ಅಂತರಂಗದ ಅರಿವು ಅಕ್ಕಮಹಾದೇವಿ ತೆಗ್ಗಿ

Must Read

ನಾವು – ನಮ್ಮವರು

ಶರಣೆ ಅಕ್ಕಮಹಾದೇವಿ ಮಲ್ಲಪ್ಪ ತೆಗ್ಗಿ (ನಾವಲಗಿ)ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು ಮತ್ತು ದತ್ತಿ ದಾಸೋ ಹಿಗಳು. ಅತ್ಯಂತ ಹುರುಪಿನ ಮತ್ತು ಹುಮ್ಮಸ್ಸಿನ ವ್ಯಕ್ತಿತ್ವದವರು. ಯಾವತ್ತೂ ಸ್ನೇಹ ಜೀವಿ ಮತ್ತು ಪರೋಪಕಾರಿ ಗುಣವುಳ್ಳವರು. ಇದರ ಜೊತೆ ಜೊತೆಗೆ ಬಸವ ತತ್ವ ಚಿಂತಕರು ಮತ್ತು ಬಸವ ಅನುಯಾಯಿಗಳು.

ಅಕ್ಕಮಹಾದೇವಿ ಅವರು ಎಂ.ಎ ಬಿಇಡಿ.(ಕನ್ನಡ) ನಿವೃತ್ತಿ ಮುಖ್ಯೋಪಾಧ್ಯಾಯರು. ಅವರ ಸ್ವಂತ ಊರು ಲೋಕಾಪೂರ, ಬಾಗಲಕೋಟ.ಜಿಲ್ಲೆ- ಅವರ ತಂದೆ ಮಲ್ಲಪ್ಪ.ಗು.ತೆಗ್ಗಿ ಬಾಂಡ ರೈಟರ್, ಶರಣ ಜೀವಿ, ಕಾಯಕ ನಿಷ್ಠೆ,ಕೊಡುಗೈ ದಾನಿ. ಮರಾಠಿಯಲ್ಲಿ ಶಿಕ್ಷಣ ಪಡೆದಿದ್ದರೂ ಕನ್ನಡವನ್ನು ಡಿಗ್ರಿ ಪಡೆದವರಕ್ಕಿಂತ ತುಂಬಾ ಚೆನ್ನಾಗಿ ವ್ಯವಹಾರದಲ್ಲಿ ಪಳಗಿದವರು. ತಾಯಿ ಸಿದ್ದಲಿಂಗವ್ವ ಅಕ್ಕನ ಬಳಗದ ಅಧ್ಯಕ್ಷೆ, ಕಸೂತಿ,ಹೊಲಿಗೆ ಹೇಣಿಕೆ ಹಾಡು ಮುಂತಾದ ವಿಷಯಗಳಲ್ಲಿ ಪರಿಣಿತಳು.

ಅಕ್ಕಮಹಾದೇವಿ ಅವರು ಒಟ್ಟು ಆರು ಜನ ಮಕ್ಕಳು. ನಾಲ್ಕು ಜನ ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳು.ಇವರೇ ಹಿರಿಯವರು. ಅವರದು ಶರಣರ ಮನೆತನ, ಸಂಸ್ಕೃತಿ ಕಾಯಕ ದಾಸೋಹಕ್ಕೆ ಹೆಸರುವಾಸಿ, ಕೂಡು ಕುಟುಂಬ 10 – 15 ಜನರಿದ್ದರು. ಅವರ ತಂದೆ ಅವರು ಹೊಲದಲ್ಲಿ ಬೆಳೆದಿದ್ದನ್ನು ಅಕ್ಕತಂಗಿ, ಬಡಬಗ್ಗರಿಗೆ ಎಲ್ಲರಿಗೂ ಆಯುಷ್ಯದ ಉದ್ದಕ್ಕೂ ಹಂಚಿಕೊಂಡು ಬಂದರು. ಅರಭಾವಿ ದುರದುಂಡೇಶ, ಧಾರವಾಡದ ಮೃತ್ಯುಂಜಯ ಅಪ್ಪಗಳ ಪರಮ ಭಕ್ತರು.

