ಮೈಸೂರಿನಲ್ಲಿ ನ್ಯಾಯಾಮೃತಂ ಕಲ್ಚರಲ್ ಹೆರಿಟೇಜ್ ಮತ್ತು ಎಜುಕೇಷನಲ್ ಫೌಂಡೇಶನ್ (ರಿ) ಟ್ರಸ್ಟ್ ವತಿಯಿಂದ ಶ್ರೀ ವ್ಯಾಸರಾಜ ಗುರುಸಾರ್ವಭೌಮರ 482ನೇ ಆರಾಧನಾ ಮಹೋತ್ಸವ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಮೈಸೂರಿನ ನ್ಯಾಯಾಮೃತಂ ಕಲ್ಚರಲ್ ಹೆರಿಟೇಜ್ ಮತ್ತು ಎಜುಕೇಷನಲ್ ಫೌಂಡೇಶನ್ (ರಿ) ಟ್ರಸ್ಟ್ ವತಿಯಿಂದ ಶ್ರೀ ಶ್ರೀವ್ಯಾಸರಾಜ ಗುರುಸಾರ್ವಭೌಮರ 482ನೇ ಆರಾಧನಾ ಮಹೋತ್ಸವನ್ನು ಮೈಸೂರಿನ ಶ್ರೀನಗರ ಬಡಾವಣೆಯ ಶ್ರೀನಗರ ಕ್ಷೇಮಾಭಿವೃದ್ಧಿ ಸಂಘದ ಹತ್ತಿರದಲ್ಲಿ ಆಯೋಜಿಸಿತ್ತು.

ಶ್ರೀ ಶ್ರೀವಿದ್ಯಾಮನೋಹರ ತೀರ್ಥರು 40ನೇ ಪೀಠಾಧಿಪತಿಗಳು, ಶ್ರೀವ್ಯಾಸರಾಜ ಮಠ (ಸೋಸಲೆ) ಹಾಗೂ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ತಂಬಿಹಳ್ಳಿ ಶ್ರೀ ಮಾಧವತೀರ್ಥರ ಶ್ರೀಮಠ ಶ್ರೀ ವಿದ್ಯಾಸಾಗರ ಮಾಧವತೀರ್ಥರ ಕರಕಮಲ ಸಂಜಾತರಾದ ಶ್ರೀ ವಿದ್ಯಾಸಿಂಧು ಮಾಧವತೀರ್ಥರು (ಕಿರಿಯಪಟ್ಟ) ಉಭಯ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಪೂಜಾ ಕೈಂಕರ್ಯಗಳು, ಪಂಡಿತರ ಪ್ರವಚನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ವೈಷ್ಣವ ವೇದಾಂತದ ಮಹಾ ವಿಭೂತಿಗಳಲ್ಲಿ ಶ್ರೀ ವ್ಯಾಸರಾಜರೂ ಒಬ್ಬರು. ದ್ವೈತ ವೇದಾಂತದ ಮುನಿತ್ರಯರಲ್ಲಿ ಒಬ್ಬರೆನ್ನಿಸಿರುವುದು ಇವರ ವೈಶಿಷ್ಟ್ಯ ಶ್ರೀಕೃಷ್ಣದೇವರಾಯ ಮೊದಲಾದ ಚಕ್ರವರ್ತಿಗಳಿಂದ ವಂದ್ಯವಾದ ಉನ್ನತ ತಪಃಶಕ್ತಿ, ಎಂತಹ ಪ್ರತಿವಾದಿಯನ್ನೂ ಮಣಿಸುವ ಅಪ್ರತಿಮವಾದ ಕೌಶಲ. ವಿವಿಧ ಶಾಸ್ತ್ರಗಳಲ್ಲಿನ ತಲಸ್ಪರ್ಶಿಯಾದ ಪಾಂಡಿತ್ಯ, ಶ್ರೀ ವಾದಿರಾಜ ವಿಜಯೀಂದ್ರಂತಹ ಅಪೂರ್ವಶಿಷ್ಯ , ಕುಹಯೋಗದಂತಹ ಅನಿಷ್ಠವನ್ನು ಜಯಿಸಿದ ಆಧ್ಯಾತ್ಮಿಕ ಶ್ರೀಮಂತಿಕೆ, ಮಧ್ಯ ಸಿದ್ಧಾಂತ ನರಸಿಂಹನ ನೇತ್ರತ್ರಯಗಳೆಂದು ಖ್ಯಾತವಾಗಿರುವ ವ್ಯಾಸತ್ರಯಗಳಂತಹ ಉದ್ಗ್ರಂಥಗಳ ರಚನೆ, ಶ್ರೀ ಕನಕದಾಸರಂತಹ ವರ್ಣೇತರರಲ್ಲಿಯ ಗುಣಗಳನ್ನು ಗುರುತಿಸಿ ಮನ್ನಿಸುವ ವಿಶಾಲ ಮನೋಭಾವ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಇಂದೂ ಧಾರ್ಮಿಕ ಸ್ಫೂರ್ತಿ ಕೇಂದ್ರಗಳೆನ್ನಿಸಿರುವ ಪ್ರಾಣಪ್ರತೀಕಗಳ ಪ್ರತಿಷ್ಠಾಪನೆ, ಜನಸಾಮಾನ್ಯರಲ್ಲಿಯೂ ಸಿದ್ಧಾಂತ ತತ್ವಗಳನ್ನು ಪ್ರಚುರಪಡಿಸಲೆಂದು ಕನ್ನಡದಲ್ಲಿ ನೂರಾರು ಕೀರ್ತನೆ, ಸುಳಾದಿ ಉಗಾಭೋಗಗಳ ರಚನೆ, ಶ್ರೀ ಪುರಂದರದಾಸರಂತಹ ಮಹನೀಯರನ್ನು ಹರಿದಾಸಕೂಟದ ಪ್ರಥಮಾಧ್ಯಕ್ಷರನ್ನಾಗಿ ಪ್ರತಿಷ್ಠಾಪಿಸಿದ ಔಚಿತ್ಯಪ್ರಜ್ಞೆ, ಮೊದಲಾದ ಅನೇಕ ಕಾರಣಗಳಿಂದಾಗಿ ಶ್ರೀ ವ್ಯಾಸರಾಜರ ಸ್ಥಾನ ತುಂಬಾ ವೈಶಿಷ್ಟ್ಯಪೂರ್ಣವಾಗಿದೆ. ಶ್ರೀ ಮಧ್ವ, ಜಯತೀರ್ಥರ ಅನಂತರ ಬಹುಮುಖ ಸಾಧನಗೈದ ಮಹಾಪುರುಷರು ಎಂಬುದು ಇವರ ಹಿರಿಮೆ. ಎಂದು ಶ್ರೀ ಶ್ರೀವಿದ್ಯಾಮನೋಹರ ತೀರ್ಥರು 40ನೇ ಪೀಠಾಧಿಪತಿಗಳು, ಶ್ರೀವ್ಯಾಸರಾಜ ಮಠ (ಸೋಸಲೆ) ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

