ಲೇಖನ : ಚಿತ್ರಕಲಾ ಪ್ರತಿಭೆ ಸೌಮ್ಯ ಎಸ್

Must Read

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ವತಿಯಿಂದ ಹೊಸಪೇಟೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಕರೋಕೆ ಯುಗಳ ಚಿತ್ರಗೀತೆ ಸ್ಪರ್ಧೆಯಲ್ಲಿ ರಾಜ್ಯ ಅಧ್ಯಕ್ಷ ಮಧು ನಾಯ್ಕ ಲಂಬಾಣಿ ಅವರ ಸಿಂಗಾರ ಎಂಬ ಹಾಡಿನ ಪೋಸ್ಟರ್ ಬಿಡುಗಡೆ ಆಯಿತು ಮತ್ತು ಈ ಹಾಡಿಗೆ ಸ್ಥಳದಲ್ಲೇ ಧ್ವನಿಮುದ್ರಿತ ಹಾಡು ಮುಗಿಯುವಷ್ಟರಲ್ಲಿ ಹಾಡಿನ ಭಾವರ್ಥ ಬಿಂಬಿಸುವ ಸೊಗಸಾದ ಚಿತ್ರ ಬಿಡಿಸಿ ಪ್ರೇಕ್ಷಕರ ಮೆಚ್ಚುಗೆ ಪಾತ್ರರಾದವರು ಹಾಸನದ ಸೌಮ್ಯ ಎಸ್ ಅವರು. ಅವರ ಕಲಾ ಕೌಶಲ್ಯ ಕಂಡು ತಲೆದೂಗಿದೆ. ಅವರ ಕಲೆಗಾರಿಕೆಯ ಬಗ್ಗೆ ತಿಳಿಯಬಯಸಿ ಮಾತನಾಡಿಸಿದೆ. ತಮ್ಮ ಕಲೆಯ ಹಾದಿಯನ್ನು ಮೇಡಂ ತಮ್ಮ ಬಾಲ್ಯದ ವಿದ್ಯಾಭ್ಯಾಸ ದಿನದಿಂದಲೇ ಆರಂಭಿಸಿದರು.

ಮೂಲತಃ ಕೊಡಗಿನ ಮಲೆನಾಡಿನ ಪ್ರದೇಶದ ಇವರು ಬೆಂಗಳೂರಿನಲ್ಲಿ ಜನಿಸಿ ಅಲ್ಲಿ ನರ್ಸರಿಯಿಂದ ಯು.ಕೆ.ಜಿ.ವರೆಗೆ ಓದಿ ನಂತರ ಅಪ್ಪನ ಕೆಲಸದ ನಿಮಿತ್ತ ಇವರ ಕುಟುಂಬ ಹುಬ್ಬಳ್ಳಿಗೆ ಸ್ಥಳಾಂತರಗೊಂಡು ಅಲ್ಲಿ 1ನೇ ತರಗತಿಯಿಂದ 5ನೇ ತರಗತಿವರೆಗಿನ ವ್ಯಾಸಂಗ ಮಾಡುತ್ತಾರೆ. ಓದಿನ ಜೊತೆಯಲ್ಲಿ ಚಿತ್ರಕಲೆ ಜೀವನದ ಒಂದು ಭಾಗವಾಗಿ ಇವರ ಕಲಾ ಜೀವನವೂ ಪ್ರಾರಂಭವಾಗುತ್ತದೆ. ಮುಂದೆ ಇವರ ತಂದೆ ಹಾಸನ ನಗರಕ್ಕೆ ಕೆಲಸ ನಿಮಿತ್ತ ಸ್ಥಳಾಂತರಗೊಳ್ಳಲು ಆಗ ಇವರು ಕೊಡಗಿನ ಸೋಮವಾರಪೇಟೆ ತಾಲೂಕಿನ ಅಬ್ಬರು ಕಟ್ಟೆ ಎಂಬ ಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನೇರುಗಳಲೆ.

