spot_img
spot_img

ಫೆ. 8ರಂದು ಸಿಲಿಕಾನ್ ಸಿಟಿಯಲ್ಲಿ ಕುಂದಾಪುರದ ಯಶಸ್ವಿ ಕಲಾ ವೃಂದ (ಕೊಮೆ, ತೆಕ್ಕಟ್ಟೆ) ಸಂಸ್ಥೆ ಗೆ 25 ರ ಸಂಭ್ರಮ !

Must Read

spot_img
- Advertisement -

ಫೆಬ್ರವರಿ, 8 ರಂದು ರಾಜ್ಯ ರಾಜಧಾನಿಯಲ್ಲಿ ಯಶಸ್ವೀ ಕಲೋಲ್ಲಾಸ 

ಕರಾವಳಿ ಭಾಗದ ಪ್ರತಿಷ್ಠಿತ ಸಂಸ್ಥೆ ಬೆಳ್ಳಿ ಹಬ್ಬದ ಸಡಗರವನ್ನು ೧೦೮ನೇ ಕಾರ್ಯಕ್ರಮವನ್ನು ರಾಜಧಾನಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ ೮, ಶನಿವಾರ ರಾತ್ರಿ ೯:೩೦ರಿಂದ ನೆರವೇರಿಸಿಕೊಳ್ಳುತ್ತಿದೆ. ಪ್ರಸಿದ್ಧ ಚಿತ್ರ ನಟಿ, ಶಾಸಕರಾದ ಡಾ. ಉಮಾಶ್ರೀ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಯಶಸ್ವೀ ಕಲಾವೃಂದದ ಸಾಂಪ್ರದಾಯಿಕ ಕಲಾ ಪ್ರಕಾರವಾದ ಹೂವಿನಕೋಲು, ಬಾಲಗೋಪಾಲ, ಪಾಂಡವರ ಒಡ್ಡೋಲಗ, ಕೃಷ್ಣನ ಒಡ್ಡೋಲಗ, ಗಾನ ವೈಭವ ರಂಗ ಪ್ರಸ್ತುತಿಗೊಳ್ಳಲಿದೆ. ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಪರಿಕಲ್ಪನೆಯ ‘ನವನೀತ’ ಯಕ್ಷಗಾನ ತಾಳಮದ್ದಳೆ ಮತ್ತು ಸಂದರ್ಶನ ಕಥಾನಕ ವಿಶೇಷವಾಗಿ ಪ್ರದರ್ಶನಗೊಳ್ಳುತ್ತದೆ. ಚಲನ ಚಿತ್ರದ ಮೇರು ನಟಿ ಉಮಾಶ್ರೀ ರಾಮ ಕಥಾ ಸಾರದ ಮಂಥರೆಯಾಗಿ ಪ್ರಪ್ರಥಮ ಭಾರಿಗೆ ರಂಗವೇರಲಿದ್ದಾರೆ.

- Advertisement -

ಹಿರಿಯ ಕಲಾವಿದರಾದ ರಾಧಾಕೃಷ್ಣ ಕಲ್ಚಾರ್, ಪವನ್ ಕಿರಣ್ ಕೆರೆ, ಗಣರಾಜ ಕುಂಬ್ಳೆ, ಮಹೇಶ್ ಭಟ್, ಸುಧಾ ಮಣೂರು, ಶಶಾಂಕ್ ಅರ್ನಾಡಿ ಮುಮ್ಮೇಳದಲ್ಲಿ ಸುರೇಶ್ ಶೆಟ್ಟಿ ಶಂಕರನಾರಾಯಣ, ಲಂಬೋದರ ಹೆಗಡೆ, ಭರತ್ ಚಂದನ್, ರಾಹುಲ್ ಕುಂದರ್ ಹಿಮ್ಮೇಳದಲ್ಲಿ ಭಾಗವಹಿಸಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಮಯೂರ ಗ್ರೂಪ್ ಛೇರ್ಮನ್ ಗೋಪಾಡಿ ಶ್ರೀನಿವಾಸ್ ರಾವ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೇರಂಬಳ್ಳಿ ರಾಘವೇಂದ್ರ ರಾವ್, ನಂದಗೋಕುಲದ ಟಿ.ಎನ್. ರಾಘವೇಂದ್ರ ಹತ್ವಾರ್, ಯಕ್ಷದೇಗುಲದ ಕೆ. ಮೋಹನ್, ಬಂಟರ ಸಂಘದ ಡಾ. ದೀಪಕ್ ಶೆಟ್ಟಿ, ಪವನ್ ಕಿರಣ್ ಕೆರೆ, ನಾಗರಾಜ ಶೆಟ್ಟಿ ನೈಕಂಬ್ಳಿ, ಶ್ವೇತಯಾನದ ಕಾರ್ಯಾಧ್ಯಕ್ಷರಾದ ಸುಜಯ್ ಶೆಟ್ಟಿ, ಗೋಪಾಲ ಪೂಜಾರಿ, ಸೀತಾರಾಮ ಶೆಟ್ಟಿ ಮಲ್ಯಾಡಿ, ಸುಜಯೀಂದ್ರ ಹಂದೆ ಉಪಸ್ಥಿತರಿದ್ದಾರೆ. ಈ ಕಾರ್ಯಕ್ರಮವು ಉಚಿತ ಪ್ರದರ್ಶನವಾಗಿರುತ್ತದೆ.

