ಹೊಸಪೇಟೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದಿಂದ ರಾಜ್ಯಮಟ್ಟದ ಕರೋಕೆ ಚಿತ್ರಗೀತೆ ಸ್ಪರ್ಧೆ

Must Read

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಆಯೋಜಿಸಿರುವ ಕರ್ನಾಟಕ ಧ್ವನಿ ಸಂಚಿಕೆ  ಸ್ಪರ್ಧೆಯ ಅಂತಿಮ ಹಂತದ ಸ್ಪರ್ಧೆಯನ್ನು ವಿಜಯನಗರ ಜಿಲ್ಲೆ, ಹೊಸಪೇಟೆಯ ಬುದ್ಧ ಬಸವ ಭವನದಲ್ಲಿ ದಿನಾಂಕ 26-10-2025ರ ಭಾನುವಾರದಂದು ಆಯೋಜಿಸಲಾಗಿದೆ

ಈ ಗಾಯನ ಸ್ಪರ್ಧೆಯಲ್ಲಿ 38 ಜನ ಗಾಯಕರಿದ್ದು ಯುಗಳ ಗೀತೆಗಳು ಹಾಡಲಿದ್ದಾರೆ ಅಂತಿಮವಾಗಿ ಆಯ್ಕೆಯಾಗುವ ಗಾಯಕರಿಗೆ ಬೆಳಗಾವಿಯಲ್ಲಿ ನಡೆಯಲಿರುವ ಕನ್ನಡ ನುಡಿ ವೈಭವ 2026ರ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು
ಶ್ರೀಮತಿ ಆಶಾರಾಣಿ ನಡೋಣಿ ಸದಸ್ಯರು ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ರಾಷ್ಟ್ರಮಟ್ಟದ ಚಿತ್ರ ಕಲಾವಿದರು ಬೆಳಗಾವಿ ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ ಎಸ್ ನಾಯ್ಕರವರು ವಹಿಸಲಿದ್ದಾರೆ..

ಗೂರೂರು ಅನಂತರಾಜು ಅವರ ಕೃತಿ ನಿಂತು ಹೋದ ರಂಗ ವೈಭವ ಪುಸ್ತಕದ ಲೋಕಾರ್ಪಣೆಯನ್ನು ಡಾ.ಸಿ ಸೋಮಶೇಖರ, ಐ ಎ ಎಸ್ ಬಸವ ವೇದಿಕೆ ಬೆಂಗಳೂರು ಅಧ್ಯಕ್ಷರು ನೆರವೇರಸುತ್ತಾರೆ. ಸಿಂಗಾರ ಎಂಬ ಹಾಡನ್ನು ಶ್ರೀಮತಿ ಕಮಲ ಕುಲಕರ್ಣಿ ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿ ಆಡಲಿದ್ದಾರೆ ಮಧುನಾಯ್ಕ.ಲಂಬಾಣಿ, ಅಧ್ಯಕ್ಷರು ಕರ್ನಾಟಕ ರಾಜ್ಯ ಬರಹಗಾರರ ಸಂಘ (ನೋಂ), ಹೂವಿನ ಹಡಗಲಿ. ಮುಖ್ಯ ಅತಿಥಿಗಳಾಗಿ ಶ್ರೀ ಗೊರೂರು ಅನಂತರಾಜು ಗೌರವ ಅಧ್ಯಕ್ಷರು ಹಾಗೂ ಸಾಹಿತಿಗಳು, ವಿರುಪಾಕ್ಷಪ್ಪ.ಯು ಉಪಾಧ್ಯಕ್ಷರು,  ಉದೇದಪ್ಪ ಕ್ಯಾದಿಗೆಹಾಳ್ ಹೊಸಪೇಟೆ ತಾಲೂಕು ಅಧ್ಯಕ್ಷರು, ಪಿ ವಿ ವೆಂಕಟೇಶ ವಕೀಲರು ಕರುನಾಡ ಕ್ರಿಯಾಶೀಲ ಸಮಿತಿ ಅಧ್ಯಕ್ಷರು ಹೊಸಪೇಟೆ ಇವರು ಹಾಜರಿರುತ್ತಾರೆ. ಈ ಸ್ಪರ್ದೆಯ ತೀರ್ಪುಗಾರರಾಗಿ  ಕುಬೇರನಾಯ್ಕ ದಾವಣಗೆರೆ ಹಾಗೂ  ಸ್ವರೂಪ ಭಾರದ್ವಾಜ್ ರವರು ನಿರ್ವಹಿಸುತ್ತಾರೆ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group