ಇಲ್ಲಿಗೆ ಸೇರಿಸಲ್ಪಟ್ಟು 6ನೇ 7ನೇ ತರಗತಿ ವಿದ್ಯಾಭ್ಯಾಸ ಮುಂದುವರೆಯುತ್ತದೆ. ಅಲ್ಲಿ.ದೊಡ್ಡಮ್ಮನ ಮನೆಯಲ್ಲಿದ್ದು ವಿದ್ಯಾಭ್ಯಾಸ ಮುಂದುವರಿಸಿ ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಸೇರಿ ಚಿತ್ರಕಲೆಯ ಮೊದಲು ಗುರುವಾಗಿ ಇವರ ತಾಯಿ ಲಲಿತ ಶಿವಣ್ಣ ಹೇಳಿಕೊಟ್ಟ ಚಿತ್ರಕಲೆಯನ್ನು ಬಿಡಿಸುತ್ತಿದ್ದರು. ಇವರ ದೊಡ್ಡಮ್ಮ ರಾಧಾ ಜೋಯಪ್ಪ ಇವರ ಓದಿಗೆ ಸಹಾಯದ ಜೊತೆಗೆ ಹಲವಾರು ಬಗೆಯ ಚಿತ್ರಕಲೆಗೆ ಒತ್ತು ಕೊಟ್ಟು ಹೆಚ್ಚು ಹೆಚ್ಚು ಚಿತ್ರಕಲೆಯಲ್ಲಿ ಮುಂದುವರೆಯಲು ಸಹಾಯ ಮಾಡುತ್ತಾರೆ. ಸರ್ಕಾರಿ ಶಾಲೆಯಲ್ಲಿ ವಿಭಿನ್ನ ರೀತಿಯ ಚಿತ್ರಗಳನ್ನು ಬಿಡಿಸಿ ಶಾಲೆಯಲ್ಲಿ ಪ್ರದರ್ಶಿಸಲು ಪ್ರಾರಂಭಿಸಿ ಆಗ ಶಾಲೆಯ ಶಿಕ್ಷಕ ವೃಂದದ ಗುರುಗಳು ಶಾಲೆಯ ಗೆಳೆಯರು ಸಹಾಯ ಮಾಡಿ ಚಿತ್ರಕಲೆಯಲ್ಲಿ ಹೆಚ್ಚು ಅವಕಾಶಗಳನ್ನು ನೀಡಿ ಪ್ರತಿಭಾ ಕಾರಂಜಿ ಮತ್ತು ಹಲವಾರು ಚಿತ್ರಕಲಾ ಸ್ಪರ್ಧೆ ಮತ್ತು ಶಾಲೆಯಲ್ಲಿ ಪುಸ್ತಕಕ್ಕೆ ಸಂಬಂಧಿಸಿದ ಹಲವಾರು ಚಿತ್ರಗಳನ್ನು ಇವರ ಕೈಯಲ್ಲಿ ಬಿಡಿಸಿ ಪ್ರದರ್ಶಿಸಿದರು. ಹೀಗೆ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿ ಹಾಸನದಲ್ಲಿ 8ನೇ ತರಗತಿಯಿಂದ 10ನೇ ತರಗತಿವರೆಗೂ ವಿದ್ಯಾಭ್ಯಾಸ ಮುಂದುವರೆಸುತ್ತಾರೆ.