ತನ್ನಿಮಿತ್ತ ರವೀಂದ್ರ_ಕಲಾಕ್ಷೇತ್ರ_ಬೆಂಗಳೂರು ನಗರದಲ್ಲಿ 108 ನೇ ಕಾರ್ಯಕ್ರಮ, 25ರ ಸಂಭ್ರಮ ಯಶಸ್ವಿ ಕಾಲೋಲ್ಲಾಸ ದ ಕಾರ್ಯದರ್ಶಿ ವೆಂಕಟೇಶ್ ಉಪಾಧ್ಯ ಅವರ ಜೊತೆಗೆ ಪತ್ರಿಕೆ ಮಾತನಾಡಿದಾಗ

ಕಲಾಕ್ಷೇತ್ರ ಸದ್ದು ಗದ್ದಲಗಳಿಂದ ರಾತ್ರಿ ಹಗಲಾಗಲಿದೆ, ಬನ್ನಿ ಸಂಭ್ರಮ ದಲ್ಲಿ ಭಾಗವಹಿಸಿ ಎಂದರು.

- Advertisement -

ಅತ್ಯುತ್ತಮ ಹವ್ಯಾಸಿ ಯಕ್ಷಗಾನ ಕಲಾವಿದ, ಸಂಘಟಕ, ಯಕ್ಷಗಾನ ಸ್ಮರಣಿಕೆಗಳ ತಯಾರಕ ವೆಂಕಟೇಶ ವೈದ್ಯ ಕಲಾಸಾಧಕ, ಪರೋಪಕಾರಿ ಪ್ರವೃತಿಯ ಕಲಾಪೋಷಕ. ಕುಂದಾಪುರ ತಾಲೂಕು ತೆಕ್ಕಟ್ಟೆ ಕೊಮೆಯಲ್ಲಿ ಸಮಾನ ಮನಸ್ಕ ಸ್ನೇಹಿತರೊಂದಿಗೆ ಯಶಸ್ವಿ ಕಲಾವೃಂದ ಸ್ಥಾಪಿಸಿ ನಿರಂತರ ಕಲಾಚಟುವಟಿಕೆ ನಡೆಸುತ್ತಿರುವ ಕಲಾಸೇವಕ –
ಪತ್ರಿಕೆ ಯೊಂದಿಗೆ ವೆಂಕಟೇಶ್ ವೈದ್ಯರ ಮನದಾಳದ ಮಾತುಗಳು

ಪತ್ರಿಕೆ : ಫೆಬ್ರವರಿ 8ರ ಕಾರ್ಯಕ್ರಮ?                  ವೆಂಕಟೇಶ್ ವೈದ್ಯ : ರಾತ್ರಿ 9:30 ರಿಂದ ಕಾರ್ಯಕ್ರಮ ಆರಂಭ.