ಪ್ರತಿ ನಿತ್ಯ ಅವರು ವಚನ, ಹಾಡು ಹೇಳಲೇಬೇಕು. ಎಲ್ಲರಿಗೂ ಉತ್ತಮ ಶಿಕ್ಷಣ ನೀಡಿದ ಕಾರಣ. 4 ಜನ ಶಿಕ್ಷಕರಾದೆವು ಅವರ ತಂಗಿಯರ ಮನೆಯವರೂ ಸಹ ಶಿಕ್ಷಕರೇ. ಒಟ್ಟು 12 ಜನ ಶಿಕ್ಷಕರಿದ್ದಾರೆ.

1ರಿಂದ 4ನೇ ತರಗತಿ ಲೋಕಾಪೂರದಲ್ಲಿ 5 ನೇ ತರಗತಿ, ಚಿಕ್ಕವಳಿರುವಾಗಲೆ ಅಕ್ಕಮಹಾದೇವಿ ಅವರ ಮದುವೆಯನ್ನು ಅವರ ಅಕ್ಕನ ಒತ್ತಾಯಕ್ಕೆ ಮಾಡಿದರು. ಆದರೆ ಅವರ ತಂದೆ, ಅವರ ಪತಿಯನ್ನು ಕಲಿಯಲು ಲೋಕಾಪುರಕ್ಕೆ ಕರೆದುಕೊಂಡು ಬಂದು ಕಲಿಸಿ, ಬೆಳಗಾವಿಯ ಸಿವಿಲ್ ಹಾಸ್ಪಿಟಲ್ ದಲ್ಲಿ ಸುಪರಿಡೆಂಟ ನೌಕರಿ ಕೊಡಿಸಿದರು.
ಅವರ ಚಿಕ್ಕಪ್ಪ ಬೆಂಗಳೂರಿನಲ್ಲಿ ಕೆಮಿಕಲ್ ಎಕ್ಸಾಮಿನರ್ ಆಗಿದ್ದರು. ಅವರು ಅಕ್ಕಮಹಾದೇವಿ ಅವರನ್ನು ಬೆಂಗಳೂರಿನ ಶೇಷಾದ್ರಿಪುರಂ ಶಾಲೆಯಲ್ಲಿ ಕಲಿಸಿದರು.
ನಂತರ ಬೆಳಗಾವಿಗೆ ವರ್ಗವಾಯಿತು.ಆರ್. ಪಿ. ಡಿ ಕಾಲೇಜನಲ್ಲಿ ಬಿ. ಎ ಮುಗಿಸಿ, ಅತ್ತೆ ಮನೆಗೆ ಹೋದರು.
ಅವರ ಯಜಮಾನರು ಬಿ. ಎಡ್, ಎಂ. ಎ
ಕಲಿಸಿದರು.

ಅವರ ಸಹಕಾರ, ಪ್ರೋತ್ಸಾಹದಿಂದ ಅಕ್ಕಮಹಾದೇವಿ ಅವರು ನೌಕರಿಗೆ ಪ್ರಥಮವಾಗಿ 1978ರಲ್ಲಿ ನಾಗಮಂಗಲ ಮಂಡ್ಯ ಜಿ. ಪ್ರಾರಂಬಿಸಿದರು. ಐದು ವರ್ಷದ ನಂತರ ಮಾರಿಹಾಳ ಮಾಡೆಲ್ ಸ್ಕೂಲದಲ್ಲಿ ಹೆಡ್ ಮಾಸ್ಟರ್ ಆಗಿ ಎಂಟು ವರ್ಷ ಸೇವೆ ಸಲ್ಲಿಸಿ, ಸರದಾರ್, ಚಿಂತಾಮಣಿ ಹೈಸ್ಕೂಲದಲ್ಲಿ ಕಾರ್ಯನಿರ್ವಹಿಸಿದರು.

