ಬೀದರ – ಭಾರೀ ಮಳೆಯಿಂದ ಮನೆಗಳಲ್ಲಿ ನೀರು ನುಗ್ಗಿ ತೊಂದರೆಗೊಳಗಾಗಿದ್ದ ತಾಲೂಕಿನ ಕಮಠಾಣ ಗ್ರಾಮದ ಮನೆಗಳಿಗೆ ಶಾಸಕ ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಚರಂಡಿ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಮಳೆ ತಗ್ಗಿದ ಬಳಿಕ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಷ್ಟೆಲ್ಲ ಅವಾಂತರವಾದರೂ ಎಚ್ಚತ್ತುಕೊಳ್ಳದ ಬೀದರ ಜಿಲ್ಲಾ ಆಡಳಿತ ನಿರಂತರ ಮಳೆಯಿಂದ ಮನೆಗಳು ಕುಸಿಯುತ್ತಿದ್ದರೂ, ಜನರಲ್ಲಿ ಆತಂಕ ಮನೆ ಮಾಡಿದ್ದರೂ ಇನ್ನೂ ಕಾಳಜಿ ಕೇಂದ್ರ ಸ್ಥಾಪನೆ ಮಾಡದೆ ಜಿಲ್ಲಾಡಳಿತ ನಿದ್ದೆಗೆ ಜಾರಿತೇ ಎಂದು ಸಾರ್ವಜನಿಕರು ಮಾತನಾಡುವಂತಾಗಿದೆ
ಜಿಲ್ಲೆಯ ಹುಲಸೂರಿನಲ್ಲಿ ಒಂದೇ ವಾರದಲ್ಲಿ ೫ ಮನೆಗಳು ಕುಸಿದಿದ್ದು ಬಡ ಕುಟುಂಬಗಳು ಅತಂತ್ರವಾಗಿವೆ.
ವರದಿ : ನಂದಕುಮಾರ ಕರಂಜೆ, ಬೀದರ

