ಲಕ್ಷ್ಮೇಶ್ವರ – ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶ್ರೀ ಮದ್ ರಂಭಾಪುರಿ ಶಾಖಾ ಮುಕ್ತಿ ಮಂದಿರ ಕ್ಷೇತ್ರದಲ್ಲಿ ಶ್ರೀ ಮದ್ ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ
ಲಿಂಗೈಕ್ಯ ಶ್ರೀಮದ್ ರಂಭಾಪುರಿ ಲಿಂ. ವೀರಗಂಗಾಧರ ಜಗದ್ಗುರುಗಳ 43ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭ ಜರುಗಿತು.
ಮುಕ್ತಿಮಂದಿರ ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ಷ.ಬ್ರ. ವಿಮಲರೇಣುಕ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮಿಗಳವರ ನೇತೃತ್ವದಲ್ಲಿ ಬಾಗಲಕೋಟೆಯ ಪರಿಶ್ರಮ ವಾರ್ತೆ ಕನ್ನಡ ದಿನ ಪತ್ರಿಕೆಯ ಹನ್ನೊಂದರ ಸಂಭ್ರಮ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ರಂಭಾಪುರಿ ದಸರೆ – 2025 ವಿಶೇಷ ಸಂಚಿಯನ್ನು ಜಪದಕಟ್ಟಿ, ಮೈಸೂರು ಪೂಜ್ಯರು ವಿಶೇಷ ಸಂಚಿಯನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಧರ್ಮಾಭಿಮಾನಿಗಳು ಗಣ್ಯರು ಮುಖಂಡರು ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪರಿಶ್ರಮ ವಾರ್ತೆ ಕನ್ನಡ ದಿನ ಪತ್ರಿಕೆಯ ಸಂಪಾದಕರಾದ ವೀರೇಶ ಹಿರೇಮಠರವರಿಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳವರು ಶುಭ ಹಾರೈಸಿ ಆಶೀರ್ವದಿಸಿದರು.

