ಬಸವಣ್ಣನ ನೂತನ ಪುತ್ಥಳಿ ಸ್ಥಾಪನೆಗಾಗಿ ಪೂಜೆ

Must Read

ಮೂಡಲಗಿ:-ಪಟ್ಟಣದ ಬಸವ ವೃತ್ತದಲ್ಲಿ ನೂತವಾಗಿ ನಿರ್ಮಿಸಲಾಗುತ್ತಿರುವ ಬಸವಣ್ಣವರ ಪುತ್ಥಳಿಗಾಗಿ ಸಾಂಕೇತಿವಾಗಿ ಬಸವಣ್ಣವರ ಭಾವಚಿತ್ರಕ್ಕೆ ಸಕಲ ಶರಣರು ಪೂಜೆ ಸಲ್ಲಿಸಿದರು.

ಸಮಾನತೆಯ ಹರಿಕಾರ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ವೃತ್ತದಲ್ಲಿ, ಶ್ರೀ ಬಸವಣ್ಣವರ ಪುತ್ಥಳಿಯನ್ನು ಹೊಸದಾಗಿ ನಿರ್ಮಿಸುತ್ತಿರುವ ಕಾರ್ಯಕ್ಕೆ ಪಟ್ಟಣದ ಕೆಲ ಮುಖಂಡರು ಸಾಥ್ ನೀಡಿದರು.

ಬಸವಣ್ಣ ೧೨ ನೇ ಶತಮಾನದಲ್ಲಿ ಎಲ್ಲರಿಗೂ ಸಮಬಾಳು, ಸಮಪಾಲು ತತ್ವ ಸಾರಿದರು. ಜಾತಿವಾದವನ್ನು ತಿರಸ್ಕರಿಸಿದವರು. ಅದೇ  ತತ್ವದಡಿಯಲ್ಲಿ ಪುತ್ಥಳಿ ನಿರ್ಮಾಣ ಪೂಜಾ ಕಾರ್ಯದಲ್ಲಿ ಒಮ್ಮತದಿಂದ ಬಹುತೇಕ ಜಾತಿಯವರು ಭಾಗಿಯಾಗಿದ್ದರು.

ಬಿಡಿಸಿಸಿ ಉಪಾಧ್ಯಕ್ಷರಾದ ಸುಭಾಸ ಢವಳೇಶ್ವರ, ಪ್ರಕಾಶ ಮಾದರ, ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರವಿ ಸೋನವಾಲಕರ, ಮೂಡಲಗಿ ತಾಲೂಕಾ ಭಗೀರಥ ಸಮಾಜದ ಅಧ್ಯಕ್ಷರಾದ ಶಿವಬಸು ಹಂದಿಗುಂದ, ಎಲ್.ಎಸ್.ಪೂಜೇರಿ, ಮಹಾಲಿಂಗಯ್ಯ ಹಿರೇಮಠ, ಡಾ. ಬಿ.ಕೆ.ಮದಗಣ್ಣವರ, ಕುಮಾರ ಗಿರಡ್ಡಿ,ಆನಂದ ಬೆಳಕೂಡ, ಸುಭಾಸ ಕೊಣ್ಣೂರ ಇನ್ನೂ ಅನೇಕರು ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group