spot_img
spot_img

ಮಗಳ ಮದುವೆಗೆ ೧ ಲಕ್ಷ ಸಾಲ ಪಡೆದಿದ್ದಕ್ಕೆ ೭ ವರ್ಷ ಜೀತದಾಳಿನ ಕೆಲಸ !

Must Read

spot_img
- Advertisement -

ಬೀದರ: ದಾರ್ಶನಿಕ ಬಸವಣ್ಣನವರ ಕರ್ಮಭೂಮಿಯಾಗಿರುವ ಬೀದರ್ ಜಿಲ್ಲೆಯಲ್ಲಿ  ಮಾನವನ ಕುಲವೇ ತಲೆ ತಗ್ಗಿಸುವ ಘಟನೆಯೊಂದು ನಡೆದಿದ್ದು ಜಮರ ಉದ್ಧಾರದ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ  ನೋಡಲೇಬೇಕಾದ ಸ್ಟೋರಿ ಇದಾಗಿದೆ.

ರಾಜ್ಯ ಸರ್ಕಾರ ಬಡವರ ಬಗ್ಗೆ ಕಾಳಜಿ ವಹಿಸುವ ಸರ್ಕಾರ ಎಂದು ಹೇಳುತ್ತಾರೆ ಆದರೆ ಗಡಿ ಜಿಲ್ಲೆ ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಬಡ ತಂದೆಯೊಬ್ಬ ತನ್ನ ಮಗಳ ಮದುವೆಗೆ ಎಂದು ಒಂದು ಲಕ್ಷ ರೂಪಾಯಿ ಸಾಲ ಮಾಡುತ್ತಾರೆ. ಅದನ್ನು ತೀರಿಸಬೇಕಾದರೆ ಜೀತ ಮಾಡಬೇಕು ! ಅದೇ ರೀತಿ ೭ ವರ್ಷ ಜೀತದಾಳಿನಂತೆ ದುಡಿದರೂ ಸಾಲ ತೀರಲೇ ಇಲ್ಲ ! ಸಾಲ ಪಡೆದ ಶಂಕರ ಅನುಭವಿಸಿದ ನರಕ ಯಾತನೆ ನೋವು ತಾಳಲಾಗದೆ ಕೊನೆಗೆ ಜಿಲ್ಲಾಧಿಕಾರಿಗೆ ಮತ್ತು ಪೊಲೀಸ್ ಅಧಿಕಾರಿಗಳಿ ಮೊರೆ ಹೋಗಿ ನನಗೆ ಈ  ಜೀತದಿಂದ ಮುಕ್ತಿ ನೀಡಿ ಎಂದು ಮನವಿ ಸಲ್ಲಿಸಿರುವ ಮನ ಕಲಕುವ ಘಟನೆ ಜರುಗಿದೆ. (ಎಫ್ಆಯ್ಆರ್ ನಂ. ೦೧೦೭/೨೦೨೩, ದಿ. ೬.೯.೨೦೨೩)

ಸಂಕ್ಷಿಪ್ತ ವರದಿ ಇಲ್ಲದೆ ನೋಡಿ:

‘ಮಗಳ ಮದುವೆಗಾಗಿ ₹೧  ಲಕ್ಷ ಸಾಲ ಪಡೆದದ್ದಕ್ಕೆ ಏಳು ವರ್ಷ ಜೀತದಾಳಾಗಿ ನನ್ನನ್ನು ದುಡಿಸಿಕೊಂಡಿದ್ದಾರೆ’ ಎಂದು ತಾಲ್ಲೂಕಿನ ಅಲಿಯಂಬರ್‌ ವ್ಯಕ್ತಿಯೊಬ್ಬರು ಅದೇ ಗ್ರಾಮದ ಇನ್ನೊಬ್ಬ ವ್ಯಕ್ತಿ ವಿರುದ್ಧ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದಾರೆ.

