spot_img
spot_img

30ಕೋಟಿ ವೆಚ್ಚದಲ್ಲಿ ಘಟಪ್ರಭಾದಲ್ಲಿ ರೈಲ್ವೆ ಮೆಲ್ಸೇತುವೆ

Must Read

ಘಟಪ್ರಭಾ: ಸಾರ್ವಜನಿಕ ಹಾಗೂ ರೈತರ ಅನುಕೂಲಕ್ಕಾಗಿ ಇಲ್ಲಿನ ರೈಲ್ವೆ ನಿಲ್ದಾಣದ ಹತ್ತಿರ 30ಕೋಟಿ ವೆಚ್ಚದಲ್ಲಿ ರೈಲ್ವೆ ಮೆಲ್ಸೇತುವೆಯನ್ನು ನಿರ್ಮಾಣ ಮಾಡುವುದಾಗಿ ರಾಜ್ಯಸಭಾ ಸದಸ್ಯ ಹಾಗೂ ನೈರುತ್ಯ ಸಲಹಾ ಸಮಿತಿಯ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಅವರು ಇಂದು ರೈಲ್ವೆ ಅಧಿಕಾರಿಗಳೊಂದಿಗೆ ಘಟಪ್ರಭಾ ರೈಲ್ವೆ ನಿಲ್ದಾಣದ ಹತ್ತಿರ ರೈಲ್ವೆ ಮೆಲ್ಸೇತುವೆ ನಿರ್ಮಾಣದ ಸ್ಥಳ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಾರ್ಚ್- ಎಪ್ರಿಲ್‍ನಲ್ಲಿ ಕಾಮಗಾರಿ ಪ್ರಾರಂಭವಾಗಲಿದ್ದು ಅದರಿಂದ ಮಲ್ಲಾಪೂರ ಭಾಗದ ಸಾರ್ವಜನಿಕರಿಗೆ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ತುಂಬಾ ಅನುಕೂಲವಾಗುತ್ತದೆ ಅಲ್ಲದೆ ಇಲ್ಲಿನ ನಿಲ್ದಾಣದ  ಹತ್ತಿರ ಅಂಡರ್ ಬ್ರಿಡ್ಜ್ ಮಾಡಿಸಲು ಸಾರ್ವಜನಿಕರು ಕೇಳಿದ್ದು ಅದರ ಬಗ್ಗೇನೂ ಪರಿಶೀಲನೆ  ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಅಲ್ಲದೆ ಇಲ್ಲಿನ ಬಸವನಗರ ಹತ್ತಿರ ರೈಲ್ವೆ ಡಬ್ಬಲ್ ಟ್ರಾಕ್ ಆದ ನಂತರ ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗಿರುವ ಕಾರಣ ಅದನ್ನು ಸಹ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಪಾಶ್ಚಾಪೂರ, ಪರಕನಟ್ಟಿ, ಕೊಣ್ಣೂರು ರೈಲ್ವೆ ನಿಲ್ದಾಣದ ಹತ್ತಿರ ಅಂಡರ್ ಬ್ರಿಡ್ಜ್ ನಲ್ಲಿ ನೀರು ನಿಲ್ಲುತ್ತಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಸರಿಪಡಿಸಲು ಸೂಚಿಸಲಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ರಾಜ್ಯ ಅಂಗವಿಕಲ ಅಭಿವೃದ್ಧಿ ನಿಗಮದ ಅಧ್ಯಕ್ಷಾಗಿರುವ ಮಾರುತಿ ಅಸ್ಟಗಿ, ನೈರುತ್ಯ ರೈಲ್ವೆ ಮುಖ್ಯ ಇಂಜಿನೀಯರ್ ಪ್ರೇಮ ನಾರಾಯಣ, ಸಹಾಯಕ ಇಂಜಿನೀಯರ ಸೋಮನಾಥ ಶಿಂಧೆ, ನಂದಕುಮಾರ ಹಾಗೂ ಸ್ಥಳೀಯ ಮುಖಂಡರಾದ ರಾಮಣ್ಣ ಹುಕ್ಕೇರಿ, ಪರಶುರಾಮ ಕಲಕುಟಗಿ, ಕಾಶಪ್ಪ ರಾಜನ್ನವರ, ಪರಪ್ಪ ಗಿರಿಯನ್ನವರ, ಅಶೋಕ ನಾಯಿಕ, ಮಲ್ಲಪ್ಪ ಹುಕ್ಕೇರಿ, ಮಾರುತಿ ವಂಜೇರಿ ಹಾಗೂ ರೈಲ್ವೆ ಸಿಬ್ಬಂದಿ ಹಾಜರಿದ್ದರು.

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!