spot_img
spot_img

ಶೇ.72 ಮತದಾನ, ಬಹುತೇಕ ಶಾಂತಿಯುತ

Must Read

spot_img
- Advertisement -

ಸಿಂದಗಿ: ವಿಧಾನ ಸಭೆಯ ಉಪಚುನಾವಣೆ ಮತಕ್ಷೇತ್ರ-33 ರಲ್ಲಿ 101 ಗ್ರಾಮಗಳು 16 ತಾಂಡಾಗಳು ಸೇರಿದಂತೆ 297 ಭೂತಗಳಲ್ಲಿ ಶೇ. 72.8 ರಷ್ಟು ಮತದಾನವಾಗಿದೆ.

ಕ್ಷುಲ್ಲಕ ಕಾರಣಕ್ಕೆ ಪೊಲೀಸ ಅದಿಕಾರಿಗಳ ಹಾಗೂ ಕಾಂಗ್ರೆಸ್ ಮುಖಂಡ ಡಾ. ಶಾಂತವೀರ ಮನಗೂಳಿ ನಾಯಕರ ನಡುವೆ ತೀವ್ರತರ ಗಲಾಟೆ ನಡೆದು ಸ್ಥಳೀಯರು ಈ ಘಟನೆಯನ್ನು ತಿಳಿಗೊಳಿಸಿದ ನಂತರ ಪೊಲೀಸ ಅಧಿಕಾರಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ಕ್ಷಮೆ ಯಾಚಿಸಿದ ಘಟನೆ ಸೇರಿದಂತೆ ಕಕ್ಕಳಮೇಲಿ, ಪಟ್ಟಣದ 18ನೇ ವಾರ್ಡನಲ್ಲಿ, ನಾಗಾವಿ ತಾಂಡಾದಲ್ಲಿ, ಅಲ್ಪಸ್ವಲ್ಪ ಗಲಾಟೆಗಳು ಹೊರತು ಪಡಿಸಿದರೆ ಸಿಂದಗಿ ಪಟ್ಟಣ ಸೇರಿದಂತೆ ಬಹುತೇಕ ಎಲ್ಲ ಗ್ರಾಮಗಳಲ್ಲಿ ಅತ್ಯಂತ ಶಾಂತಿಯುತ ಮತದಾನವಾಗಿದೆ ಎಂದು ತಿಳಿದು ಬಂದಿದೆ.

- Advertisement -

ಬೆಳಿಗ್ಗೆ 7ರಿಂದಲೇ ಮೋಡ ಕವಿದ ವಾತಾವರಣದಲ್ಲಿ ಮತದಾರರು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ದು ಕಂಡು ಬಂದಿತು. ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ ಮಾಡಿ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಆಯಾ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ದೇವರ ಮೊರೆ ಹೋಗಿದ್ದು, ಪ್ರಾರ್ಥನೆ, ಪೂಜೆ, ಪ್ರಸಾದ ಸೇವೆಗಳಂತ ಧಾರ್ಮಿಕ ಕಾರ್ಯಗಳು ಜರುಗಿದ್ದು ವಿಶೇಷವಾಗಿತ್ತು.

ಮತದಾನಕ್ಕೆ ಜನ ತಂಡೋಪತಂಡವಾಗಿ ಬೆಳಿಗ್ಗೆಯಿಂದಲೇ ಬರುತ್ತಲಿತ್ತು. ಮತದಾರರಿಗೆ ಕ್ರಮ ಸಂಖ್ಯೆಯನ್ನು ಗುರುತಿಸುವಲ್ಲಿ ಆಯಾ ಪಕ್ಷದ ಕಾರ್ಯಕರ್ತರು ಸಂಖ್ಯೆಗಳನ್ನು ಗುರುತಿಸಿ ನೀಡುವ ಕಾರ್ಯದಲ್ಲಿ ಸಹಕರಿಸಿದರು.

- Advertisement -

ಮತಕ್ಷೇತ್ರದಲ್ಲಿ ಒಟ್ಟು 297 ಮತಗಟ್ಟೆಗಳಿದ್ದು ಸಿಂದಗಿ ಪಟ್ಟಣದಲ್ಲಿ 40 ಮತಗಟ್ಟೆ ಮತ್ತು 2 ಸಖಿಯರ ಸಲುವಾಗಿ ಪಿಂಕ ಮತಗಟ್ಟೆ ಇದ್ದು ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಪೋಲಿಸ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರದ ದೇವಣಗಾಂವ ಗ್ರಾಮದಲ್ಲಿ ಮತಯಂತ್ರದ ತೊಂದರೆಯಿಂದ ಮತದಾನ ಪ್ರಕ್ರಿಯೆ ಒಂದೂವರೆ ಗಂಟೆ ಮತದಾನ ಸ್ಥಗಿತಗೊಂಡಿತ್ತು. ಆದರೆ ವಿವಿಪ್ಯಾಟ್ ದೋಷವಿರುವ ಕಾರಣ ಕ್ಷೇತ್ರದ ಬಹುತೇಕ ಕಡೆಗಳ ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ಬದಲಿಸಲಾಯಿತು. ಚುನಾವಣೆ ಆಯೋಗದ ಪ್ರಕಾರ ಸಾಯಂಕಾಲ 7 ಗಂಟೆಯ ವರೆಗೆ ಮತ ಚಲಾಯಿಸುವ ಅವಕಾಶವಿದ್ದು ಕೇಲವೊಂದು ಮತಗಟ್ಟೆಯಲ್ಲಿ ಸುಮಾರು 7 ಗಂಟೆಯವರೆಗೂ ಮತ ಚಲಾಯಿಸುವ ಪ್ರಕ್ರಿಯೆಯಲ್ಲಿ ಜನ ಭಾಗವಹಿಸಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರು ತಂದೆಯ ಗದ್ದುಗೆಗೆ ನಮನ ಸಲ್ಲಿಸಿ ಪಟ್ಟಣದ ಹೊರವಲಯದಲ್ಲಿರುವ ಲಕ್ಷ್ಮೀದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ 11 ಗಂಟೆಗೆ ಮಲಘಾಣ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪತ್ನಿ ನಾಗರತ್ನಾ ಜೊತೆಯಲ್ಲಿ ಮತ ಚಲಾಯಿಸಿದರು.

ಜೆಡಿಎಸ್ ಅಭ್ಯರ್ಥಿ ನಾಜೀಯಾ ಅಂಗಡಿ ಅವರು ಮಾವನವರಾದ ದಿ. ಆಯ್.ಬಿ.ಅಂಗಡಿ ಅವರ ಗದ್ದುಗೆಗೆ ನಮನ ಸಲ್ಲಿಸಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ಪತಿ ಶಕೀಲ ಅಂಗಡಿ ಅವರ ಜೊತೆಗೆ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ತಾಲೂಕಿನ ದೇವಣಗಾಂವ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪತ್ನಿ ಲಲಿತಾಬಾಯಿ ಭೂಸನೂರ ಜೊತೆಗೆ ಮತ ಚಲಾಯಿಸಿದರು.

ಮಾಜಿ ಶಾಸಕ ಶರಣಪ್ಪ ಸುಣಗಾರ ಪಟ್ಟಣದ ಬಿಇಓ ಕಛೇರಿಯ ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

- Advertisement -
- Advertisement -

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group