ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯಲ್ಲಿನ ಸರ್ವೇ ನಂ.೮೪೨/೨ ಜಾಗೆಯ ವಿವಾದಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಆದೇಶದಂತೆ ಕಳೆದ ೮ ರಂದು ತೆರವುಗೊಳಿಸುವ ಕಾರ್ಯ ಮಾಡಲಾಗಿತ್ತು ಅಲ್ಲಿಂದ ೧೨ ದಿನಗಳ ಕಾಲ ನಿರಾಶ್ರಿತರು ಡಾ. ಅಂಬೇಡ್ಕರ ವೃತ್ತದಲ್ಲಿ ಧರಣಿ ನಡೆಸಿದ್ದರು. ೧೮ರ ರಾತ್ರಿ ೧೦.೩೦ ಗಂಟೆಗೆ ಶಾಸಕ ಅಶೋಕ ಮನಗೂಳಿ ಅವರು ಡಾ. ಅಂಬೇಡ್ಕರರ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಧರಣೀ ನಿರತರ ಜಮೀನು ಖರೀದಿಗೆ ದಿ.ಎಂ.ಸಿ.ಮನಗೂಳಿ ಪೌಂಡೆಶನ್ ವತಿಯಿಂದ ರೂ ೩೦ ಲಕ್ಷಗಳನ್ನು ನೀಡುವ ವಾಗ್ದಾನ ಮಾಡಿದ ಹಿನ್ನೆಲೆಯಲ್ಲಿ ಧರಣಿಗೆ ತೆರೆ ಬಿದ್ದಿದೆ.
ಸರ್ವೇ ನಂ.೮೪೨/೨ ಜಾಗಕ್ಕೆ ಸಂಬಂಧಿಸಿದಂತೆ ಈ ಜಾಗದಲ್ಲಿ ೧೪ ಮನೆಗಳು, ೨೦ ಕಚ್ಚಾ ಮನೆಗಳು, ೪೧ ಶೆಡ್‌ಗಳು, ೯ ಖಾಲಿ ಜಾಗಗಳನ್ನು ಸೇರಿ ೮೪ ಕುಟುಂಬಗಳ ನಿರಾಶ್ರಿತರಾಗಿದ್ದು ನೋವನ್ನುಂಟು ಮಾಡಿದೆ. ಅದೇ ಜಾಗೆಯಲ್ಲಿ ನಿವೇಶನ ನೀಡಿ ಎಂದರೆ ಅದು ಮಾಲಿಕನ ಸ್ವತ್ತಾಗಿದ್ದು ಅದನ್ನು ಮರಳೀ ಪಡೆಯಲು ಸಾಧ್ಯವಿಲ್ಲ ಅದಕ್ಕೆ ಅಂತರಗಂಗಿ ರಸ್ತೆಯಲ್ಲಿರುವ ೧೦ ಎಕರೆ ಜಮೀನಿನಲ್ಲಿ ಈಗಾಗಲೇ ೧೮೬ ನಿವೇಶನಗಳ ಹಕ್ಕು ಪತ್ರಗಳನ್ನು ನೀಡಲಾಗಿದ್ದು ಆ ಜಾಗೆಯಲ್ಲಿ ಎಷ್ಟು ಜನರು ಹೋಗಲು ಇಚ್ಚಿಸುತ್ತೀರಿ ಅಲ್ಲಿ ನಿಮಗೆ ಹಕ್ಕು ಪತ್ರಗಳನ್ನು ನೀಡುವ ಮೂಲಕ ಮನೆ ಕಟ್ಟಿಕೊಳ್ಳಲು ಸರಕಾರದಿಂದ ಸಹಾಯಧನ ಕಲ್ಪಿಸಿಕೊಡಲಾಗುವುದು ಎಂದರು.
ಇನ್ನುಳಿದ ಜನರು ನೀವೆ ನೋಡಿ ಜಮೀನು ಖರೀದಿಸಿದರೆ ಅಲ್ಲಿ ಬೇಕಾಗುವ ರಸ್ತೆ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ನಗರ ಸಾರಿಗೆ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಲಾದ ಹಿನ್ನಲೆಯಲ್ಲಿ ಧರಣಿ ನಿರತರು ಧರಣಿಯನ್ನು ಹಿಂಪಡೆದುಕೊಂಡಿದ್ದಾರೆ.
ಈ ವೇಳೆ ಶಾಸಕ ಅಶೋಕ ಮನಗೂಳಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ, ಯೋಜನಾ ಪ್ರಾಧಿಕಾರದ ಅದ್ಯಕ್ಷ ಬಸು ಕಾಂಬಳೆ, ಪ್ರವೀಣ ಕಂಠಿಗೊಂಡ, ರಾಕೇಶ ಕಾಂಬಳೆ ಸೇರಿದಂತೆ ಅನೇಕರಿದ್ದರು.