* ಹೂವಿನಕೋಲು
* ಯಕ್ಷಗಾನ ಬಾಲಗೋಪಾಲ
* ಪೂರ್ವ ರಂಗದ ಒಡ್ಡೋಲಗ
* ಸಭಾಕಾರ್ಯಕ್ರಮ
* *ನವನೀತ* ಪ್ರಸಾದ್ ಕುಮಾರ್ ಮೊಗೆಬೆಟ್ಟು ಪರಿಕಲ್ಪನೆಯ ಪವನ್ ಕಿರಣ್ ಕೆರೆ ನಿರ್ದೇಶನದಲ್ಲಿ ಪಾತ್ರ ಸಂದರ್ಶನದೊಂದಿಗೆ ತಾಳಮದ್ದಳೆ.

ಪತ್ರಿಕೆ : ಸಂಸ್ಥೆಯ ಸ್ಥಾಪಕ ಅಧ್ಯಕ್ಷರು?
ವೆಂಕಟೇಶ್ ವೈದ್ಯ : ವಿಶ್ವನಾಥ ಹಂದೆ                          ಪತ್ರಿಕೆ : ಸಂಸ್ಥೆಯ ಲ್ಲಿ ಇರುವ ಸದಸ್ಯರ ಸಂಖ್ಯೆ?      ವೆಂಕಟೇಶ್ ವೈದ್ಯ : 120                                           ಪತ್ರಿಕೆ : ಸಂಸ್ಥೆಯ ಹಾಲಿ ಅಧ್ಯಕ್ಷರು?                      ವೆಂಕಟೇಶ್ ವೈದ್ಯ : ಸೀತಾರಾಮ ಶೆಟ್ಟಿ ಮಲ್ಯಾಡಿ

ಪತ್ರಿಕೆ : ಸಂಸ್ಥೆಯಲ್ಲಿ ನಿಮ್ಮ ಪಾತ್ರ?
ವೆಂಕಟೇಶ್ ವೈದ್ಯ : ಕಾರ್ಯದರ್ಶಿ                               ಪತ್ರಿಕೆ : ಸಂಸ್ಥೆ ಯ ಬಗ್ಗೆ ನಾಲ್ಕು ಮಾತು

ವೆಂಕಟೇಶ್ ವೈದ್ಯ :
1999ರಲ್ಲಿ ಸಮಾನ ಮನಸ್ಸಿನ ನಾಲ್ಕಾರು ಮಂದಿ ಸೇರಿ ಕರಾವಳಿಯ ಶ್ರೀಮಂತ ಕಲೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ನಿಶ್ಚಯಿಸಿ ಯಕ್ಷಗಾನ ಕಲಿಕೆಗೆ ತೊಡಗಿಕೊಂಡೆವು. ಬಳಿಕ ವರ್ಷಕ್ಕೊಮ್ಮೆ ವಾರ್ಷಿಕೋತ್ಸವ ನೆಪದಲ್ಲಿ ಯಕ್ಷಗಾನ. ಅದಲ್ಲದೇ ಸ್ಥಳೀಯವಾಗಿ ಅನೇಕ ಸಾಮಾಜಿಕ ಕಾರ್ಯಗಳನ್ನು(ಸ್ವಚ್ಚತೆ, ರಸ್ತೆ ರಿಪೇರಿ ಹೀಗೆ) ಮಾಡುತ್ತಾ ಬಂದೆವು.

ಪತ್ರಿಕೆ : ದಶಮಾನೋತ್ಸವ ?
ವೆಂಕಟೇಶ್ ವೈದ್ಯ :
ದಶಮಾನೋತ್ಸವದಲ್ಲಿ ಸಮಾಜದಿಂದ ಮರೆಯಾದ ಅನೇಕ ಕಲಾ ಪ್ರಕಾರವನ್ನು ಪುನರುಜ್ಜೀವನಗೊಳಿಸುವಲ್ಲಿ ತಿಂಗಳಿಗೊಂದರಂತೆ ದೊಂದಿ ಬೆಳಕಿನ ಯಕ್ಷಗಾನ, ಅಟ್ಟಣಿಗೆ ಯಕ್ಷಗಾನ, ದೀವಟಿಗೆ ಯಕ್ಷಗಾನ, ಹೂವಿನಕೋಲು, ಜೋಡಾಟ ಹೀಗೆ ಕಾರ್ಯಕ್ರಮ ನೆರವೇರಿಸಿಕೊಂಡು ಯಶಸ್ಸು ಪಡೆದೆವು.

