ಸಿಂದಗಿ: ನಶಿಸಿ ಹೋಗುತ್ತಿರುವ ದೇಶಿ ಕ್ರೀಡೆಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕ್ರೀಡೆಗಳನ್ನು
ಪ್ರೋತ್ಸಾಹಿಸಬೇಕು ಎಂದು ಜಿ.ಪಿ.ಪೋರವಾಲ
ಕಾಲೇಜಿನ ದೈಹಿಕ ನಿರ್ದೇಶಕ ಡಾ.ರವಿ ಗೋಲಾ
ಹೇಳಿದರು.
ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮ೦ಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ 3 ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಿಂದಗಿ ನಗರದಲ್ಲಿ ಶಾಸಕ ಅಶೋಕ ಮನಗೂಳಿ ಒಬ್ಬ ಕ್ರೀಡಾಪಟುವಾಗಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ. ಇಂದಿನ ಯುವಜನಾಂಗ ಗ್ರಾಮೀಣ ಮಟ್ಟದ ಕ್ರೀಡೆಗಳ ಕಡೆಗೆ ಒಲವು ಕಡಿಮೆಯಾಗುತ್ತಿದೆ. ಇದರಿ೦ದ ಅವುಗಳ ಅಸ್ತಿತ್ವ ನಶಿಸಿ ಹೋಗುತ್ತದೆ. ಮೊಬೈಲ್ ಗೀಳನ್ನು ಬಿಟ್ಟು ಇಂತಹ ಕ್ರೀಡೆಗಳ ಕಡೆ ಹೆಚ್ಚು ಆಸಕ್ತಿ ತೋರಬೇಕು ಎಂದರು.
ಈ ವೇಳೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಮಾತನಾಡಿ,
ಸಿಂದಗಿ ನಗರದಲ್ಲಿ 3 ದಿನಗಳ ಕಾಲ ಕ್ರೀಡಾ ಹಬ್ಬ
ನಿರ್ಮಾಣವಾಗಿದ್ದು ಸಂತಸ, ಶಾಸಕ ಅಶೋಕ
ಮನಗೂಳಿ ಸಂಸ್ಥೆಯ ಅಧ್ಯಕ್ಷರು ನಾವು ಕ್ರೀಡಾ
ಆಯೋಜನೆಗೆ ಮನವಿ ಮಾಡಿದಾಗ ಧನಾತ್ಮಕವಾಗಿ
ಸ್ಪಂದಿಸಿ ಕ್ರೀಡಾಪಟುಗಳಿಗೆ ಮತ್ತು ತರಬೇತುದಾರರಿಗೆ
3 ದಿನಗಳ ಉತ್ತರ ಕರ್ನಾಟಕ ಶೈಲಿಯ ಊಟದ
ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿ ಇಲಾಖೆಯ ಪರವಾಗಿ
ಶಾಸಕರಿಗೆ ಧನ್ಯವಾದಗಳು ತಿಳಿಸಿದ ಅವರು,
ಮುಂದಿನ ದಿನಗಳಲ್ಲಿ ಇಲಾಖೆ ವತಿಯಿಂದ ನಡೆಯುವ ರಾಷ್ಟ್ರಮಟ್ಟದ ಬಾಲಿಸ್ಟಾಲ್ ಕ್ರೀಡಾಕೂಟ ನೆರವೇರಿಸಲು ಸಮ್ಮತಿ ಸೂಚಿಸಿದ್ದಾರೆ. ಪಂದ್ಯಾವಳಿಯ ಯಶಸ್ವಿಗೆ ಸಹಕರಿಸಿದ ಜಿಲ್ಲೆಯ ದೈಹಿಕ ಉಪನ್ಯಾಸಕರಿಗೆ ಮತ್ತು ಸಾರ್ವಜನಿಕರಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ಬಿ.ಜಿ.ನೆಲ್ಲಗಿ ಕ್ರೀಡಾ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ವೇದಿಕೆ ಮೇಲೆ ಸಂಸ್ಥೆಯ ನಿರ್ದೇಶಕ ಶಿವಪ್ಪಗೌಡ
ಬಿರಾದಾರ, ವೈ.ಬಿ.ಕುರುಡೆ, ಡಾ.ಅರವಿಂದ ಮನಗೂಳಿ, ಇಲಾಖೆ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಕೆ.ಎಚ್.ಸೋಮಾಪೂರ, ಎಚ್.ಎಮ್. ಉತ್ನಾಳ, ಎಸ್.ಪಿ.ವಾಲಿಕಾರ, ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ, ಶಾಂತೇಶ ದುರ್ಗಿ, ಕೆ.ಎ. ಉಪ್ಪಾರ, ಸಿದ್ದಲಿಂಗ ಕಿಣಗಿ, ಸತೀಶ ಬಸರಕೋಡ ಸೇರಿ ವಿವಿಧ ಕಾಲೇಜುಗಳ ಪ್ರಾಚಾರ್ಯರು, ದೈಹಿಕ ಶಿಕ್ಷಣ ಉಪನ್ಯಾಸಕರು ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಇದ್ದರು.
