- Advertisement -
ಸಿಂದಗಿ: ತಾಲೂಕಿನ ಗಣಿಹಾರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಗಳಿಸುವದರ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಂ.ಮೇತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪರೀಕ್ಷೆಗೆ ಹಾಜರಾದ 51 ವಿದ್ಯಾರ್ಥಿಗಳಲ್ಲಿ ಎಲ್ಲರು ಉತ್ತೀರ್ಣರಾಗಿದ್ದು ಅದರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 4 ವಿದ್ಯಾರ್ಥಿಗಳು, ಪ್ರಥಮ ಧರ್ಜೆಯಲ್ಲಿ 43, ದ್ವಿತೀಯ ದರ್ಜೆಯಲ್ಲಿ 4 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಕುಮಾರಿ ಶಮ್ರೀನ್ ಮೋಮಿನ್ 591 ಅಂಕಗಳನ್ನು ಪಡೆದು 94.56 ಅಂಕಗಳೊಂದಿಗೆ ಶಾಲೆಗೆ ಪ್ರಥಮಸ್ಥಾನ , ಕುಮಾರಿ ಲಕ್ಷ್ಮೀ ಗಡದ 589 ಪಡೆದು 93.28 ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ಸಾಧನೆಗೆ ಶಾಲೆಯ ಗುರುಗಳಾದ ಸಿದ್ದಲಿಂಗ ಚೌಧರಿ, ಎಸ್.ಎಸ್ ಬುಲೆಬುಲೆ, ಎಂ.ಡಿ.ಕೆರಕಿ, ಆರ್.ಜಿ.ಬಿರಾದಾರ, ಹುಸೇನಬಾಷಾ ಮುಲ್ಲಾ, ಸಾಹೇಬಪಟೇಲ ಸೇರಿದಂತೆ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.