spot_img
spot_img

ವಿಶ್ವಕರ್ಮ ಯುವಬರಹಗಾರರ ಹಾಗೂ ಸಂಶೋಧಕರ 4ನೇ ಸಮಾವೇಶಕ್ಕೆ ಚಾಲನೆ

Must Read

ಸಿಂದಗಿ: ವಿಶ್ವಕರ್ಮ ಸಮಾಜದವರು ಎಲ್ಲ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಕಮ್ಮಾರ, ಶಿಲ್ಪಕಾರರು, ಬಡಿಗತನ ಹೀಗೆ ಹಲವು ಬಗೆಗಳಲ್ಲಿ ಕರಕುಶಲ ಕರ್ಮಿಗಳಾಗಿ ಕಾರ್ಯನಿರ್ವಹಿಸುತ್ತಾರೆ ಆದರೆ ಸಮಾಜಮುಖಿಯಾಗಿ ಅವರು ಮುಖ್ಯವಾಹಿನಿಗೆ ಬರುತ್ತಿಲ್ಲ. ಅವರನ್ನು ಗುರುತಿಸುವ ಕಾರ್ಯ ನಡೆಸಿದ ಯುವ ಬರಹಗಾರರ ವೇದಿಕೆಗೆ ಕಾರ್ಯ ಶ್ಲಾಘನೀಯ  ಎಂದು ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.

ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ ಕಮಲಾಪುರ ಹಂಪಿ, ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಶಿರಸಂಗಿ, ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರ ತ್ರಿವಳಿ ಸಂಸ್ಥೆಯಿಂದ ತಾಲೂಕಾ ವಿಶ್ವಕರ್ಮ ಸಮಾಜ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಯುವಬರಹಗಾರರ ಹಾಗೂ ಸಂಶೋಧಕರ 4ನೇ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಸಮಾಜಕ್ಕೂ ಸಾರಂಗಮಠಕ್ಕೂ ಅವಿನಾಭಾವ ಸಂಬಂಧವಿದೆ. ವಿಶ್ವಕರ್ಮ ಸಮಾಜ ಅತ್ಯಂತ ಶ್ರೇಷ್ಠವಾದ ಕಲೆಯನ್ನು ಹೊಂದಿದ ಹಾಗೂ ಎಲ್ಲ ಸಮುದಾಯ ಅವಲಂಬಿತ ಸಮಾಜವಾಗಿದ್ದು. ಎಲ್ಲರು ಕೂಡಿ ಬೆಳೆಸಬೇಕಾಗಿದೆ. ಮೂಲ ಆರ್ಕಿಟೆಕ್ಟ್ ಗಳಾದ ಇವರು ಈ ಸಮಾಜದ ಮೂಲ ಕಸಬನ್ನು ಮರೆಮಾಚದೇ ಗೌರವಕೊಡುವಂತ ಕಾರ್ಯ ನಡೆಸಬೇಕು ಅಲ್ಲದೆ ಚಿಂತನಾಕಾರ್ಯ ನಡೆಯುತ್ತಿರುವುದು ಸ್ತುತ್ಯರ್ಹವಾಗಿದೆ ಎಂದರು.