ಮೈಸೂರಿನ ವಿದ್ವಾಂಸ ಪ್ರಭಂಜನ ಭಾರದ್ವಾಜ್. ಎಸ್ ರವರಿಗೆ ‘ವಿದ್ಯಾನಿಧಿ’ ಮತ್ತು ಬೆಂಗಳೂರಿನ ಸಂಸ್ಕøತಿ ಚಿಂತಕ – ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಇವರಿಗೆ ಧರ್ಮ ಪ್ರಚಾರಕ ಪಯೋನಿಧಿ’ ವಿದ್ವಾನ್ ಬಿ.ಆರ್. ಶ್ರೀನಿಧಿ ಆಚಾರ್ಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮತ್ತು ‘ಸಂಗೀತ ಪ್ರಸನ್ನ’ ಪ್ರಶಸ್ತಿ ಪ್ರದಾನ ಮಧ್ಯಾರಾಧನೆಯ ಕಾರ್ಯಕ್ರಮ ವಿದ್ವಾನ್ ಶ್ರೀ ಸತ್ಯನಾರಾಣಾಚಾರ್ಯರು, ಬಳ್ಳಾರಿ, ‘ಶ್ರೀ ವ್ಯಾಸರಾಜರ ಅವತಾರ ಮಹಿಮೆ’ ಮಧ್ವ ವೇದಾಂತ ವಾರಿಧಿ’ – ವಿದ್ವಾನ್ ಶ್ರೀಕಲ್ಲಾಪುರ ಪವಮಾನಾಚಾರ್ಯರಿಂದ ‘ಶ್ರೀವ್ಯಾಸರಾಜರ ವೈಭವ’ ‘ ವ್ಯಾಸ ದಾಸ ಪ್ರವಚನ ರತ್ನಾಕರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು , ವಿದ್ವಾನ್ ಸಮೀರ್ ಆಚಾರ್ , ಪರಗಿ ಭಾರತೀರಮಣಾಚಾರ್ಯ , ನಾರಾಯಣ ದೇಸಾಯಿ ಉಪಸ್ಥಿತರಿದ್ದರು .

ವಿವರಗಳಿಗೆ : 92420 13392, 91082 59809

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!