ಪ್ರಭಾ ಅವರ ಕಥಾ ಸಂಕಲನದಲ್ಲಿ ಸಾಮಾಜಿಕ ಕಳಕಳಿ ಇದೆ – ಮಂಗಲಾ ಮೆಟಗುಡ್ಡ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಪ್ರಭಾ ಪಾಟೀಲ ಅವರ ‘ಜೀವನ ಪಯಣ’ ಕಥಾ ಸಂಕಲನದಲ್ಲಿ ಸಾಮಾಜಿಕ ಕಳಕಳಿ ಇರುವ ಕಥೆಗಳಿವೆ ಎಂದು ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು. ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಗೃಂಥ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕೃತಿಯನ್ನು ಪರಿಚಯಿಸಿದ ರಂಗ ಕರ್ಮಿ, ಸಾಹಿತಿ ಶಿರೀಷ ಜೋಶಿ, ಸಂಕಲನದಲ್ಲಿ ಲೇಖಕಿ ಪ್ರಭಾ ಪಾಟೀಲ ಅವರ ಕಥೆ ಹೆಣೆಯುವ ಚಾಕಚಕ್ಯತೆ ಎದ್ದು ಕಾಣುತ್ತದೆ ಅಲ್ಲದೆ ಕಥೆಗಳಲ್ಲಿ ನೀತಿಯು ಅಡಕವಾಗಿದೆ ಎಂದು ಹೇಳಿದರು.

ಉಪಸ್ಥಿತರಿದ್ದ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಆಶಾ ಕಡಪಟ್ಟಿಯವರು ಕಥಾ ಸಂಕಲನ ಕುರಿತು ಮಾತನಾಡಿದರು.

ಡಾ ಗುರುದೇವಿ ಹುಲೆಪ್ಪನವಮಠ ವಿಶ್ರಾಂತ ಪ್ರಾಧ್ಯಾಪಕರು ಲಿಂಗರಾಜ ಮಹಾವಿದ್ಯಾಲಯ ಅವರು, ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಪ್ರಭಾರ ಕಥಾ ಸಂಕಲನ ಓದುಗರ ಮೆಚ್ಚುಗೆಗೆ ಪಾತ್ರವಾಗುವಂಥ ಕೃತಿ. ಪ್ರಭಾರ ಯಶಸ್ಸಿನ ಹಿಂದೆ ಅವರ ಪತಿ ಅಶೋಕ ಪಾಟೀಲರ ಸ್ಫೂರ್ತಿ ಇದೆ ಎಂದರು.

- Advertisement -

ಲೇಖಕಿ ಪ್ರಭಾ ಸಂಕಲನ ಹೊರ ತರುವಲ್ಲಿ ಸಹಕರಿಸಿದ ಎಲ್ಲರ ಸ್ಮರಣೆ ಮಾಡಿದರು.

ಸಂಘಕ್ಕೆ ದತ್ತಿ ದಾನ

ಜಯಶೀಲಾ ಬ್ಯಾಕೋಡ ಅವರು ಈಗಾಗಲೇ ಹತ್ತು ಸಾವಿರ ದತ್ತಿ ದಾನವನ್ನು ಸಂಘಕ್ಕೆ ನೀಡಿದ್ದಾರೆ ಮತ್ತೆ ಹದಿನೈದು ಸಾವಿರ ರೂಪಾಯಿಗಳ ದತ್ತಿ ದಾನವನ್ನು ನೀಡಿದರು.

ಲೇಖಕಿ ಪ್ರಭಾ ಪಾಟೀಲ ಅವರು ಸಂಘಕ್ಕೆ ಇಪ್ಪತೈದು ಸಾವಿರ
ರೂಪಾಯಿಗಳನ್ನು ನೀಡುವ ವಾಗ್ದಾನ ಮಾಡಿದರು ಪ್ರಭಾ ಪಾಟೀಲರ ಪತಿ ಅಶೋಕ ಪತಿ ವಕೀಲರು ಹಾಗೂ ಉಪಾಧ್ಯಕ್ಷರಾದ ಹಮೀದಾ ಬೇಗಂ ದೇಸಾಯಿ ವೇದಿಕೆ
ಮೇಲೆ ಉಪಸ್ಥಿತರಿದ್ದರು ನೀಲಗಂಗಾ ಚರಂತಿಮಠ ಶೈಲಜಾ ಬಿಂಗೆ, ಸುನಂದಾ ಎಮ್ಮಿ, ಶ್ವೇತಾ ನರಗುಂದ, ವಾಸಂತಿ ಮೇಳೇದ, ಲಲಿತಾ ಕ್ಯಾಸಣ್ಣವರ, ಶಾಲಿನಿ ಚಿನಿವಾರ, ಶಾಂತಾ ಮಸೂತಿ ಡಾ. ಮೈತ್ರೇಯಿನಿ ಗದಿಗೆಪ್ಪಗೌಡರ,  ಮಹಾದೇವಿ ಹುಲಗಬಾಳಿ, ಯ. ರು. ಪಾಟೀಲ, ಎಮ್  ವಾಯ್ ಮೆಣಸಿನಕಾಯಿ, ಅಬ್ಬಿಗೇರಿ ಮುಂತಾದವರು ಉಪಸ್ಥಿತರಿದ್ದರು.

ಆಶಾ ಯಮಕನಮರಡಿ ಹಾಗೂ ಆಶಾ ಸಂಸುದ್ಧಿ ಪ್ರಭಾ ವಿರಚಿತ ಕವನಗಳನ್ನು ಹಾಡಿದರು. ಸುಧಾ ಪಾಟೀಲ ಪ್ರಭಾರ ಒಂದು ಕಥೆಯನ್ನು ಓದಿದರು. ಸಂಘದ ಅಧ್ಯಕ್ಷೆ ಡಾ ಹೇಮಾವತಿ ಸೊನೊಳ್ಳಿ ಸ್ವಾಗತಿಸಿದರು. ಜ್ಯೋತಿ ಬದಾಮಿ
ಗಣ್ಯರ ಪರಿಚಯ ನೀಡಿದರು. ಜಯಶೀಲಾ ಬ್ಯಾಕೋಡ ವಂದಿಸಿದರು. ಇಂದಿರಾ ಮೋಟೆಬೆನ್ನೂರ ನಿರೂಪಿಸಿದರು.

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!