ಆಶಯ ನುಡಿ ವ್ಯಕ್ತ ಪಡಿಸಿದ ಡಾ. ವೀರೇಶ ಬಡಿಗೇರ, ವ್ಯಕ್ತಿಗಿಂತ ವೃತ್ತಿಗೌರವವನ್ನು ಬೆಳೆಸುವಂತ ಕಾರ್ಯ ನಡೆಸುತ್ತಿರುವ ವಿಶ್ವಕರ್ಮ ಸಮಾಜದ ಸ್ಥೂಲ ಸ್ವರೂಪವನ್ನು ಸೂಕ್ಷ್ಮವಾಗಿ ಬಳಕೆ ಮಾಡುತ್ತಾರೋ ಅವರನ್ನು ವಿಶ್ವಕರ್ಮರು, ಸಂಸ್ಕೃತಿ ಪರಂಪರೆಯನ್ನು ಪಾರಂಪರಿಕವಾಗಿ ಬೆಳಕಿಗೆ ತಂದಾಗ ಸಾಹಿತ್ಯ ಮತ್ತು ಸಂಶೋಧನೆ ಇರುತ್ತೆ ಅ ಸಮಾಜ ಗಟ್ಟಿಯಾಗಿ ಬೆಳೆಯುತ್ತದೆ ವಿಶ್ವಕರ್ಮ ವೆಂದರೆ ಸೃಷ್ಟಿಯನ್ನು ಬೆಳೆಸುವಂತವರು ಅಣುವಿನಿಂದ ತೃಣವಾಗಿ ಒಂದು ವಸ್ತುವಿನ ಅನೇಕ ರೂಪಗಳು ಒಂದು ಸೃಷ್ಟಿಯ ಹಲವು ಬಗೆಗಳು ವಿಶ್ವಕರ್ಮರು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ ಆಲಮೇಲ ಮತ್ತು ಸಿಂದಗಿ ಮೂರುಝಾವಧೀಶ್ವರ ಮಠದ ಪೂಜ್ಯಶ್ರೀ ರಾಮಚಂದ್ರ ಮಹಾಸ್ವಾಮಿಗಳು, ಅಧ್ಯಕ್ಷತೆ ವಹಿಸಿದ್ದ ಶಿರಸಂಗಿ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅದ್ಯಕ್ಷ ಪ್ರೋ ಪಿ.ಬಿ.ಬಡಿಗೇರ  ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ವಿರೇಶ ಬಡಿಗೇರ ಹಾಗೂ ಪ್ರಹ್ಲಾದ ಪತ್ತಾರ ಪಂಚಾನನ ಸಂಪುಟ-2′ ಹಾಗೂ ಡಾ. ವಾಸುದೇವ ಬಡಿಗೇರ ಅವರ ಬಸವಣ್ಣ ಹಾಗೂ ಅವನ ಪರಂಪರೆ ಪುನರವಲೋಕನ ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆಗೊಂಡವು.

ಕೃತಿಯ ಬಗ್ಗೆ ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ. ವಾಸುದೇವ ಬಡಿಗೇರ ಅವರು ವಿವರಿಸಿದರು.

ಕಲಬುರ್ಗಿ ವಿಶ್ವಕರ್ಮ ಹೊರಾಟ ಸಮಿತಿಯ ಅಧ್ಯಕ್ಷ ದೇವೆಂದ್ರ ದೇಸಾಯಿ ಕಲ್ಲೂರ, ವಿನೋದ ಹಂಚನಾಳ, ಸೋಮನಾಥ ಕುಂದನಗಾರ, ಶಂಕರ ಪತ್ತಾರ, ಸೋಮನಾಥ ಹಂಚನಾಳ, ಗಾಯತ್ರಿ ಮಹಿಳಾ ಮಂಡಳೀಯ ಅದ್ಯಕ್ಷೆ ಸುಹಾಸನಿ ಹಂಚನಾಳ, ಪ್ರಭಾಕರ ಹಂಚನಾಳ, ಶಿಲ್ಪಕಾರರಾದ ಈರಣ್ಣಾ ಬಡಿಗೇರ ಸೆರಿದಂತೆ ಅನೇಕರ ಸಾಧಕರನ್ನು ಸತ್ಕರಿಸಲಾಯಿತು.

ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಕಲಾಪ್ರದರ್ಶನ ಉದ್ಘಾಟಿಸಿದರು. ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ದಯಾನಂದ ಪತ್ತಾರ, ಸಂಚಾಲಕ ಬಸವರಾಜ ಬೋರಗಿ  ಸೇರಿದಂತೆ ಅನೇಕರಿದ್ದರು.

ಡಾ ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಶಿಲ್ಪಾ ಚಿಂತಾಮಣಿ ಪತ್ತಾರ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕ ಸುಭಾಷ ಬಡಿಗೇರ ಸ್ವಾಗತಿಸಿದರು. ಕಲಬುರಗಿಯ ದತ್ತಾತ್ರೇಯ ವಿಶ್ವಕರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರಿಶೈಲ ಬಡಿಗೇರ ವಂದಿಸಿದರು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!