spot_img
spot_img

ಲೋಕ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ 3715 ಪ್ರಕರಣ ಇತ್ಯರ್ಥ

Must Read

spot_img
- Advertisement -

ಸಿಂದಗಿ: ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ನ್ಯಾಯಾಲಯಗಳ ಸಂಕೀರ್ಣ ಸಿಂದಗಿಯಲ್ಲಿ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು. ಸದರಿ ಲೋಕ ಅದಾಲತ್ ನಲ್ಲಿ ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಒಟ್ಟು 6632 ಬಾಕಿ ಇರುವ ಪ್ರಕರಣಗಳಲ್ಲಿ 4270 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು

ಸದರಿ ಪ್ರಕರಣಗಳಲ್ಲಿ ಒಟ್ಟು 3715 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣ ಗಳು, ಮೆಂಟೇನೆನ್ಸ್ ಪ್ರಕರಣಗಳು , ಪಾಲು ವಾಟ್ನಿ ದಾವೆಗಳು, ಎಲ್ ಎ ಸಿ ಇಪಿ ಪ್ರಕರಣಗಳು , ಎಮ್ ವಿ ಸಿ, ಇ ಪಿ ಪ್ರಕರಣಗಳು , ಅಪರಾಧ ದಂಡ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಮತ್ತು ಪೂರ್ವದಾವೆ (PLC Cases) ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್ ಪ್ರಕರಣಗಳು, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು ಹಾಗೂ ಬ್ಯಾಂಕಿನ ಪ್ರಕರಣಗಳು, ಒಟ್ಟು ಸೇರಿ. 1234 ಪ್ರಕರಣಗಳಲ್ಲಿ 1234 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ.

ಸದರಿ ಮೇಲ್ಕಾಣಿಸಿದ ಪ್ರಕರಣಗಳನ್ನು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ನಾಗೇಶ ಕೆ ಮೊಗೇರ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಹರೀಶ ಜಾಧವ ಮತ್ತು ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರಾದ ಎ ಆರ್ ಎ ಮುಲ್ಲಾ ಇವರುಗಳು ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಿರುತ್ತಾರೆ.

- Advertisement -

ಸದರಿ ಲೋಕ ಅದಾಲತ್ ನಲ್ಲಿ ನ್ಯಾಯಾಂಗ ಸಂಧಾನಕಾರರಾಗಿ ಆಯ್ ಎಸ್ ಹಿರೇಮಠ ಹಾಗೂ ಎಸ್ ಎಸ್ ಕಕ್ಕಳಮೇಲಿ , ಸಿ ಎಮ್ ಸೂರ್ಯವಂಶಿ ವಕೀಲರುಗಳು, ಹಾಗೂ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್ ಬಿ ಪಾಟೀಲ ಮತ್ತು ಅಪರ ಸರ್ಕಾರಿ ವಕೀಲರಾದ ಬಿ.ಜಿ.ನೆಲ್ಲಗಿ , ಸಹಾಯಕ ಅಭಿಯೋಜಕರಾದ ಆನಂದ ರಾಠೋಡ, ಕುಮಾರಿ ಎಫ್ ಝ ಖತೀಬ, ಕುಮಾರಿ ಎಮ್ ಎಸ್ ಗೊಳಸಂಗಿಮಠ ಮತ್ತು ನ್ಯಾಯವಾದಿಗಳಾದ ಆರ್ ಆಯ್ ಮೊಗಲಾಯಿ ಎ.ಕೆ. ಕನ್ನೂರ, ಎಸ್. ಎಸ್. ಸಿಂಗಾಡಿ ವಿ. ಜಿ. ಚಾವರ, ಆರ್. ಎಮ್ ಚೌರ ಮತ್ತು ಶಿರಸ್ತೇದಾರರಾದ  ಸಿದ್ದಲಿಂಗ ಬಳೊಂದಾಗಿ ಮತ್ತು ನಜೀರ ಮಾಲಿಕಾರ ಎಲ್ಲ ನ್ಯಾಯವಾದಿಗಳು ನ್ಯಾಯಾಲಯದ ಎಲ್ಲ ಸಿಬ್ಬಂದಿಗಳು ಭಾಗವಹಿಸಿದ್ದರು .

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group