ಶಾಲೆ ಹಾಗೂ ಮಕ್ಕಳ ಅಭಿವೃದ್ಧಿಗೆ ಹಗಲಿರಳು ಶ್ರಮ ಪಟ್ಟರು. ಹಿಂದಿ ಪರೀಕ್ಷೆ, ಶಿವಾನುಭವ ಪರೀಕ್ಷೆ, ವಚನ ಕಮ್ಮಟದಲ್ಲಿ ತೇರ್ಗಡೆ ಹೊಂದಿದ್ದಾರೆ. ಮಕ್ಕಳಿಗೂ ಸಹ ಪರೀಕ್ಷೆಗೆ ಪ್ರೇರೆಪಿಸುತ್ತಿದ್ದರು. ನಂತರ ರಾಮತೀರ್ಥ ನಗರ ಶಾಲೆಗೆ 2006ರಲ್ಲಿ ಹೆಡ್ ಮಾಸ್ಟರ್ ಎ೦ದು ಪ್ರಮೋಶನ್ ಸಿಕ್ಕಿತು.

ಹೊಸ ಜಾಗ ಭೂಮಿ ಪೂಜೆ ಮಾಡಿ, ಕಟ್ಟಡ ಪ್ರಾರಂಭಿಸಿದರು
ಒಂದು ವರ್ಷ ಎಲ್ಲಾ ಅವರೇ ಖರ್ಚಮಾಡಿದರು. ರೂಮ್ ತಗೊಂಡು ಬಾಡಿಗೆ ಅಕ್ಕಮಹಾದೇವಿ ಅವರೇ ಕೊಡುತ್ತಿದ್ದರು… ಇಪ್ಪತ್ತು ಮಕ್ಕಳಿಂದ ಪ್ರಾರಂಭವಾದ ಶಾಲೆ ಈಗ ನಾಲ್ಕು ನೂರು ಮಕ್ಕಳಾಗಿದ್ದಾರೆ. ಒಂದರಿಂದ ರಿಂದ ಹತ್ತನೆಯ ತರಗತಿ ಇರುವುದು ಈಗ ಪಬ್ಲಿಕ್ ಶಾಲೆ ಎ೦ದು ಪ್ರಸಿದ್ಧವಾಗಿದೆ.

ಅವರ ಅವಧಿಯಲ್ಲಿ ಮಣ್ಣಿಕೇರಿ… ಹೈಸ್ಕೂಲ ಅದು ಹೊಸದು ಮತ್ತು ಮುರಾರ್ಜಿ ಶಾಲೆ ಪ್ರಾರಂಭಿಸಿದರು… ಇವರನ್ನು ಅಲ್ಲಿ ನೇಮಿಸಿದ್ದರು.

ಆಡಳಿತದಲ್ಲಿ ಕನ್ನಡ ಹೆಚ್ಚಾಗಿ ಬಳಸುತ್ತಿದ್ದರಿಂದ “ಕನ್ನಡದ ಕಲ್ಪತರು” ಎಂದು ಅವರಿಗೆ ಪ್ರಶಸ್ತಿ ಲಭಿಸಿದೆ. ಶಾಲೆಗೆ “ಕನ್ನಡ ಸೌಧ’, ಎಂದು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಹೆಡ್ ಮಾಸ್ಟರ್ ಇದ್ದಾಗ ಬಡ ಮಕ್ಕಳಿಗೆ ಎಲ್ಲ ರೀತಿಯಿಂದ ಸಹಾಯ ಸಹಕಾರ ನೀಡಿ,ಐದು, ಆರು ಜನ ದತ್ತು ತೆಗೆದುಕೊಂಡು, ಶಿಕ್ಷಣ ಕೊಡಿಸಿ ನೌಕರಿ ಹಚ್ಚಿಸಿದ್ದಾರೆ.
ಅವರ ಪ್ರೀತಿಯ ತಂಗಿ, ತಮ್ಮಂದಿರನ್ನು ಅವರೇ ಕಲಿಸಿ, .. ಮದುವೆ ಮಾಡಿ ಮಾರ್ಗದರ್ಶನ ಮಾಡಿದರು. ಒಟ್ಟು ಮೂವತ್ತಾರು ವರ್ಷ ಸರ್ವಿಸ್‌ ಮಾಡಿ ನಿವೃತ್ತಿ ಹೊಂದಿದ್ದಾರೆ .

