spot_img
spot_img

ಕಲ್ಲೋಳಿ ಪಿಕೆಪಿಎಸ್ ಸಂಘದ ಶೇರುದಾರರಿಗೆ ಶೇ.5 ರಷ್ಟು ಲಾಭಾಂಶ

Must Read

spot_img
- Advertisement -

ಮೂಡಲಗಿ: ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಗ್ರಾಹಕರಿಗೆ ಕೃಷಿಗೆ ಪೂರಕವಾದ ವಿವಿಧ ತೆರನಾದ ಸಾಲ ಸೌಲಭ್ಯ ನೀಡುವುದರ ಜೊತೆಗೆ ಸಾಮಾಜಿಕ, ಶೈಕ್ಷಣಿಕವಾಗಿ ಕಾರ್ಯಮಾಡುತ್ತಾ ಹಾಗೂ ಗ್ರಾಹಕರಿಗೆ ವಿವಿಧ ಸೌಲಭ್ಯವನ್ನು ನೀಡಿ ಕಳೆದ ಮಾರ್ಚ ಅಂತ್ಯಕ್ಕೆ 43.98 ಲಕ್ಷ ರೂ ಲಾಭಗಳಿಸಿ ಪ್ರಗತಿ ಪಥದತ್ತ ಸಾಗಿದೆ. ಸಂಘದ ಶೇರುದಾರಿಗೆ ಶೇ.5 ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಪರಪ್ಪ ಕಡಾಡಿ ಹೇಳಿದರು.

ಅವರು ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಶತಮಾನ ಪೂರೈಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ  2022-24ನೇ ಸಾಲಿನ 110ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,  ಸಂಘವು ಕಳೆದ 110 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುತ್ತ ಬಂದಿದೆ. ಗ್ರಾಹಕರಿಗೆ ವಾಹನ ಸಾಲ, ಬೆಳೆಸಾಲ, ಹೈನುಗಾರಿಕೆಗೆ ಸಾಲ ಸೇರಿದಂತೆ ಒಟ್ಟು 16.28.ಕೋಟಿ ಸಾಲ ವಿತರಿಸಲಾಗಿದು. ಸಂಘದ ಗ್ರಾಹಕರಿಗೆ ತ್ವರಿತಗತಿಯಲ್ಲಿ ಸೇವೆ ಸಲ್ಲಿಸಲು ಸಂಪೂರ್ಣ ಗಣಕೀಕರಣಗೊಂಡಿದ್ದು, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ  ನಿಸ್ವಾರ್ಥ ಸೇವೆಯಿಂದ ಶೇ.100 ರಷ್ಟು ವಸೂಲಾತಿ ಹೊಂದಿದೆ ಎಂದ ಅವರು ಸಂಘದ ಪ್ರಗತಿಗಾಗಿ ಅಮೂಲ್ಯವಾದ ಸಲಹೆ ಸೂಚನೆಗಳನ್ನು ಕೊಟ್ಟು ಸಹಕರಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಉಪಾಧ್ಯಕ್ಷ ಎಸ್.ಜಿ.ಢವಳೇಶ್ವರ ಮತ್ತು ಸಹಕಾರಿ ಇಲಾಖೆಯ ಮತ್ತು ಬಿಡಿಸಿಸಿ ಬ್ಯಾಂಕ್ ಅಧಿಕಾರಿಗಳನ್ನು ಸ್ಮರಿಸಿದರು. 

ಸಭೆಯ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸಿದ್ದಪ್ಪ ವ್ಯಾಪಾರಿ, ನಿರ್ದೇಶಕರಾದ ಬಸವರಾಜ ಬೆಳಕೂಡ, ಬಾಳಪ್ಪ ಕಂಕಣವಾಡಿ, ಈರಪ್ಪ ಹೆಬ್ಬಾಳ, ಬಸವಂತ ದಾಸನವರ, ನೀಲಕಂಠ ಕಪ್ಪಲಗುದ್ದಿ, ವಸಂತ ತಹಶೀಲದಾರ, ಕೆಂಪವ್ವ ಗೋರೋಶಿ,  ಪಾರ್ವತೆವ್ವ ಖಾನಗೌಡ್ರ, ಯಮನಪ್ಪ ಗೋಕಾಂವಿ, ಧರ್ಮಣ್ಣ ನಂದಿ ಉಪಸ್ಥಿತರಿದ್ದರು.

- Advertisement -

ಸಂಘದ ಮುಖ್ಯ ಕಾರ್ಯನಿರ್ವಾಹಕ  ಬಸವರಾಜ ಬಾಗೇವಾಡಿ  ವಾರ್ಷಿಕ ವರದಿ ಮಂಡಿಸಿದರು  ಸಂಘದ ಲೆಕ್ಕಿಗ ಮಲ್ಲಪ್ಪ ಹೆಬ್ಬಾಳ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group