ಅಂಬಾರಿ ಮೇಲೆ ಭವಾನಿ ತಾಯಿಯ ಪಲ್ಲಕ್ಕಿ ಮೆರವಣಿಗೆ
ಬೀದರ – ಬೀದರ ಜಿಲ್ಲೆಯ ಹುಲಸೂರ ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಸಲವು ಶ್ರೀ ಜೈ ಭವಾನಿ ಮಾತಾ ಪಲ್ಲಕ್ಕಿ ಮಹೋತ್ಸವಕ್ಕೆ ರವಿವಾರ ಅದ್ಧೂರಿ ಮೆರವಣಿಗೆ ಜರುಗುವ ಮೂಲಕ ದಸರಾ ಹಬ್ಬಕ್ಕೆ ತೆರೆಬಿದ್ದಿದೆ.
ಪ್ರತಿ ವರ್ಷ ಡಿಜೆ ಮೂಲಕ ರಾತ್ರಿಯಿಡಿ ಕುಣಿದು ಕುಪ್ಪಳಿಸಿ ನಶೆಯಲ್ಲಿ ತೆಲಾಡುತ್ತಿದ್ಧ ಯುವಕರು ಈ ವರ್ಷ ಆನೆಯ ಮೇಲೆ ಭವಾನಿ ತಾಯಿಯ ಮೆರವಣಿಗೆ ಮತ್ತು ಜಾನಪದ ನೃತ್ಯ, ಲಂಬಾಣಿ ನೃತ್ಯದ ಮೂಲಕ ಡೊಳ್ಳು, ವೀರಗಾಸೆ, ಹಲವು ಸಂಗೀತ ಕಾರ್ಯಕ್ರಮಗಳ ಮೂಲಕ ಮೈಸೂರಿನಲ್ಲಿ ನಡೆಯುವ ಹಾಗೆ ಬೇಲೂರಿನಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮೆರವಣಿಗೆ ಜರುಗಿತು.
ಎರಡು ವರ್ಷಗಳಿಂದ ಕರೊನಾ ಮಹಾಮಾರಿಯಿಂದ ಭವಾನಿ ತಾಯಿಯ ಜಾತ್ರೆಯನ್ನು ಮಾಡದೆ ಇರುವುದು ಬೇಲೂರು ಗ್ರಾಮ ಈ ವರ್ಷ ಸತತ 14 ದಿನಗಳ ಕಾಲ ದೇವಸ್ಥಾನದಲ್ಲಿ ಪುರಾಣ,ಪ್ರವಚನ ,ದಾಸೋಹ ಹಾಗು ಇತಿಹಾಸದಲ್ಲೆ ಮೊದಲನೆ ಬಾರಿಗೆ ದೇವಸ್ಥಾನ ದ ಉತ್ಸವ ಸಮಿತಿಯ ವತಿಯಿಂದ ಜನಪ್ರಿಯ ಕಾರ್ಯಕ್ರಮಗಳಾದ ಆರೊಗ್ಯ ತಪಾಸಣೆ ಶಿಬಿರ, ಕಾನೂನು ಅರಿವು ಕಾರ್ಯಕ್ರಮ, ನಗೆಹಬ್ಬ, ರಸಮಂಜರಿ ಕಾರ್ಯಕ್ರಮದ ಜೊತೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿ ಇಂದು ಗ್ರಾಮದಲ್ಲಿ ಆನೆಯ ಮೇಲೆ ಅಂಬಾರಿಯಲ್ಲಿ ತಾಯಿಯ ಮೆರವಣಿಗೆ ಮಾಡಲಾಯಿತುಯ.
ಮೆರವಣಿಗೆಯಲ್ಲಿ ಹಾವೇರಿ ಜಿಲ್ಲೆಯ ರಾಣಿಬೇನ್ನೂರಿನ ಐರಾಣಿ ಮಠದ ‘ರಾಣಿ’ ಎನ್ನುವ ಹೆಣ್ಣಾನೆ ತಾಯಿ ಭವಾನಿ ಮಾತೆಯನ್ನು ಹೊತ್ತು ಮುನ್ನಡೆಯಿತು. ಆನೆಯ ಮೆಲೆ ಪುಷ್ಪಾರ್ಚನೆ ಹಾಕುವ ಮೂಲಕ ಬಸವಕಲ್ಯಾಣ ಶಾಸಕ ಶರಣು ಸಲಗರ್ ಮಠಾಧೀಶರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಮೆರವಣಿಗೆ ಗ್ರಾಮದ ಪ್ರಮುಖ ಗಲ್ಲಿಗಳ ಮುಖಾಂತರ ಸಾಗಿತು. ಮೆರವಣಿಗೆಯಲ್ಲಿ ಕಲಾತಂಡಗಳ ನೃತ್ಯ,ಡೋಲು ತಾಶ ಲಮಾಣಿ ನೃತ್ಯ ಪ್ರದರ್ಶನಗೊಂಡವು. ಈ ಸಂಭ್ರಮ ನೋಡಲು ಮಹಿಳೆಯರು ಮಕ್ಕಳು ಸಾವಿರಾರು ಪ್ರಮಾಣದಲ್ಲಿ ನೆರೆದಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