spot_img
spot_img

ಗುಜರಾತ ವಾಪಿ ಕನ್ನಡ ಸಂಘದ 45 ನೇ ವಾರ್ಷಿಕೋತ್ಸವ

Must Read

spot_img
- Advertisement -

ಗುಜರಾತನಲ್ಲಿರುವ ವಾಪಿ ಕನ್ನಡ ಸಂಘವು ಫೆಬ್ರುವರಿ 15ರಂದು ಸಾಯಂಕಾಲ ಐದು ಘಂಟೆಗೆ ಅಧ್ಯಕ್ಷೆ -ನಿಶಾ ಶೆಟ್ಟಿ, ಗೌರವ ಕಾರ್ಯದರ್ಶಿ – ವಿದ್ಯಾಧರ ಭಟ್,  ಮಹಿಳಾ ಮುಖ್ಯಸ್ಥೆ – ಚಂದ್ರಿಕಾ ಕೋಟ್ಯಾನ, ಕಾರ್ಯಾಧ್ಯಕ್ಷರು -ಲಲಿತಾ ಕಾರಂತ, ವಿಶ್ವಸ್ಥರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ 45 ನೆಯ ವಾರ್ಷಿಕೋತ್ಸವದ ಸಮಾರಂಭವನ್ನು ಹಮ್ಮಿಕೊಂಡಿದೆ.

ಸಮಾರಂಭದ ಘನ ಅಧ್ಯಕ್ಷತೆಯನ್ನು ಕನ್ನಡ ನಾಡು -ನುಡಿಗೆ, ಶರಣ ತತ್ವ ಪ್ರಚಾರಕ್ಕೆ ಹಗಲಿರುಳು ದುಡಿಯುತ್ತಿರುವ ಕವಿಗಳು , ಲೇಖಕರು , ವಿಮರ್ಶಕರು , ಚಿಂತಕರು, ಉಪನ್ಯಾಸಕರಾದ ಡಾ. ಶಶಿಕಾಂತ ಪಟ್ಟಣ -ಅಧ್ಯಕ್ಷರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ ಇವರು ವಹಿಸಿಕೊಳ್ಳಲಿದ್ದಾರೆ.

ಈ ಮೂಲಕ ಬಸವತತ್ವ ಮತ್ತು ಕನ್ನಡನಾಡು -ನುಡಿಯ ಮಹತ್ವವನ್ನು ಗುಜರಾತನಲ್ಲಿರುವ ಕನ್ನಡಿಗರಿಗೆ ಉಣಬಡಿಸಲು ಹೊರಟಿದ್ದಾರೆ. ಅಕ್ಕನ ಅರಿವು ಮತ್ತು ವಚನ ಅಧ್ಯಯನ ವೇದಿಕೆಯ ಎಲ್ಲ ಆಜೀವ ಸದಸ್ಯರು, ದತ್ತಿ ದಾಸೋಹಿಗಳು, ವಿಶ್ವಸ್ಥರಾದ ಪ್ರೊ. ಶಾರದಾ ಪಾಟೀಲ್, ಶರಣ ಶಿವಾನಂದ ಕಲಕೇರಿ, ಡಾ. ಉಮಾಕಾಂತ ಶೇಟ್ಕರ ಮತ್ತು ಸುಧಾ ಪಾಟೀಲ್ ಅವರು ಡಾ. ಶಶಿಕಾಂತ ಪಟ್ಟಣ ಅವರಿಗೆ ಶುಭವನ್ನು ಕೋರಿದ್ದಾರೆ

- Advertisement -
- Advertisement -

Latest News

ಮಹಿಳೆಯರು ಒಳ್ಳೆಯ ಗೃಹಿಣಿಯಾಗುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ – ಶಾಸಕ ವಿಶ್ವಾಸ ವೈದ್ಯ

ಸವದತ್ತಿ : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದು ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಅವರು ಮುಂದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group