ಮುಂದಿನ ವಿದ್ಯಾಭ್ಯಾಸಕ್ಕೆ ಹಾಸನದ ಶಾಂತಲಾ ಚಿತ್ರಕಲಾ ಶಾಲೆಯನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಐದು ವರ್ಷದ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಇಲ್ಲಿ ಆಯಿಲ್ ಕಲರ್ಸ್ ನಲ್ಲಿ ಕಲಾ ಕೃತಿಯನ್ನು ಮಾಡಲು ಆಸಕ್ತಿ ಹೊಂದಿದ್ದು ಮತ್ತಷ್ಟು ಕಲಾಕೃತಿಗಳನ್ನು ರಚಿಸಲು ಇಚ್ಛೆ ಇರುವುದರಿಂದ ಕಲರ್ ಪೆನ್ಸಿಲ್, ಪೋಸ್ಟರ್ ಕಲರ್ಸ, ಕಲರ್ ಸ್ಕೆಚ್ ಪೆನ್ ಮತ್ತು ಕಲರ್ ಪೆನ್ ವರ್ಕ್ಸ್ , ಚಾರ್ಕೋಲ್ ಆರ್ಟ್ ವರ್ಕ್ , ಮಣ್ಣಿನ ಮತ್ತು ಸಿಮೆಂಟ್ ಮಾಡಲಿಂಗ್, ಪ್ರಿಂಟಿಂಗ್ ಆರ್ಟ್ಡ್ರೆ, ಡ್ರೆಸ್ ಪೇಂಟಿಂಗ್ , ವ್ಯಕ್ತಿಯ ಭಾವಚಿತ್ರದ ಪೇಂಟಿಂಗ್, ಕ್ಯಾನ್ವಾಸ್ ಪೇಂಟಿಂಗ್, ವಾಟರ್ ಪೇಂಟಿಂಗ್ಸ್ , ಮಿಕ್ಸ್ ಮೀಡಿಯ ಚಿತ್ರಕಲೆಗಳು ಹೂವಿನ ಅಲಂಕಾರದ ಕಲೆ, ಥರ್ಮಕೋಲ್ ಚಿತ್ರಕಲೆ ಮೆಹಂದಿ ಕಲೆ ಮದುವೆಗೆ ಸಂಬಂಧಿಸಿದಂತಹ ವರ ವಧುವಿನ ಉಪಚಾರದ ಅಲಂಕಾರಿಕ ವಸ್ತುವಿನ ಡೆಕೋರೇಷನ್ ಹುಟ್ಟು ಹಬ್ಬದ ಡೆಕೋರೇಷನ್ ಸಂಬಂಧಿಸಿದ್ದ ಅಲಂಕಾರದ ಆರ್ಡರ್ ಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎನ್ನುತ್ತಾರೆ.

ಚಿತ್ರಕಲೆ ವಿದ್ಯಾಭ್ಯಾಸ ಮಾಡುವಾಗಲೇ ಹಾಸನ ಮತ್ತು ಬೆಂಗಳೂರಿನಲ್ಲಿ ಚಿತ್ರಕಲೆಯ ಅಕಾಡೆಮಿಯನ್ನು ಪ್ರಾರಂಭಿಸಿದೆ. ಅದು ಹತ್ತು ವರ್ಷ ಮೇಲ್ಪಟ್ಟು ಅದ್ಬುತವಾಗಿ ನಡೆದುಕೊಂಡು ಬಂದಿದೆ ಎಂದು ಖುಷಿಯಿಂದ ಹೇಳುತ್ತಾರೆ.

