ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವ ವಚನ ಪಿತಾಮಹ ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ ೬೬ ನೇಯ ವಚನೋತ್ಸವ ಕಾರ್ಯಕ್ರಮ ಮುರಕಿಭಾಂವಿ ರಸ್ತೆಯ ವಿವೇಕಾನಂದ ನಗರದ ಶರಣ ದಂಪತಿಗಳ ಮನೆಯಲ್ಲಿ ಜರುಗಿತು.
ಅಲ್ಲಮಪ್ರಭುಗಳ ಕಾಯದ ಮೊದಲು ಬೀಜ…….. ವಚನ ಚಿಂತನೆಯನ್ನು ಬೈಲವಾಡ ಕದಳಿ ಮಹಿಳಾ ವೇದಿಕೆ ಗ್ರಾಮ ಘಟಕದ ಅಧ್ಯಕ್ಷೆ ಶರಣೆ ಶಾರದಾ ಪಾಟೀಲ್ ನಡೆಸಿಕೊಟ್ಟರು.
ರಾಜೇಶ್ವರಿ ನಿಂಗನಗೌಡ ದ್ಯಾಮಣಗೌಡರ್ ದಂಪತಿಗಳು ಕಾರ್ಯಕ್ರಮ ನೆರವೇರಿಸಿ ಕೊಟ್ಟರು ಅವರನ್ನು ಸನ್ಮಾನಿಸಲಾಯಿತು. ಶರಣೆ ರಾಜೇಶ್ವರಿ ದ್ಯಾಮನಗೌಡರ ಸ್ವಾಗತಿಸಿದರು ಶರಣೆ ಅನುರಾಧ ಕರಡಿಗುದ್ದಿ ನಿರೂಪಿಸಿದರು.
ಗೀತಾ ಅರಳಿ ಕಟ್ಟಿ, ಸುವರ್ಣ ಬಿರುಗುಪ್ಪಿ, ಪಾರ್ವತಿ ಕುಲಕರ್ಣಿ, ಪ್ರೀತಿ ತುಳಸನ್ನವರ್, ಬಸವರಾಜೇಶ್ವರಿ ಹಸಗುಂಡಗಿ, ಮೀನಾಕ್ಷಿ ಕೂಡ ಸೋಮಣ್ಣವರ್, ಗೌರಮ್ಮ ಕರ್ಕಿ, ಮಂಗಳಾ ಅಕ್ಕಿ, ದುಂಡಯ್ಯ ಕುಲಕರ್ಣಿ, ಪುಂಡಲೀಕ ಕಡಕೋಳ, ನಾಗನಗೌಡ ಪಾಟೀಲ, ಶರಣ ಪೂಜೇರಿ ಇದ್ದರು. ಮುಕ್ತಾಯಕ್ಕ ಬಳಗದವರು ಪೂಜೆ ಪ್ರಾರ್ಥನೆ ನೆರವೇರಿಸಿ ಕೊಟ್ಟರು ವಿವೇಕಾನಂದ ನಗರದ ನೂರಾರು ಶರಣ ಶರಣೆಯರು ಉಪಸ್ಥಿತರಿದ್ದರು