ಬಸವಾಭಿಮಾನಿಯಾದ ಅವರು 2006ರಲ್ಲಿ ಲಿಂಗಾಯತ ಸಂಘಟನೆಗೆ ಸೇರಿದರು . ಅಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಕ್ರಿಯವಾಗಿ ಕಾರ್ಯನಿರ್ವಸುತ್ತಿದ್ದರು ವಚನ ವಿಶ್ಲೇಷಣೆ, ಭಾಷಣ, ಶರಣರ ಪಾತ್ರ, ಏಕಪಾತ್ರಾಭಿನಯ, 160 ವಚನ ಕಂಠಪಾಠ ಮತ್ತು 250 ವಚನ ಬರೆದು ಸಂಚಾರ ಗುರು ಬಸವ ದಳದಲ್ಲಿ ಪ್ರಶಸ್ತಿ ಪಡೆದರು.

“ದೇಶಸುತ್ತಿ ನೋಡು ಕೋಶ ಓದಿ ನೋಡು” ಎಂಬಂತೆ 2005ರಲ್ಲಿ, ಆಲ್ ಇಂಡಿಯಾ ಟೂರ್ ಕಾಷ್ಮೀರ ದಿoದ ಕನ್ಯಾಕುಮಾರಿ, ಗುಜರಾತ, ಆಸ್ಸಾಮ್,ಪ್ರವಾಸ, ಒಂದು ತಿಂಗಳು ಮಾಡಿ ಬಂದರು. ನಂತರ 2016ರಲ್ಲಿ ಸಿಂಗಾಪೂರ, ಮಲೇಶಿಯ ಹಾಗೂ 2018ರಲ್ಲಿ ಯುರೋಪ ಸ್ವಿಝರಲೆಂಡ ಮುಂತಾದ ವಿದೇಶ ಪ್ರವಾಸವಾಯಿತು. ಅಲ್ಲಿ ಅನೇಕ ಕಡೆ ಬಸವಾದಿ ಶರಣರ ಪುಸ್ತಕ ಕೊಟ್ಟು ಪ್ರಸಾರಮತ್ತು ಪ್ರಚಾರಮಾಡಿದರು. ಅವರ ಗೆಳತಿಯರು ಅಮೇರಿಕಾ, ಆಸ್ಟ್ರೇಲಿಯಾ ನ್ಯೂಜಿಲೆಂಡ…. ಅಲ್ಲಿಗೂ ಕಳಿಸಿದರು
ಅವರು 18 ವರ್ಷದಿಂದ ಏಕದೇವೊಪಾಸನೆ ಮಾಡುತ್ತಿದ್ದಾರೆ.
ಮನೆ ಮನೆಯಲ್ಲಿ ಬಸವ ಭಾವಪೂಜೆ ಸತ್ಸಂಗ, ವಚನ ಓದು ಮುಂತಾದ ಪ್ರಚಾರ ಮಾಡಿ, ಜಾಗೃತಿ ಮಾಡಿಸುತ್ತಾರೆ. “ಜಗಲಿ ಝಳ ಝಳ “ಎಂಬಂತೆ ಕೇವಲ ಬಸವಣ್ಣನವರ ಫೋಟೋ ವಚನ ಗ್ರಂಥ ಪೂಜಿಸುತ್ತಾರೆ

ನಾಲ್ಕು ವರ್ಷಗಳಿಂದ ಅಕ್ಕನ ಅರಿವು ಸೇರಿ ನಿಜವಾಗಲೂ ತುಂಬಾ ವಿಷಯ ಅರಿವಾಗಿದೆ. ಅಲ್ಲಿ ಎಲ್ಲರ ಪ್ರೋತ್ಸಾಹ ಪ್ರೇರಣೆಯಿಂದ ಶರಣರ ಕುರಿತು ಲೇಖನ,ಕಥೆ,ಕವನ, ವಚನ ವಿಶ್ಲೇಷಣೆ,ಉಪನ್ಯಾಸ ಮುಂತಾದ ಅನೇಕ ವಿಷಯಗಳನ್ನು ಕಲಿತರು. ಎಲ್ಲರ ಪ್ರೇರಣೆಯಿಂದ ಅವರ ಪ್ರಥಮ ಕೃತಿ’ ವಚನ ಬುತ್ತಿ ಇತ್ತೀಚೆಗೆ ಪ್ರಕಟವಾಗಿದ್ದು ಹೆಮ್ಮೆಯ ವಿಷಯ. ಸಾಹಿತ್ಯದ ಒಲವು ಹೆಚ್ಚಾಗಲಿಕ್ಕೆ ಅಲ್ಲಿಯ ಅತ್ಮೀಯ ಸದಸ್ಯರೇ ಕಾರಣ. ಅಜೀವ ಸದಸ್ಯರಾಗಿ,, ಎರಡು ದತ್ತಿ ದಾಸೋಹ ಮಾಡಿದ್ದಾರೆ. ಅನೇಕ ಗ್ರಂಥ ದಾಸೋಹ, ಕಟ್ಟಡ ಕಟ್ಟಲಿಕ್ಕೆ ಧನ ದಾಸೋಹ…. ಕೈಲಾದಷ್ಟು ಸಹಾಯ ಸಹಕಾರ ನೀಡಿದ್ದಾರೆ.

