ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ ಅವರ 71 ನೇ ಜನ್ಮದಿನದ ನಿಮಿತ್ತವಾಗಿ ಸಿಂದಗಿ ಮತಕ್ಷೇತ್ರದ 271 ಭೂತಗಳಿಂದ 71 ಪೋಸ್ಟ್ ಕಾರ್ಡುಗಳು, ಪ್ರತಿಯೊಬ್ಬ ಕಾರ್ಯಕರ್ತರ ಮನದಾಳದ ಅಭಿವೃದ್ಧಿಯ ಕಾರ್ಯಗಳ, ಬಗ್ಗೆ ಅನಿಸಿಕೆಯನ್ನು ಪೋಸ್ಟ್ ಕಾರ್ಡ್‍ಗಳಲ್ಲಿ ಬರೆಯುವ ಮುಖಾಂತರ ಪ್ರಧಾನಮಂತ್ರಿಗಳಿಗೆ ಜನ್ಮದಿನದ ಶುಭಾಶಯಗಳನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಹಾಗೂ ಬಿಜೆಪಿ ಸಿಂದಗಿ ಮಂಡಲದ ಅಧ್ಯಕ್ಷ ಈರಣ್ಣ ರಾವೂರ, ಹಿರಿಯ ನಾಯಕ ಎಂ.ಎಸ್.ಮಠ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಎಚ್. ಬಿರಾದಾರ, ಕೆಡಿಪಿ ಸದಸ್ಯರಾದ ಶಿವಕುಮಾರ್ ಬಿರಾದಾರ, ಅನುಸುಬಾಯಿ ಪರಗೊಂಡ್, ಶಿವಾನಂದ ಅಲಮೇಲ, ಪುರಸಭೆ ನಾಮನಿರ್ದೇಶಿತ ಸದಸ್ಯರಾದ ರಾಕೇಶ ಕಂಟಿಗೊಂಡ್, ಕಾಜು ಬಂಕಲಗಿ, ಯಲ್ಲು ಇಂಗಳಗಿ, ಮಲ್ಲು ಪೂಜಾರಿ, ಶಾರದಾ ಮಂಗಳೂರು, ಪ್ರಕಾಶ್ ನಂದಿಕೋಲ ಸದಸ್ಯರುಗಳು, ಮಂಡಲದ ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಎಲ್ಲ ಕಾರ್ಯಕರ್ತರು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಾಜಕುಮಾರ ಗೌಂಡಿ, ಅರವಿಂದ ಹಡಗಲಿ ಇದ್ದರು.