ಪತ್ರಿಕೆ : ಸ್ಥಳೀಯರಿಗೆ ಸಂಸ್ಥೆಯಿಂದ?
ವೆಂಕಟೇಶ್ ವೈದ್ಯ :ಚಿತ್ರಕಲೆ, ಭರತನಾಟ್ಯ, ಸಂಗೀತ, ಯಕ್ಷಗಾನದ ಭಾಗವತಿಗೆ, ಚಂಡೆ ಮದ್ದಲೆ ಭಾಗವತಿಗೆ ತರಗತಿ, ಕರಾಟೆ ತರಗತಿ ಹೀಗೆ ಸ್ಥಳೀಯರಿಗೆ ಉಪಯೋಗವಾಗಲಿ ಎನ್ನುವ ಕಾರಣಕ್ಕಾಗಿ ಅನೇಕ ತರಗತಿಗಳನ್ನು ನಡೆಸಿಕೊಂಡು ಸಂಸ್ಥೆ ತಾನೇ ಕಲಿಸಿದ ಅನೇಕ ಶಿಷ್ಯರನ್ನು ಮಡಿಲಲ್ಲಿರಿಸಿಕೊಂಡಿದೆ.

ಪ್ರಶ್ನೆ : ಸಂಸ್ಥೆ ಗುರುಗಳು ?
ವೆಂಕಟೇಶ್ ವೈದ್ಯ : ಇದೀಗ 25ರ ಸಂಭ್ರಮ. ಸೀತಾರಾಮ ಶೆಟ್ಟಿ ಕೊಯಿಕೂರು ಗುರುತನದಲ್ಲಿ ಸಾಗಿ ಬಂದ ಸಂಸ್ಥೆಗೆ ಈಗ ಪ್ರಸ್ತುತ ಅನೇಕ ಗುರುಗಳು. ಕೂಡ್ಲಿ ದೇವದಾಸ್ ರಾವ್, ಲಂಬೋದರ ಹೆಗಡೆ ನಿಟ್ಟೂರು, ಶಾರದಾ ಹೊಳ್ಳ, ಗಿರೀಶ್ ವಕ್ವಾಡಿ, ಅಮೃತಾ ಉಪಾಧ್ಯ, ವಿ. ಸುಂದರಂ, ಕೃಷ್ಣಯ್ಯ ಆಚಾರ್ ಇನ್ನಿತರರು.

ಪ್ರಶ್ನೆ : 25ನೇ ವರ್ಷಾಚರಣೆ ?
ವೆಂಕಟೇಶ್ ವೈದ್ಯ :25ನೇ ವರ್ಷಾಚರಣೆ 2024ರ ಫೆಬ್ರವರಿ 18ರಂದು ಉದ್ಘಾಟನೆಗೊಂಡು 108 ಕಾರ್ಯಕ್ರಮದ ಸಂಕಲ್ಪ ಹೊಂದಿ ಈಗಾಗಲೇ 105 ಕಾರ್ಯಕ್ರಮ ನೆರವೇರಿಸಿಕೊಂಡಿತ್ತು.ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಸಮಾರೋಪಗೊಳ್ಳುವಾಗ 125 ಕಾರ್ಯಕ್ರಮ ದಾಟಬಹುದು ಎಂದು ಅಂದಾಜಿಸಲಾಗಿದೆ.

