆ ರೂ 1,700ರಿಂದ ರೂ 1,655ಕ್ಕೆ ಇಳಿಯಲಿದೆ. ಪ್ರತಿ ಕಿಲೋ ನೈಟ್ರೋಜೆನ್ (ಎನ್) ರೂ.47.02, ರಂಜಕಕ್ಕೆ ರೂ 20.82, ಪೊಟಾಷ್ ïಗೆ ರೂ. 2.38 ಮತ್ತು ಸಲ್ಪರ್‍ಗೆ ರೂ 1,89 ರೂ.ಗೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರವು ಯೂರಿಯಾ ಸಬ್ಸಿಡಿಯನ್ನು ಹೆಚ್ಚಿಸುವ ಮೂಲಕ ರಸಗೊಬ್ಬರ ಬೆಲೆ ಏರಿಕೆಯಿಂದ ರೈತರನ್ನು ರಕ್ಷಿಸುತ್ತಿದೆ. ಈ ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರಿಗೆ ದಸರಾ ಉಡುಗೊರೆ ನೀಡಿದಕ್ಕಾಗಿ ನಾಡಿನ ರೈತರ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

- Advertisement -
- Advertisement -

Latest News

ದೆಹಲಿ ಮುಖ್ಯಮಂತ್ರಿ ಯಾರಾಗುತ್ತಾರೆ ?

ಹೊಸದಿಲ್ಲಿ - ತಮ್ಮ ಆಮ್ ಆದ್ಮಿ ಪಕ್ಷದಲ್ಲಿನ ಯಾರೋ ಒಬ್ಬರು ದೆಹಲಿ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಲಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ಮಾಜಿ ಉಪ...
- Advertisement -

More Articles Like This

- Advertisement -
close
error: Content is protected !!
Join WhatsApp Group