ವಿಜೇತ ಕ್ರೀಡಾ ಪಟುಗಳ ವರದಿ: ಫ್ರೀಸ್ಟೈಲ್ ಬಾಲಕಿಯರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಾಲಕಿಯರು 37 ಅಂಕ ಪಡೆದು ಚಾಂಪಿಯನ್ ಟ್ರೋಪಿಯನ್ನು ಪಡೆದು ಗೆದ್ದು ಬಿಗಿದ್ದಾರೆ. ಬಾಲಕರ ಫ್ರೀಸ್ಟೈಲ್ ವಿಭಾಗದಲ್ಲಿ ವಿಜಯಪುರ ಜಿಲ್ಲೆ 15 ಅಂಕ ಪಡೆದು ಚಾಂಪಿಯನ್ ಟ್ರೋಪಿ ಮುಡಿಗೆರಿಸಿಕೊಂಡಿದ್ದಾರೆ.
ಗ್ರೀಕೋ ರೋಮನ್ ವಿಭಾಗದಲ್ಲಿ ಬಾಗಲಕೋಟೆ
ಜಿಲ್ಲೆ 19 ಅಂಕ ಪಡೆದು ಚಾಂಪಿಯನ್ ಟ್ರೋಪಿ
ತನ್ನದಾಗಿಸಿಕೊಂಡಿದೆ. 55 ಕೆಜಿಯ ಬಾಲಕರ ಗ್ರೀಕೊ ರೋಮನ್ ವಿಭಾಗದಲ್ಲಿ ವಿಜಯಪುರದ ಲಕ್ಷ್ಮಣ ಗೌಡರ
ಪ್ರಥಮ, 60 ಕೆಜಿಯಲ್ಲಿ ಬಾಗಲಕೋಟೆಯ ಅನೀಲ
ಕೋಟೆ ಪ್ರಥಮ, 63 ಕೆಜಿಯಲ್ಲಿ ಬಾಗಲಕೋಟೆ
ತನ್ನೀರ ಶೇಖ ಪ್ರಥಮ, 67 ಕೆಜಿಯಲ್ಲಿ
ಬಾಗಲಕೋಟೆಯ ಕಿರಣ ನಾಯಕ ಪ್ರಥಮ, 12
ಕೆಜಿಯಲ್ಲಿ ಮೈಸೂರಿನ ತುಷಾರಗೌಡ.ಎ ಪ್ರಥಮ,
77 ಕೆಜಿಯಲ್ಲಿ ಉಡಪಿಯ ಪ್ರಣೀತ ರೈ ಪ್ರಥಮ,
82 ಕೆಜಿಯಲ್ಲಿ ದಾವಣಗೆರೆಯ ಮಾಹಾದೇವ
ಪ್ರಥಮ, 87 ಕೆಜಿಯಲ್ಲಿ ಮೈಸೂರಿನ ಲೋಹಿತಗೌಡ
ಪ್ರಥಮ, 97 ಕೆಜಿಯಲ್ಲಿ ಉತ್ತರ ಕನ್ನಡದ
ಸೋಮಶೇಖರ ಪ್ರಥಮ, ಬೆಂಗಳೂರ ಉತ್ತರದ
ಎಮ್.ಡಿ.ರೋಷನ್ ದ್ವಿತೀಯ, 130 ಕೆಜಿಯಲ್ಲಿ
ದಾವಣಗೆರೆಯ ಸುಜನ ಎಸ್.ಪ್ರಥಮ.
ಫ್ರೀಸ್ಟೈಲ್ ಬಾಲಕರ ವಿಭಾಗದಲ್ಲಿ 57 ಕೆಜಿಯಲ್ಲಿ
ವಿಜಯಪುರದ ಅಭಿಲಾಷೆ ಜೊಗಲೆ ಪ್ರಥಮ, 61
ಕೆಜಿಯಲ್ಲಿ ಚಿಕ್ಕೋಡಿಯ ದಾನೇಶ್ವರ ಪ್ರಥಮ, 65
ಕೆಜಿಯಲ್ಲಿ ವಿಜಯಪುರದ ವಿಕಾಸ ಪ್ರಥಮ, 70
ಕೆಜಿಯಲ್ಲಿ ದಾವಣಗೆರೆಯ ಸಚಿನ ಪ್ರಥಮ, 74
ಕೆಜಿಯಲ್ಲಿ ಮೈಸೂರಿನ ಶಪಾಂಕರಾಜ.ಆ
ಪ್ರಥಮ, 19 ಕೆಜಿಯಲ್ಲಿ ಹಾವೇರಿಯ ಮಾಲತೇಶ
ಪ್ರಥಮ, 86 ಕೆಜಿಯಲ್ಲಿ ಮೈಸೂರಿನ ಸಂಜಯ
ಚಂದ್ರ ಪ್ರಥಮ, 92 ಕೆಜಿಯಲ್ಲಿ ದಾವಣಗೆರೆಯ
ನಾಗಾರ್ಜುನ ಪ್ರಥಮ, 97 ಕೆಜಿಯಲ್ಲಿ ಉಡಪಿಯ
ಶರಣ ಪ್ರಥಮ, 125 ಕೆಜಿಯಲ್ಲಿ ವಿಜಯಪುರದ
ಸಂತೋಷ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ
ಆಯ್ಕೆಯಾಗಿದ್ದಾರೆ.