ನಾನು ನಡೆಸುವ ಚಿತ್ರಕಲಾ ಅಕಾಡೆಮಿ ಶೃಂಗೇರಿ ಶಾರದಾ ಅಮ್ಮನವರ ಕೃಪೆಯಿಂದ ಶ್ರೀ ರಾಜರಾಜೇಶ್ವರಿ ಚಿತ್ರಕಲಾ ಅಕಾಡೆಮಿ ಎಂಬ ಹೆಸರಿನಿಂದ ನಡೆಸುತ್ತಾ ಬಂದಿದ್ದೇನೆ. ಹಲವಾರು ಚಿತ್ರಕಲೆ ಹೇಳಿಕೊಟ್ಟು ನನ್ನ ವಿದ್ಯಾರ್ಥಿಗಳಿಗೆ ನಾನು ಹೆಚ್ಚು ಅವಕಾಶ ನೀಡಲು ಹಲವಾರು ಚಿತ್ರಕಲೆಗೆ ಸಂಬಂಧಿಸಿದಂತಹ ವಿಷಯವನ್ನು ಇಟ್ಟುಕೊಂಡು ಕಲೆ ಉಳಿಸಲು ಮತ್ತು ಬೆಳೆಸಲು ಎಲ್ಲಾ ತರಹದ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದೇನೆ. ಹಾಸನ ,ಹಳೇಬೀಡು ಶ್ರೀ ಕ್ಷೇತ್ರ ಪುಷ್ಪಗಿರಿ ,ರವೀಂದ್ರ ಪಾರ್ಕ್ ,ಸ್ವಾತಂತ್ರ ಉದ್ಯಾನವನ, 3 ಬಾರಿ ಸಂಸ್ಕೃತ ಭವನ, ಅಟ್ಬಾವರ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ಮತ್ತು ಶ್ರೀ ರಾಜರಾಜೇಶ್ವರಿ ಚಿತ್ರಕಲಾ ಅಕಾಡೆಮಿ ಸಂಸ್ಥಾನದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ನಡೆಸುತ್ತಾ ಬಂದಿದ್ದೇನೆ ಮತ್ತು ಕೊಡಗಿನ ಕುಶಾಲನಗರದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ನಡೆಸಿದ್ದೇನೆ. ನಮ್ಮ ಶ್ರೀ ರಾಜ ರಾಜೇಶ್ವರಿ ಚಿತ್ರಕಲಾ ಅಕಾಡೆಮಿಯ ವಿದ್ಯಾರ್ಥಿಗಳನ್ನು ಬೆಂಗಳೂರು ,ಕೋಲ್ಕತ್ತಾ, ಹೈದರಾಬಾದ್, ದೆಹಲಿ ನಮ್ಮ ಕರ್ನಾಟಕದ, ಗದಗ ,ಬೆಂಗಳೂರು ,ಹಾಸನ ,ಚಿಕ್ಕಮಂಗಳೂರು, ಕೊಡಗಿನಲ್ಲಿ ಮತ್ತೆ ಇನ್ನಿತರ ಜಿಲ್ಲೆಗಳಿಗೆ ಕಳಿಸಿದ್ದೇನೆ ಹಾಗೂ ಅವರು ಬಹುಮಾನವನ್ನು ಗಳಿಸಿ ನಮ್ಮ ಅಕಾಡೆಮಿಗೆ ಕೀರ್ತಿ ತಂದಿದ್ದಾರೆ. ವೈಯುಕ್ತಿತವಾಗಿ ನಾನು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ವಿಭಜಿತ. ಚಿತ್ರಕಲಾ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನ ಪಡೆದಿದ್ದೇನೆ.

ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜು ಮತ್ತು ಆಯುರ್ವೇದ ಆಸ್ಪತ್ರೆ, ಹಾಸನ ಶಿವರಾತ್ರಿಯ ಪ್ರಯುಕ್ತ ಆಯೋಜಿಸಿದಂತಹ ಶಿವನ ಪೇಂಟಿಂಗ್ ಸ್ಪರ್ಧೆಯಲ್ಲಿ ಮಾಡಿ ಮೊದಲನೇ ಸ್ಥಾನ ಪಡೆದಿದ್ದೇನೆ . ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನನ್ನ ಪೇಂಟಿಂಗ್ ಗಳನ್ನು ಹಲವಾರು ಬಾರಿ ಮಾರಾಟ ಮಾಡಿ ಮತ್ತು ಭಾವಚಿತ್ರಗಳನ್ನು ರಚಿಸಿದ್ದೇನೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನದಲ್ಲಿ ಕಲಾ ಪ್ರತಿಭೋತ್ಸವದಲ್ಲಿ ಮೂರು ಬಾರಿ ಭಾಗವಹಿಸಿ ಯುವ ಪ್ರತಿಭೆ ಪ್ರಶಸ್ತಿ ಪಡೆದಿದ್ದೇನೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಸನ ಮತ್ತು ಹಾಸನ ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳದಲ್ಲಿ ಭಾಗವಹಿಸಿ ಪ್ರಸಂಶಾ ಪತ್ರ ಪಡೆದಿದ್ದೇನೆ.

ವಿಶ್ವ ಕಲಾವಿದರ ದಿನಾಚರಣೆ ಪ್ರಯುಕ್ತ ಮತ್ತು ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ಇವರ ಆಯೋಜಿಸಿದ ಗುಂಪು ಚಿತ್ರಕಲಾ ಪ್ರದರ್ಶನದಲ್ಲಿ 10 ಬಾರಿ ಭಾಗವಹಿಸಿದ್ದೇನೆ.ಶಾಂತಲಾ ಚಿತ್ರಕಲಾ ಗುಂಪು ಕ್ಯಾನ್ವಾಸ್ ಪೇಂಟಿಂಗ್ ಪ್ರದರ್ಶನದಲ್ಲಿ ಮೂರು ಬಾರಿ ಭಾಗವಹಿಸಿದ್ದೇನೆ
ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ಆಯೋಜಿಸಿದ ನಿಮ್ಮೊಂದಿಗೆ ನಾವು ಕಲಾವಿದರ ನಡೆ ಜನಸಾಮಾನ್ಯರ ಕಡೆ ಗುಂಪು ಪ್ರದರ್ಶನದಲ್ಲಿ ಭಾಗವಹಿಸಿದ್ದೇನೆ.

ಸಂಸ್ಕಾರ ಭಾರತಿ ,ಹೊಯ್ಸಳ ಚಿತ್ರಕಲಾ ಪರಿಷತ್ತು ,ಹಾಸನ ಹೊಯ್ಸಳ ಕುಂಚಕಲಾ ದರ್ಶನ ಬೆಂಗಳೂರು ಆರ್ಟ್ ಗ್ಯಾಲರಿ ಯುವಪಥ ಜಯನಗರದಲ್ಲಿ ಗುಂಪು ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದಕ್ಕೆ ಪ್ರಮಾಣ ಪತ್ರ ಪಡೆದಿದ್ದೇನೆ.
ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು ಹಿರಿಯ ಕಲಾವಿದರ ಜನ್ಮ ಶತಮಾನೋತ್ಸವ ರೇಖಾ ಚಿತ್ರಕಲೆ ಶಿಬಿರ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ರಿಪ್ಪಲ್ ಆನ್ ಆರ್ಟ್ ಇವೆಂಟ್ ಫಾರ್ ಸುಸ್ಥಾನಬಲ್ ಬೆಂಗಳೂರು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲನೇ ಸ್ಥಾನ ಪಡೆದು ಹತ್ತು ಸಾವಿರ ನಗದು ಮತ್ತು ಪ್ರತಿವರ್ಷ ಈ ಚಿತ್ರಕಲಾ ಸ್ಪರ್ಧೆಗೆ ನಾನು ಓರಿಯನ್ ಮಾಲ್ ನಲ್ಲಿ ಭಾಗವಹಿಸುತ್ತಾ ಇದ್ದೇನೆ.
ಸ್ವಾತಂತ್ರ ಉದ್ಯಾನವನ ವಿದ್ಯಾನಗರ ಹಾಸನ .
ಶ್ರೀ ರಾಜರಾಜೇಶ್ವರಿ ಚಿತ್ರಕಲಾ ಅಕಾಡೆಮಿ ಆಯೋಜಿಸಿದ
ಶ್ರೀ ವರಮಹಾಲಕ್ಷ್ಮಿ ಸಂಭ್ರಮ ಸ್ಪರ್ಧೆ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ಪಡೆದಿದ್ದೇನೆ.

ಶ್ರೀ ಓಂಕಾರೇಶ್ವರ ದೇವಸ್ಥಾನ ಅಟ್ಟಾವರದಲ್ಲಿ ಶ್ರೀ ರಾಜರಾಜೇಶ್ವರಿ ಚಿತ್ರಕಲಾ ಅಕಾಡೆಮಿ ಆಯೋಜಿಸಿದ ಸುಗ್ಗಿ ಸಂಭ್ರಮ ಚಿತ್ರಕಲಾ ಸ್ಪರ್ಧೆಯನ್ನು ನಡೆಸಿದ್ದಕ್ಕೆ ಪ್ರಮಾಣ ಪತ್ರ ನೀಡಿದ್ದಾರೆ. ಶ್ರೀ ಪುಷ್ಪಗಿರಿ ಮಹಾಸಂಸ್ಥಾನದಲ್ಲಿ ಶ್ರೀ ರಾಜರಾಜೇಶ್ವರಿ ಚಿತ್ರಕಲಾ ಅಕಾಡೆಮಿ ಆಯೋಜಿಸಿದ್ದ ಭಗವಾನ್ ಶ್ರೀ ಗಣೇಶ ಎಂಬ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ ಹಾಗೂ ಹಾಸನ ಜಿಲ್ಲೆಯ ಎಲ್ಲಾ ಬುದ್ಧ ವಿಹಾರಗಳು ಮತ್ತು ಬೌದ್ಧ ಸಂಸ್ಥೆಗಳು ,
ಹೊಯ್ಸಳ ಚಿತ್ರಕಲಾ ಪರಿಷತ್ ಹಾಸನ ಇವರ ಸಂಯುಕ್ತ ಆಶಯದಲ್ಲಿ 2569 ನೇ ಭಗವಾನ್ ಬುದ್ಧ ಜಯಂತಿಯಲ್ಲಿ ಬುದ್ಧ ಕ್ಯಾನ್ವಾಸ್ ಚಿತ್ರವನ್ನು ಗುಂಪು ಪ್ರದರ್ಶನದಲ್ಲಿ ಭಾಗವಹಿಸಿದ್ದೇನೆ. ವಂದೇ ಮಾತರಂ ಗೆಳೆಯರ ಬಳಗ ಮತ್ತು ಶ್ರೀ ವಿದ್ಯಾರಣ್ಯ ಮಹಾಗಣಪತಿ ಮಹೋತ್ಸವ 2025ರಲ್ಲಿ “ನನ್ನ ಗಣಪ ಮಣ್ಣಿನ ಗಣಪ” ಪರಿಸರ ಸ್ನೇಹಿ ಎಂಬ ಮಕ್ಕಳಿಗೆ ಮಣ್ಣಿನಲ್ಲಿ ಗಣಪತಿ ಹೇಳಿಕೊಡುವ ಶಿಬಿರದಲ್ಲಿ ಭಾಗವಹಿಸಿದ್ದೇನೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಅವರು ಜನನಿ ಫೌಂಡೇಶನ್ ಚಿಕ್ಕಕೊಂಡಗೋಳ ಮತ್ತು ಹಾಸನಾಂಬ ಮಹಿಳಾ ಸಂಘ ಹೇಮಾವತಿ ನಗರ ಸಹಯೋಗದಲ್ಲಿ ಆಯೋಜಿಸಿದ ಚಿಣ್ಣರ ಪ್ರತಿಭಾ ಕಲರವ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರದಲ್ಲಿ ಮಕ್ಕಳಿಗೆ ಚಿತ್ರ ಹೇಳಿಕೊಟ್ಟಿದ್ದೇನೆ. ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಹಾಸನ ಹಾಗೂ ಶ್ರೀ ಪುಷ್ಪಗಿರಿ ಮಹಾ ಸಂಸ್ಥಾನ ಶ್ರೀಮಠ ಹಳೇಬೀಡು ಇವರ ಸಹಯೋಗದೊಂದಿಗೆ 14ನೇ ವಾರ್ಷಿಕೋತ್ಸವ ಅಂಗವಾಗಿ 4ನೇ ಅಖಿಲ ಭಾರತ ಸ್ಪಂದನ ಸಿರಿ ಕೃಷಿ , ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ ಆಯೋಜಿಸಿ ಭಾಗವಹಿಸಿದ್ದೇನೆ.ಹಾಸನದ ಗಣಪತಿ ಪೆಂಡಲ್ ಕವಿ ಕಾವ್ಯ ಕುಂಚದಲ್ಲಿ ಕವಿಗಳ ಹಾಡಿಗೆ ಚಿತ್ರವನ್ನು ವೇದಿಕೆಯಲ್ಲಿ ಮೂರು ನಾಲ್ಕು ನಿಮಿಷಗಳಲ್ಲಿ ಮೂರು ಚಿತ್ರಗಳನ್ನು ಚಿತ್ರಿಸಿದ್ದೇನೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘ( ರಿ) ರಾಜ್ಯ ಘಟಕ ಹೂವಿನಹಡಗಲಿ ಜಿಲ್ಲಾ ಘಟಕ ಹಾಸನ ಕನ್ನಡ ರಾಜ್ಯೋತ್ಸವ ನಿಮಿತ್ತ ಕವಿಗೋಷ್ಠಿ, ಗಾಯನ ಚಿತ್ರಕಲೆ ಭರತನಾಟ್ಯ ವಿಮರ್ಶೆ ಕಾರ್ಯಕ್ರಮದಲ್ಲಿ ಚಿತ್ರಕಲೆ ಮಾಡಿ ಅಭಿನಂದನ ಪತ್ರ ಪಡೆದಿದ್ದೇನೆ. ಮತ್ತು  ಹೆಚ್ ಬಿ
ಜ್ವಾಲನಯ್ಯನವರು ಸ್ಮರಣಾರ್ಥ ಕೃತಿ ಬಿಡುಗಡೆ ಕವಿ ಕಾವ್ಯ/ಗಾಯನ /ಕಲಾಕುಂಚ/ ಭರತನಾಟ್ಯ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ “ಕಲಾ ಕುಂಚ ಹಾಡಿಗೆ ಸಂಬಂಧಿಸಿದಂತೆ 3 ನಿಮಿಷದಲ್ಲಿ ಚಿತ್ರ ಚಿತ್ರಿಸಿದ್ದೇನೆ.
ಕರ್ನಾಟಕ ರಾಜ್ಯ ಬರಹಗಾರರ ಸಂಘ ರಿ ಹೂವಿನಹಡಗಲಿ ಯವರು ಆಯೋಜಿಸಿದ ಕರ್ನಾಟಕ ಧ್ವನಿ- 01
ಅಂತಿಮ ಹಂತದ ಸ್ಪರ್ಧೆ ಕಾರ್ಯಕ್ರಮದಲ್ಲಿ ಸಿಂಗಾರ (ನಿರಾಭರಣ ಸುಂದರಿ) ಹಾಡಿಗೆ ವೇದಿಕೆಯಲ್ಲಿ ನಾಲ್ಕು ನಿಮಿಷದಲ್ಲಿ ನಿರಾಭರಣ ಚಿತ್ರ ಚಿತ್ರಿಸಿ “ಕಲಾ ರತ್ನ ಪ್ರಶಸ್ತಿ” ನೀಡಿ ಗೌರವಿಸಿದ್ದಾರೆ. ರಾಜೀವ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯವರು ಸಾರಂಗ್ ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಿದಾಗ ಚಿತ್ರಕಲಾ ಸ್ಪರ್ಧೆಯಲ್ಲಿ ನಾನು ತೀರ್ಪುಗಾರರಾಗಿ ಭಾಗವಹಿಸಿದ್ದೇನೆ. ಇಮೇಜಿನ್ ಸ್ಕೂಲ್ ಆಫ್ ಆರ್ಟ್ಸ್ ಸಕಲೇಶಪುರ ಹಾಗೂ ಶ್ರೀ ವಿನಾಯಕ ಗೆಳೆಯರ ಬಳಗ ಆಯೋಜಿಸಿದ ಶ್ರೀ ಗಣೇಶ ಚಿತ್ರಕಲಾ ಸ್ಪರ್ಧೆಗೆ ತೀರ್ಪುಗಾರರಾಗಿ ಭಾಗವಹಿಸಿದ್ದೇನೆ

ಶ್ರೀ ಶೃಂಗೇರಿ ಶಾರದಾ ಪೀಠಕ್ಕೆ ಮೂರು ಅಡಿಯ
ಶಾರದ ಅಮ್ಮನವರ ಕ್ಯಾನ್ವಾಸ್ ಆಯಿಲ್ ಪೇಂಟಿಂಗ್ ಸೇವಾರ್ಥವಾಗಿ ಮಾಡಿಕೊಟ್ಟಿದ್ದೇನೆ. ನಾನು ಜಲ ವರ್ಣ, ತೈಲ ವರ್ಣ, ಪೋಸ್ಟರ್ ಪೇಂಟಿಂಗ್ , ಕಲರ್ ಪೆನ್ಸಿಲ್ , ಮಣ್ಣಿನ ಮತ್ತು ಸಿಮೆಂಟ್ ಮಾದರಿಯ ಮೋಡೆಲ್ಸ್ ಮತ್ತು ಪ್ರಿಂಟಿಂಗ್, ಕ್ರಿಯೇಟಿವ್ ಆರ್ಟ್ಸ್ ,ವಾಲ್ ಇಂಟೀರಿಯಲ್ ಪೇಂಟಿಂಗ್ ,ರೆಸಾರ್ಟ್ ಪೇಂಟಿಂಗ್ ಥರ್ಮಕೋಲ್ ಕಟಿಂಗ್ ,ಮೆಹಂದಿ ಆರ್ಟ್, ಮಿಶ್ರ.ಮಾಧ್ಯಮ , ವ್ಯಕ್ತಿಯ ಭಾವಚಿತ್ರಗಳು ಚಿತ್ರಕಲೆಗಳು ,ಕ್ರಿಯೇಟಿವ್ ಕ್ರಾಫ್ಟ್ ಮಾರಾಟದ ಚಿತ್ರಗಳನ್ನು ವಸ್ತುಗಳನ್ನು ಮಾಡುತ್ತೇನೆ. ಸೃಜನಾತ್ಮಕ ಕಿಡಿ ದೀಪಾವಳಿ ಹಬ್ಬದ ಸಂಭ್ರಮ ಭಗವಾನ್ ಶ್ರೀ ಗಣೇಶ
ಸುಗ್ಗಿ ಸಂಭ್ರಮ
ಪ್ರಕೃತಿ ಪ್ರಾಣಿ-ಪಕ್ಷಿ ಚಿತ್ರದ
ಕಪ್ಪು ಮತ್ತು ಬಿಳಿಯ ಬಣ್ಣದ ಚಿತ್ರಕಲಾ ಸ್ಪರ್ಧೆ
ಮಕ್ಕಳ ಇಷ್ಟದ ಚಿತ್ರದ ಸ್ಪರ್ಧೆ
ಸ್ವಾತಂತ್ರ್ಯ ದಿನಾಚರಣೆಯ ಚಿತ್ರಕಲಾ ಸ್ಪರ್ಧೆ
ವಾರ್ಲಿ ಚಿತ್ರಕಲಾ ಸ್ಪರ್ಧೆ
ಕುಂಚ ಕಲಾ ದರ್ಶನ
ಕ್ಯಾನ್ವಾಸ್ ಪೇಂಟಿಂಗ್ ಪ್ರದರ್ಶನ
ಫೇಸ್ ಪೇಂಟಿಂಗ್ ಅಂಡ್ ಹ್ಯಾಂಡ್ ಪೇಂಟಿಂಗ್ಸ್ ಸ್ಪರ್ಧೆ
ಸ್ಥಳದಲ್ಲೇ ಚಿತ್ರಿಸುವ ಸ್ಪರ್ಧೆ
ಕ್ರಿಯೇಟಿವ್ ಪೇಂಟಿಂಗ್ಸ್ ಸ್ಪರ್ಧೆ
ಗೋಡೆಗಳ ಚಿತ್ರದ ಸ್ಪರ್ಧೆ

ಹೀಗೆ ಹತ್ತಾರು ರೀತಿಯ ಕಲೆಯ ಅರಿವು ಮೂಡಿಸಲು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುತ್ತಾ ಚಿತ್ರಕಲಾ ಸ್ಪರ್ಧೆಯ ಜೊತೆಗೆ ಅವರಲ್ಲಿರುವ ನಮ್ಮ ಭಾರತೀಯ ಸಂಸ್ಕೃತಿಯ ಕಲೆಯಾದ ,ಭರತನಾಟ್ಯ ,ಸಂಗೀತ ,ಕೀಬೋರ್ಡ್, ನಾಟಕ, ತೊಗಲುಗೊಂಬೆ ಇನ್ನಿತರ ಕಲೆಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡು ಹೆಚ್ಚು ಹೆಚ್ಚು ಕೆಲವೊಂದು ಚಿತ್ರಕಲಾ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬಂದಿದ್ದೇನೆ ಎಂದು ತಮ್ಮ ಚಿತ್ರ ಕಲಾ ಹಿರಿಮೆ ಗರಿಮೆಯ ಕ್ಯಾನ್ವಾಸ್ ಚಿತ್ರಿಸಿದರು.

ಗೊರೂರು ಅನಂತರಾಜು. ಹಾಸನ
9449462879.
ವಿಳಾಸ:. ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3 ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ – 573201

LEAVE A REPLY

Please enter your comment!
Please enter your name here

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...

More Articles Like This

error: Content is protected !!
Join WhatsApp Group