ಪತ್ರಿಕೆ : *ಹೂವಿನಕೋಲು*?                              ವೆಂಕಟೇಶ್ ವೈದ್ಯ :ಇದೊಂದು ಕರಾವಳಿಯ ಪ್ರಾಚೀನ ಕಲೆ. ಯಕ್ಷಗಾನವನ್ನು ಆರಾಧಿಸುವ ಕರಾವಳಿಗರು ಮಳೆಗಾಲದಲ್ಲಿ ನವರಾತ್ರಿಯ ಸಂದರ್ಭಗಳಲ್ಲಿ ಭಾಗವತರು ಮದ್ದಳೆಗಾರರೊಂದಿಗೆ ಎರಡು ಮಕ್ಕಳನ್ನು ಪೌರಾಣಿಕ ಪ್ರಸಂಗದ ಅರ್ಥಕ್ಕೆ ಸಿದ್ಧಗೊಳಿಸಿ, ಕಲೆಯ ಮನಸ್ಸುಳ್ಳ ಮನೆಗಳಿಗೆ ಕರೆದೊಯ್ದು ಇಪ್ಪತ್ತು ನಿಮಿಷ ಕಾರ್ಯಕ್ರಮ ನೀಡಿ ಇನ್ನೊಂದು ಮನೆಗೆ ತೆರಳುವುದು ಸಂಪ್ರದಾಯ. ಮಕ್ಕಳು ಮನೆಯ ಮನಗಳಿಗೆ ಶುಭ ಹಾರೈಸುವ ನವರಾತ್ರಿ ಚೌಪದಿಯನ್ನು ಹಾಡಿ, ಪ್ರಸಂಗದ ಎರಡು ಪಾತ್ರದ ಕಥಾ ಭಾಗವನ್ನು ಪ್ರಸ್ತುತ ಪಡಿಸಿ, ಕೊನೆಗೊಂದು ಕೋಲಾಟ ಮಾಡಿ ಬರುವುದು ಪದ್ಧತಿ. ಇತ್ತೀಚೆಗೆ ಈ ಕಲೆ ಅಳಿದ ಸಂದರ್ಭದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಸ್ಥೆ ಕಳೆದ ಹದಿನೈದು ವರ್ಷಗಳಿಂದ ಕರಾವಳಿಯಲ್ಲಿ ನವರಾತ್ರಿಯ ಸಮಯದಲ್ಲಿ ಆಯ್ದ ಮನೆಗಳಿಗೆ ಭೇಟಿ ನೀಡಿ ಅಭಿಯಾನದ ರೂಪದಲ್ಲಿ ನಡೆಸಿಕೊಂಡು ಬರುತ್ತಿದೆ. ಈ ವರ್ಷ ಸಂಸ್ಥೆಗೆ 25ರ ಸಂಭ್ರಮ.

ಪ್ರಶ್ನೆ : ಕಾರ್ಯಕ್ರಮ ಕ್ಕೆ ವಿಶೇಷ ರೀತಿಯಲ್ಲಿ ಅಹ್ವಾನ?ವೆಂಕಟೇಶ ವೈದ್ಯ :ಫೆಬ್ರವರಿ 8, ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ವರ್ಷದ 108ನೇ ಕಾರ್ಯಕ್ರಮದ ಪ್ರಯುಕ್ತ ಬೆಂಗಳೂರಿನ ಕೆಲವು ಗಣ್ಯರ ಮನೆಯಲ್ಲಿ, ಉದ್ಯಮದಲ್ಲಿ ಹೂವಿನಕೋಲು ಕಾರ್ಯಕ್ರಮ ನೀಡಿ ಕಾರ್ಯಕ್ರಮ ಆಹ್ವಾನವಿತ್ತು ಬಂದಿರುವುದು ಒಂದು ವಿಭಿನ್ನ ಕಾರ್ಯಕ್ರಮವಾಗಿತ್ತು. ಬೆಂಗಳೂರಿನ ಪ್ರಸಿದ್ಧರು ಸ್ವಾಗತಿಸಿ ಪ್ರೋತ್ಸಾಹಿಸಿದ್ದು ಅವಿಸ್ಮರಣೀಯ !!

ಹೆಚ್ಚಿನ ಮಾಹಿತಿಗೆ ಸಂಪರ್ಕ: ವೆಂಕಟೇಶ ವೈದ್ಯ : ಕಾರ್ಯದರ್ಶಿ ೯೯೪೫೯೪೭೭೭೧.
+919945947771

ಸಂದರ್ಶನ : ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

ಅಗತ್ಯ ದಾಖಲಾತಿಗಳನ್ನು ನೀಡಿ ಇ- ಆಸ್ತಿ ದಾಖಲಿಸಿಕೊಳ್ಳಿ-ತುಕಾರಾಮ ಮಾದರ

ಮೂಡಲಗಿ - ಪಟ್ಟಣದ ಪುರಸಭೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ೨೦೨೪-೨೫ ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು...
- Advertisement -

More Articles Like This

- Advertisement -
close
error: Content is protected !!
Join WhatsApp Group