ಅವರು ಪ್ರಾಣಿ ಪ್ರಿಯರು. ಹನ್ನೊಂದು ನಾಯಿ ಸಾಕಿದ್ದರು. ತುಂಬಾ ನಿಷ್ಠಾವಂತ ಪ್ರಾಣಿ ಮಕ್ಕಳಂತೆ ಜೋಪಾನಮಾಡಿದ್ದರು. ಲೇಖಕಿಯರ ಸಂಘ, ಕದಳಿ ವೇದಿಕೆಯಲ್ಲಿ,ಕ.ರಾ.ಮ.ಸಾ.ಪ ಅಲ್ಲಿ ಖಜಾಂಚಿ,ಗಂಗಾಂಬಿಕಾ ಮಹಿಳಾ ಮಂಡಳ, ಲಿಂಗಾಯತ ಮಹಿಳಾ ಮಂಡಳ, ಸ್ಪೂರ್ತಿ ವೆಲ್ಫೆರ್ ಅಸೋಸೇಶನ್ ಹೀಗೆ ಹತ್ತು ಹಲವಾರು ಸಂಘಗಳಲ್ಲಿ ಪಾಲ್ಗೊಂಡು ಸಮಾಜ ಸೇವೆಯೇ
ಬಡಮಕ್ಕಳ ಅಭಿವೃದ್ದಿಯೇ ಅವರ ಗುರಿ.
ಅವರಿಗೆ ಉಚಿತ ಯೋಗ ಮುದ್ರಾ,
ಚಿತ್ರಕಲೆ ಕಲಿಸಿ. ಪ್ರೋತ್ಸಾಹಿಸಿದ್ದಾರೆ

ಪ್ರಶಸ್ತಿಗಳು

1. ಕನ್ನಡ ಕಲ್ಪತರು
2. ನಾಗಲೋತಿಮಠ ಪ್ರಶಸ್ತಿ
3. ಗುರುತಿಲಕ
4. ನಾರಿ ಕುಲ ಚೇತನ ಪ್ರಶಸ್ತಿ
5. ತಾಲೂಕಾ ಮಟ್ಟದ ಆದರ್ಶ ಶಿಕ್ಷಕಿ
6. ಬೆಳಗಾವಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ
7. ಅನುಪಮ ಸೇವಾ ರತ್ನ.
8. ವಿಜಯ ಕರ್ನಾಟಕ, ಪಾಕ್ ಪ್ರವಿಣೆ ಪ್ರಶಸ್ತಿ
9. ಸುವರ್ಣ ಕ್ಲಬ್ ಅವರಿಂದ ಪ್ರಶಸ್ತಿ
10. ಹಿರಿಯ ನಾಗರಿಕ ಸಂಘದಿಂದ ಪ್ರಶಸ್ತಿ
11. ವಿಜಯ ಸೇವಾ ರತ್ನ ಪ್ರಶಸ್ತಿ.
ಮು೦ತಾದ ಪ್ರಶಸ್ತಿಗಳು ಲಭಿಸಿವೆ.

ಒಟ್ಟಿನಲ್ಲಿ ಅಕ್ಕಮಹಾದೇವಿ ಅವರು ಒಬ್ಬ ನಿಷ್ಠಾವಂತ ಬಸವ ತತ್ವದ ಅರಿವುಳ್ಳವರು ಮತ್ತು ಅದರ ಪರಿಪಾಲಕರು

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

LEAVE A REPLY

Please enter your comment!
Please enter your name here

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...

More Articles Like This

error: Content is protected !!
Join WhatsApp Group