spot_img
spot_img

ಬೀದರ ಜಿಲ್ಲೆಯಲ್ಲಿ ಶಾಂತಿಯುತ ಶೇ.71.66 ರಷ್ಟು ಮತದಾನ

Must Read

- Advertisement -

ಬೀದರ: ಮೇ 10 ರಂದು ನಡೆದ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಮತದಾನವು ಬೀದರ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆಯಿತು.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು ಶೇ.71.66 ರಷ್ಟು ಬೀದರ ಜಿಲ್ಲೆಯಲ್ಲಿ ಮತದಾನವಾಗಿದೆ.

  • ಬೀದರ ಜಿಲ್ಲೆಯ ಆರು ವಿಧಾನಸಭಾ ವ್ಯಾಪ್ತಿಗಳಲ್ಲಿ ಮತದಾನವಾದ ವಿವರ
  • 47-ಬಸವಕಲ್ಯಾಣದಲ್ಲಿ 1,74,164 ಜನರು ಮತದಾನ ಮಾಡಿದ್ದು ಇದರಲ್ಲಿ ಪುರುಷ ಮತದಾರರು 90,122 ಮತ್ತು ಮಹಿಳಾ ಮತದಾರರು 84,042 ಮತದಾನ ಮಾಡಿರುತ್ತಾರೆ.
  • 48-ಹುಮನಾಬಾದ ಮತ ಕ್ಷೇತ್ರ ದಲ್ಲಿ 1,80,102 ಜನರು ಮತದಾನ ಮಾಡಿದ್ದು ಇದರಲ್ಲಿ ಪುರುಷ ಮತದಾರರು 91,347 ಮತ್ತು ಮಹಿಳಾ ಮತದಾರರು 88,752 ಮತ್ತು ಇತರೆ ಮತದಾರರು 03 ಮತದಾನ ಮಾಡಿರುತ್ತಾರೆ.
  • 49-ಬೀದರ (ದಕ್ಷಿಣ)ದಲ್ಲಿ 1,51,027 ಜನ ಮತದಾನ ಮಾಡಿದ್ದು ಇದರಲ್ಲಿ ಪುರುಷ ಮತದಾರರು 78,342 ಜನ ಮತ್ತು ಮಹಿಳಾ ಮತದಾರರು 72,685 ಮತದಾನ ಮಾಡಿರುತ್ತಾರೆ.
  • 50 ಬೀದರ ಉತ್ತರ ಕ್ಷೇತ್ರ* 1,48,221 ಜನರು ಮತದಾನ ಮಾಡಿದ್ದು ಇದರಲ್ಲಿ ಪುರುಷ ಮತದಾರರು 76,342 ಮತ್ತು ಮಹಿಳಾ ಮತದಾರರು 71,879 ಮತದಾನ ಮಾಡಿರುತ್ತಾರೆ.
  • 51-ಭಾಲ್ಕಿ ಮತದಾನ ಕ್ಷೇತ್ರ 1,72,671 ಜನರು ಮತದಾನ ಮಾಡಿದ್ದು ಇದರಲ್ಲಿ ಪುರುಷ ಮತದಾರರು 88,958 ಮತ್ತು ಮಹಿಳಾ ಮತದಾರರು 83,713 ಮತದಾನ ಮಾಡಿರುತ್ತಾರೆ.
  • 52-ಔರಾದ(ಬಿ)ಮೀಸಲಾತಿ ಕ್ಷೇತ್ರ 1,57,143 ಜನರು ಮತದಾನ ಮಾಡಿದ್ದು, ಇದರಲ್ಲಿ ಪುರುಷ ಮತದಾರರು 81,939 ಮತ್ತು ಮಹಿಳಾ ಮತದಾರರು 75,204 ಮತದಾನ ಮಾಡಿರುತ್ತಾರೆ.
  • ಬೀದರ ಜಿಲ್ಲೆಯಲ್ಲಿ ಒಟ್ಟು 9,83,328 ಜನ ಮತದಾನ ಮಾಡಿದರು

ಇದರಲ್ಲಿ ಪುರುಷ ಮತದಾರರು 5,07,050 ಮತ್ತು ಮಹಿಳಾ ಮತದಾರರು 4,76,275 ಮತ್ತು ಇತರೆ ಮತದಾರರು 03 ಜನ ಮತದಾರರು ಮತದಾನ ಮಾಡುವ ಮೂಲಕ ಜಿಲ್ಲೆಯಲ್ಲಿ ಅಂದಾಜು ಶೇ.71.66 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.

- Advertisement -

ಬೀದರ ಜಿಲ್ಲಾ ಪಂಚಾಯತದಲ್ಲಿ ಇದೇ ಮೊದಲ ಬಾರಿಗೆ ಸ್ಥಾಪಿಸಿದ ಎರಡು ಬಿದ್ರಿ ಕಲೆ ಮತಗಟ್ಟೆಗಳು ಮತದಾರರ ಆಕರ್ಷಣೆಯ ಕೇಂದ್ರಗಳಾಗಿದ್ದವು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗುರ್ಲಾಪೂರ ಗ್ರಾಮಕ್ಕೆ ಸಂಸದೆ ಮಂಗಳಾ ಅಂಗಡಿ ಭೇಟಿ

ಗುರ್ಲಾಪೂರ- ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮಕ್ಕೆ ಇತ್ತಿಚೆಗೆ ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಇವರು ಪ್ರಥಮ ಬಾರಿಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group