spot_img
spot_img

ಕರ್ನಾಟಕದ ಜಲಮಾರ್ಗಗಳ ಸೌಕರ್ಯಗಳಿಗಾಗಿ ಕೇಂದ್ರದಿಂದ 62 ಕೋ.ರೂ

Must Read

ಮೂಡಲಗಿ: ಸಾಗರಮಾಲಾ ಯೋಜನೆಯಡಿ ಕರ್ನಾಟಕದ ಜಲಮಾರ್ಗಗಳಲ್ಲಿ ಪ್ರಯಾಣಿಕರ ಆಸನಗಳ ವ್ಯವಸ್ಥೆ ನಿರ್ಮಾಣ ಮತ್ತು ಮೂಲಸೌಕರ್ಯ ಸೌಲಭ್ಯಗಳಿಗೆ 61.82 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಒಳನಾಡು ಜಲಮಾರ್ಗಗಳ ಮೂಲಕ ಕರ್ನಾಟಕದಲ್ಲಿ ನಾಗರಿಕ ಪ್ರಯಾಣವನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಸಂಸದ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕದ ಆಲಮಟ್ಟಿಯಿಂದ ಬಾಗಲಕೋಟೆಯವರೆಗೆ ಜಲಮಾರ್ಗದ ಅಭಿವೃದ್ದಿ ಕಾಮಗಾರಿಗೆ 12.20 ಕೋಟಿ ರೂ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಅಘನಾಶಿನಿ ಜಲಮಾರ್ಗದ ಅಭಿವೃದ್ದಿ ಕಾಮಗಾರಿಗೆ 20 ಕೋಟಿ ರೂ ಹಾಗೂ ಮಂಗಳೂರು ತಾಲೂಕಿನ ಗುರುಪುರ (ಓW-43) ಜಲಮಾರ್ಗದ ಅಭಿವೃದ್ದಿ ಕಾಮಗಾರಿಗೆ 29.62 ಕೋಟಿ ರೂ ಆರ್ಥಿಕ ಸಹಾಯ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸರಕು ಮತ್ತು ಪ್ರಯಾಣಿಕರ ಸಾಗಣೆಗೆ ಕಾರ್ಯಸಾಧ್ಯ 26 ರಾಷ್ಟ್ರೀಯ ಜಲಮಾರ್ಗಗಳ ಪೈಕಿ 13 ರಲ್ಲಿ ಅಭಿವೃದ್ದಿ ಕಾರ್ಯಗಳು ಪ್ರಾರಂಭವಾಗಿವೆ. ದೇಶದಲ್ಲಿ ಜಲಸಾರಿಗೆಯನ್ನು ಉತ್ತೇಜಿಸಲು 111 ಒಳನಾಡಿನ ಜಲಮಾರ್ಗಗಳನ್ನು ರಾಷ್ಟ್ರೀಯ ಜಲಮಾರ್ಗಗಳ ಕಾಯಿದೆ 2016 ಅಡಿಯಲ್ಲಿ ರಾಷ್ಟ್ರೀಯ ಜಲಮಾರ್ಗಗಳು ಎಂದು ಘೋಷಿಸಲಾಗಿದೆ. ಒಳನಾಡಿನ ಜಲ ಸಾರಿಗೆಯ ಮೂಲಕ 108.79 ಮಿಲಿಯನ್ ಮೆಟ್ರಿಕ್ ಟನ್ ಸರಕು ಸಾಗಣೆಯನ್ನು 2021-22 ರ ಅವಧಿಯಲ್ಲಿ ದಾಖಲಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದರು ಮಾಹಿತಿ ಹಂಚಿಕೊಂಡರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!