ಹಸಿದವರಿಗೆ ಅನ್ನ ಹಾಕುವುದು ಮಾನವೀಯತೆಯ ಪ್ರತೀಕ
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 79ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಅತಿಥಿಯಾಗಿ ಆಗಮಿಸಿದ್ದ ಮಾಹಿತಿ ಹಕ್ಕು ಹೋರಾಟಗಾರ ಬಿ.ಜಿ. ಗಡಾದ ಅವರು ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಅನ್ನದಾನವು ಶ್ರೇಷ್ಠದಾನವಾಗಿದೆ, ಹಸಿದವರಿಗೆ ಅನ್ನ ನೀಡುವುದು ಮಾನವೀಯತೆಯ ಪ್ರತೀಕವಾಗಿದೆ’ ಎಂದರು.
ಲಯನ್ಸ್ ಕ್ಲಬ್‍ವು ಪ್ರತಿ ತಿಂಗಳದಲ್ಲಿ ಎರಡು ಬಾರಿ ರೋಗಿಗಳಿಗೆ ಅನ್ನದಾಸೋಹ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಲಯನ್ಸ್ ಕ್ಲಬ್ ಸದಸ್ಯ ಸುರೇಶ ನಾವಿ ತಮ್ಮ ತಾಯಿ ಸತ್ಯವ್ಯ ನಾವಿ ಅವರ 5ನೇ ಪುಣ್ಯಸ್ಮರಣೆ ಅಂಗವಾಗಿ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಲಯನ್ಸ್ ಕ್ಲಬ್ ವಿಭಾಗ ಅಧ್ಯಕ್ಷ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ, ಪ್ರತಿ ತಿಂಗಳದಲ್ಲಿ ಎರಡು ಬಾರಿ ಅನ್ನದಾಸೋಹವನ್ನು ನಡೆಸಿಕೊಂಡು ಬರುತ್ತಿದ್ದು, ಲಯನ್ಸ್ ಕ್ಲಬ್ ಸದಸ್ಯರಲ್ಲದೆ ಬೇರೆಯವರು ಸಹ ಅನ್ನದಾಸೋಹದ ಪ್ರಾಯೋಜಕತ್ವ ವಹಿಸಿಕೊಳ್ಳಬಹುದು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಖಾಜಿ ಹಾಗೂ ದೀಪಾ ಮಾಚಮಪ್ಪನ್ನವರ ಅತಿಥಿಯಾಗಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ, ಸಂಗಮೇಶ ಕೌಜಲಗಿ, ವೆಂಕಟೇಶ ಸೋನವಾಲಕರ, ಸಂಜಯ ಮೋಕಾಶಿ, ಶ್ರೀಶೈಲ್ ಲೋಕನ್ನವರ, ಶಿವಾನಂದ ಕಿತ್ತೂರ, ಸುಪ್ರೀತ ಸೋನವಾಲಕರ, ಡಾ. ಸಚಿನ್ ಟಿ, ಡಾ. ಸಂಜಯ ಶಿಂಧಿಹಟ್ಟಿ, ಅಪ್ಪಣ್ಣ ಬಡಿಗೇರ ಇದ್ದರು.
350ಕ್ಕೂ ಅಧಿಕ ಸಂಖ್ಯೆಯಲ್ಲಿ ಆಸ್ಪತ್ರೆಯಲ್ಲಿ ರೋಗಿಗಳು, ಸಂಬಂಧಿಕರು ಅನ್ನದಾಸೋಹದಲ್ಲಿ ಭಾಗವಹಿಸಿದ್ದರು.