spot_img
spot_img

ಬಸವೇಶ್ವರ ಸೊಸಾಯಿಟಿಯ 23 ನೇ ವಾರ್ಷಿಕೋತ್ಸವ

Must Read

ಗುರ್ಲಾಪೂರ: ಇಲ್ಲಿನ ಶ್ರೀ ಬಸವೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ ಮುಡಲಗಿ ಶಾಖೆ ಗುರ್ಲಾಪೂರ ಇದರ 23ನೇ ವಾರ್ಷಿಕೋತ್ಸವ ಸಮಾರಂಭವನ್ನು ಶಾಖಾ ಕಾರ್ಯಾಲಯದಲ್ಲಿ ರವಿವಾರ ದಿ.18 ರಂದು  ಮಲ್ಲಿಕಾರ್ಜುನ ಮೋಜನಿದಾರ ಇವರು ಬಸವೇಶ್ವರ ಹಾಗೂ ಲಕ್ಷ್ಮೀ  ದೇವಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಖಾ ಸಲಹಾ ಸಮಿತಿಯ ಅಧ್ಯಕ್ಷರಾದ ಶಂಕರ ಶಿವಪ್ಪ ಮುಗಳಖೋಡ ವಹಿಸಿಕೊಂಡಿದ್ದರು ಗುರ್ಲಾಪೂರದಲ್ಲಿ ಈ ಶಾಖೆ ಆರಂಭದಿಂದ ಪ್ರಗತಿ ಪಥದಲ್ಲಿ ಸಾಗಲು ಪ್ರಧಾನ ಕಛೇರಿ ಆಡಳಿತ ಮಂಡಳಿ ಹಾಗು ಸಿಬ್ಬಂದಿ ಹಾಗೂ ಸಲಹಾ ಸಮಿತಿಯವರ ಸಹಕಾರದಿಂದ 31/3/2022ಕ್ಕೆ 52.00.0.53.ಲಾಭ ಗಳಿಸಿದೆ ಎಂದು ತಿಳಿಸಲು ಸಂತೋಷವೆನಿಸುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಸಂಘದ ಶಾಖಾ ಕಾರ್ಯದರ್ಶಿ ರಮೇಶ ಗೋಡಿಗೌಡರ ಮಾತನಾಡಿ,  ಸಂಘದಿಂದ ಸದಸ್ಯರಿಗೆ ಯಾವ ಯಾವ ಸಾಲ ಕೊಡುತ್ತೇವೆ ಎಂಬ ಬಗ್ಗೆ ಹಾಗೂ ಠೇವುಗಳ ಬಗ್ಗೆ ಸದಸ್ಯರಿಗೆ ತಿಳಿಸುತ್ತಾ 31/3/2022ಕ್ಕೆ ಸದಸ್ಯರಿಗೆ 13.ಕೊಟಿ 63.ಲಕ್ಷ ಸಾಲ ವಿತರಿಸಿದೆ ಬರುವ  ಆರ್ಥಿಕ ವರ್ಷದಲ್ಲಿ ಸಂಘದಿಂದ ಶೇರುದಾರರಿಗೆ ನೀಡುವ ಅನುಕೂಲತೆಗಳ ಬಗ್ಗೆ ಮಾತನಾಡಿದರು.

ಈ ಸಮಾರಂಭದಲ್ಲಿ ಶಾಖೆಯ ಉಪಾಧ್ಯಕ್ಷರಾದ ಕೆಂಪಣ್ಣ ಹಾಲಳ್ಳಿ. ಹಾಗೂ ಸಲಹಾ ಸಮಿತಿ ನಿರ್ದೇಶಕರಾದ ಅಶೋಕ ಗಾಣಿಗೇರ, ಶ್ರೀಶೈಲ ಮುಗಳಖೋಡ, ಸದಾನಂದ ಮುಗಳಖೋಡ, ರಾಮಪ್ಪ ನೇಮಗೌಡರ, ಅಚ್ಯುತ ಕುಲಕರ್ಣಿ, ಜಗದೀಶ ಮುಗಳೋಡ, ಸಿದ್ಲಿಂಗಪ್ಪಾ ನೇಮಗೌಡರ, ಸಿದ್ದಪ್ಪಾ ಕೌಜಲಗಿ ಹಾಗು ಸ್ಥಳೀಯ ಬಸವೇಶ್ವರ ನೀರು ಬಳಕೆದಾರರ ಸಂಘದ ನಿರ್ದೇಶಕರಾದ ಲಕ್ಷ್ಮಣ ಮರಾಠೆ, ಪಿ,ಕೆ ಪಿ ಎಸ್ ಮಾಜಿ ಅಧ್ಯಕ್ಷರು ರೇವಪ್ಪ ಸತ್ತಿಗೇರಿ, ರವಿ ಮುನ್ನೋಳ್ಳಿ, ಶಿವಾನಂದ ಅಡಗಿಮನಿ, ಶಂಕರ ಪಾಟೀಲ ಮತ್ತು  ಸದಸ್ಯರು ಹಾಗು ಸಿಬ್ಬಂದಿಯವರು ಉಪಸ್ಥತರಿದ್ದರು. ವಿಜಯ ಗಾಣಿಗೇರ ಸ್ವಾಗತಿಸಿದರು. ಶಿವಯೋಗಿ ಮೋಜನಿದಾರ ವಂದಿಸಿದರು.

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!