ಬೆಳಗಾವಿ : ಕಪಿಲೇಶ್ವರ ಮಂದಿರದ ಪಕ್ಕದಲ್ಲಿ ಇರುವ ಹೊಂಡದಲ್ಲಿ 7 ಏಳು ವರ್ಷದ ಬಾಲಕ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸ್ವರಾಜ್ ರಾಜು ಮೊರೆ ಮೃತ ಬಾಲಕ. ಶನಿವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಆಟ ಆಡಲು ಕಪಿಲೇಶ್ವರ ಮಂದಿರ ಬಳಿ ತೆರಳಿದ್ದನು. ಆದ್ರೆ ಬಾಲಕ ರಾತ್ರಿ ಆದ್ರು ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಖಡೇಬಜಾರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಬಾಲಕ ಹುಡುಕಾಟದಲ್ಲಿ ಇದ್ದ ಪೊಲೀಸರಿಗೆ ಭಾನುವಾರ ಬೆಳಗ್ಗೆ ಮೃತ ಬಾಲಕನ ಶವ ಹೊಂಡದಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಖಡೇಬಜಾರ್ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದರು.