ಬಸವ ತತ್ವ ರಕ್ಷಣೆಗೆ ಚಿತ್ತರಗಿ ಮಠದ ಕಾರ್ಯ ಶ್ಲಾಘನೀಯ

Must Read

ಹುನಗುಂದ: ಬಸವ ತತ್ವವನ್ನು ಉಳಿಸಿ ಬೆಳೆಸಿದ ಚಿತ್ತರಗಿ ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಮಠದ, ಕಾರ್ಯ ರಾಜ್ಯದ ಮಠಗಳಲ್ಲಿ ಪ್ರಮುಖವಾಗಿದೆ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಅವರು ತಾಲ್ಲೂಕಿನ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಮೂಲ ಮಠ ಚಿತ್ತರಗಿ ಪರಮ ತಪಸ್ವಿ ಲಿಂ.ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳ114ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಮಹೋತ್ಸವ ಹಾಗೂ ಯಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅನುಭವ ಮತ್ತು ಕೃಷಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂದುವರೆದು 12ನೇ ಶತಮಾನದಲ್ಲಿ ಪ್ರಾರಂಭಗೊಂಡ ಶ್ರೀ ಮಠವು ನಿರಂತರವಾಗಿ ಉಳಿಸಿ ಬೆಳೆಸುತ್ತಾ ಕಾಯಕ ಹಾಗೂ ದಾಸೋಹ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ನಾನು ಸಹ ಬಸವ ತತ್ವದ ಅನುಯಾಯಿ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ ಗುರು ಮಹಾಂತ ಸ್ವಾಮಿಗಳು ಆಶೀರ್ವಚನ ನೀಡಿ ಬಸವ ತತ್ವವನ್ನು ಮೈಗೂಡಿಸಿಕೊಂಡಿರುವ ಶಾಸಕರು ಶ್ರೀಮಠದ ಪರಮ ಭಕ್ತರಾಗಿದ್ದಾರೆ. ಅವರು ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿರುವ ಅವರ ಕಾರ್ಯ ಶ್ಲಾಘನೀಯ ಕಾರ್ಯವಾಗಿದೆ. ಅಷ್ಟೇ ಅಲ್ಲದೆ ದೀನದಲಿತರ ಬಡವರ ಬಡವರಿಗೆ ವಸತಿ ನಿಲಯಗಳನ್ನು ನಿರ್ಮಿಸುವುದು, ಬಡವರಿಗೆ ಮನೆ ಕಟ್ಟಿ ಗುಡಿಸಲು ಮುಕ್ತ ಮತಕ್ಷೇತ್ರವನ್ನು ಪ್ರಯತ್ನಿಸುತ್ತಿರುವದು ಬಡವರ ಮೇಲಿನ ಬಡವರ ಮೇಲಿನ ಕಾಳಜಿಯನ್ನು ತೋರಿಸುತ್ತದೆ ಎಂದರಲ್ಲದೆ ವಿಜಯಮಾಂತ ಶಿವಯೋಗಿಗಳವರ ಕೃಪ ಆಶೀರ್ವಾದ ಇರಲಿ ಅವರು ಇನ್ನೂ ಹೆಚ್ಚಿನ ಹುದ್ದೆಯನ್ನು ಅಲಂಕರಿಸಲಿ ಎಂದರು.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಉಪನ್ಯಾಸಕ ಡಾ. ಮಂಜುನಾಥ್ ಜಿ.ವಿ. ಮಾತನಾಡಿ, ಕಾಯಕ ಮತ್ತು ದಾಸ ಗುರುಲಿಂಗ ಜಂಗಮ ಅಷ್ಟಾವರಣಗಳ ಬಸವ ದರ್ಶನ ಕುರಿತು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೃಷ್ಣ ಕಾಡಾ ಇಲಾಖೆಯ ಸೇವಾ ನಿವೃತ್ತ ಶೇಖರಪ್ಪ ಬೇವೂರ, ನಿವೃತ್ತ ಮುಖ್ಯೋಪಾಧ್ಯಾಯ ಮಹಾಂತೇಶ ಬಾಲರೆಡ್ಡಿ, ನಿವೃತ್ತ ಮುಖ್ಯೋಪಾಧ್ಯಾಯಿನಿ ಕಸ್ತೂರಿಬಾಯಿ ನಾಲತವಾಡ, ನಿವೃತ್ತ ದೈಹಿಕ ಶಿಕ್ಷಕ ಎಸ್ ವಾಯ್ ಶಿರೂರ, ನಿವೃತ್ತ ಶಿಕ್ಷಕ ಹಸನ್ ಸಾಹೇಬ ಲಕಿಬನ್ನವರ, ನಿವೃತ್ತ ಸೈನಿಕ ಸಂಗಪ್ಪ ಬಾಲಪ್ಪ ಕಲಕೂಟಕರ ಅವರನ್ನು ಸನ್ಮಾನಿಸಲಾಯಿತು.
ಸಂಗಣ್ಣ ನಿಂಗನಗೌಡರ ಸ್ವಾಗತಿಸಿದರು. ಬಸನಗೌಡ ಬೇವೂರ ವಂದಿಸಿದರು.

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group