ಬೀದರ – ಸಿದ್ಧರಾಮಯ್ಯಗೆ ಆರ್ ಎಸ್ ಎಸ್ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲ. ಕಮ್ಯುನಿಷ್ಟ್ ಗಳು, ನಕ್ಸಲೈಟ್ ಗಳು ಮಾತಾಡುವುದನ್ನು ಕೇಳಿಕೊಂಡು ಮಾತಾಡುತ್ತಾರೆ ಎಂದು ಬಿಜೆಪಿ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.
ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದಂತೆ ಆರ್ ಎಸ್ ಎಸ್ ಅನ್ನೂ ಬ್ಯಾನ್ ಮಾಡಬೇಕು ಎಂಬ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,ಕೋಟ್ಯಂತರ ಜನ ಆರ್ಎಸ್ಎಸ್ ಗೆ ಬರುತ್ತಿದ್ದಾರೆ, ಇಂಜಿನಿಯರ್, ಟೀಚರ್ಸ್, ಡಾಕ್ಟರ್ ಗಳು ಸೇರಿದಂತೆ ಎಲ್ಲಾ ವರ್ಗದವರು ಆರ್ಎಸ್ಎಸ್ ಗೆ ಬರುತ್ತಿದ್ದಾರೆ. ಆರ್ಎಸ್ಎಸ್ ಜಗತ್ತೆ ಮಾನ್ಯ ಮಾಡಿದಂಥ ಸಂಘಟನೆ. ಇವತ್ತು ಆರ್ಎಸ್ಎಸ್ ಇದೆ ಅಂತ ದೇಶ ಸುರಕ್ಷಿತವಾಗಿದೆ. ಹೇಗೆ ದೇಶದ ಗಡಿಯಲ್ಲಿ ಯೋಧರು ಕೆಲಸ ಮಾಡುತ್ತಿದ್ದಾರೋ ಹಾಗೆ ದೇಶದ ಒಳಗೆ ಆರ್ಎಸ್ಎಸ್ ಕೆಲಸ ಮಾಡುತ್ತಿದೆ ಎಂದರು.
ಆರ್ಎಸ್ಎಸ್ ಬ್ಯಾನ್ ಮಾಡಬೇಕು ಅನ್ನೋದು ಅಜ್ಞಾನದ ಪರಮಾವಧಿ, ಮೂರ್ಖತನ. ದೇಶದ ಸಂಕಷ್ಟದ ಸಂದರ್ಭದಲ್ಲಿ ಆರ್ಎಸ್ಎಸ್ ಜನರ ರಕ್ಷಣೆಗೆ ನಿಂತಿದೆ. ಆರ್ಎಸ್ಎಸ್ ಅಂದ್ರೆ ರೆಡಿ ಸೆಲ್ಫಲೆಸ್ ಸರ್ವಿಸ್ . ಆರ್ಎಸ್ಎಸ್ ನಿಂದ ಕಾಂಗ್ರೆಸ್, ಜೆಡಿಎಸ್ಗೆ ಕಷ್ಟ ಆಗುತ್ತದೆ ಅಂದ್ರೆ ಬ್ಯಾನ್ ಮಾಡಬೇಕು ಅಂತ ಹೇಳೋದಾ? ಜನ ಒಪ್ಪುವುದಿಲ್ಲ ಎಂದು ರವಿಕುಮಾರ್ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