ಗ್ರಾಮದ 60 ವರ್ಷ ವಯಸ್ಸಿನ ಶಂಕರ ಹಲಕುಡೆ ಅವರು ವಿಶ್ವನಾಥ ಗಂಗಶೆಟ್ಟಿ ಹಾಗೂ ಪಾಟೀಲ ವಿರುದ್ಧ ನೀಡಿರುವ ದೂರಿನ ಮೇರೆಗೆ ತಾಲ್ಲೂಕಿನ ಜನವಾಡ ಪೊಲೀಸ್‌ ಠಾಣೆಯಲ್ಲಿ ಸೆಪ್ಟೆಂಬರ್‌ ೧೦ ರಂದು ಪ್ರಕರಣ ದಾಖಲಾಗಿದೆ.

- Advertisement -

‘೨೦೧೬ ರ ಜೂನ್‌ ೧ರಿಂದ ಸತತ ಏಳು ವರ್ಷ ನನ್ನನ್ನು ವಿಶ್ವನಾಥ ಅವರು ಅವರ ಹೊಲದಲ್ಲಿ ನಸುಕಿನ ಜಾವ ನಾಲ್ಕು ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದಾರೆ. ವಿಶ್ವನಾಥ ಅವರ ಮಗ ಬಸವರಾಜ ಪಾಟೀಲ ಅವರು ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ನನಗೆ ಹಾಗೂ ನನ್ನ ಕುಟುಂಬದ ಸದಸ್ಯರನ್ನು ನಿಂದಿಸಿ ಸ್ವಂತ ಮನೆ ಮಾರಾಟ ಮಾಡಲು ಒತ್ತಡ ಹೇರಿದ್ದಾರೆ’ ಎಂದು ಶಂಕರ್‌ ದೂರಿನಲ್ಲಿ ವಿವರಿಸಿದ್ದಾರೆ.

ಶಂಕರ್‌ ಹಲಕುಡೆ ಅವರು ೨೦೧೬ ರಲ್ಲಿ ವಿಶ್ವನಾಥ ಗಂಗಶೆಟ್ಟಿ ಪಾಟೀಲ ಅವರಿಂದ ಮಗಳ ಮದುವೆಗಾಗಿ ₹೧ ಲಕ್ಷ ಸಾಲ ಪಡೆದುಕೊಂಡಿದ್ದರು. ಮೂರು ವರ್ಷಗಳ ನಂತರ ಶಂಕರ ಅವರು ಸಾಲ ತೀರಿಸಿದ್ದಾರೆ. ಆದರೆ, ಇದನ್ನು ಒಪ್ಪದ ವಿಶ್ವನಾಥ, ಬಡ್ಡಿ ಸೇರಿ ಒಟ್ಟು ₹೭.೫೦ ಲಕ್ಷ ಸಾಲ ಹಿಂತಿರುಗಿಸಬೇಕಿತ್ತು ಎಂಬ ಕಾರಣ ನೀಡಿ ವರ್ಷಕ್ಕೆ ₹೬೫ ಸಾವಿರ ಲೆಕ್ಕದಲ್ಲಿ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.

ಶಂಕರ್‌ ಹಲಕುಡೆ ಕೊಟ್ಟಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ತಿಳಿಸಿದ್ದಾರೆ.

- Advertisement -

ರಾಜ್ಯ ಸರ್ಕಾರ ಬಡವರಿಗೆ ಗೋಸ್ಕರ ಹಲವಾರು ಯೋಜನೆ ಇದ್ದರು ಬಡವರ ಬಲಿ ಯಾಕೆ ಆಗುತ್ತಿರುತ್ತದೆ ಎಂಬುದು ಯಕ್ಷ ಪ್ರಶ್ನೆ ..

ಬೀದರ್ ಜಿಲ್ಲಾದ್ಯಂತ ಸರಕಾರದ ಪರವಾನಿಗೆ ಇಲ್ಲದೇ ಖಾಸಗಿ ಫೈನಾನ್ಸ್  ವ್ಯವಹಾರ ನಡೆಯುತ್ತದೆ. ಇವುಗಳ ಹೆಸರಿನಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಶೋಷಣೆ ನಡೆಯುತ್ತದೆ. ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಖಾಸಗಿ ಫೈನಾನ್ಸ್ ಕಡೆ ಗಮನ ಹರಿಸಬೇಕು ಎಂದು ಸಾರ್ವಜನಿಕರ ಮನವಿಯಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group