ಹಳ್ಳೂರ- ಗ್ರಾಮದ ಶ್ರೀ ಬಸವೇಶ್ವರ ವೃತ್ತದಲ್ಲಿ ಹಳ್ಳೂರ, ಹಾಗೂ ಶಿವಾಪೂರ ಗ್ರಾಮದ ಸಹಕಾರಿ ಸಂಘ ಹಾಗೂ ಬ್ಯಾಂಕುಗಳ ಸಿಬ್ಬಂದಿಗಳು ಸ್ವಯಂ ಪ್ರೇರಿತವಾಗಿ ಒಂದು ದಿನ ಸಹಕಾರಿ, ಸಂಘಗಳನ್ನು ಬಂದ್ ಮಾಡಿ ಗುರ್ಲಾಪೂರದಲ್ಲಿ ನಡೆಯುತ್ತಿರುವ ರೈತರ ಕಬ್ಬು ಬೆಲೆ ನಿಗದಿಗೆ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಬೆಂಬಲ ಸೂಚಿಸಿದರು.
ಶ್ರೀ ಬಸವೇಶ್ವರರ ಕೊ ಆಪ್ ಕ್ರೆಡಿಟ್ ಸೊಸೈಟಿ ಕಾರ್ಯದರ್ಶಿ ರಾಮಣ್ಣ ಸುಣದೋಳಿ, ನಿರ್ದೇಶಕ ಬಸಪ್ಪ ಸಂತಿ, ಮೂಡಲಗಿ ಕೊ ಆಪರೆಟಿವ ಬ್ಯಾಂಕ ಮ್ಯಾನೇಜರ್ ಚಿದಾನಂದ ಡವಳೇಶ್ವರ, ರಾಣಿ ಚೆನ್ನಮ್ಮ ವಿವಿಧೋದ್ದೇಶಗಳ ಸಹಕಾರಿ ಸಂಘ ಅಧ್ಯಕ್ಷ ಸುರೇಶ ಡಬ್ಬನ್ನವರ, ಕಾರ್ಯದರ್ಶಿ ಬಸು ಬಸೆಟ್ಟಿ, ಧರೆಪ್ಪ ಸುಣದೋಳಿ, ಭೀಮಪ್ಪ ಹೊಟ್ಟಿ, ಗೂಳಪ್ಪ ನೇಸುರ, ಶಿವದುಂಡು ಕೊಂಗಾಲಿ, ಭರಮಪ್ಪ ರೊಡ್ಡನ್ನವರ, ಬಸಯ್ಯ ಹಿರೇಮಠ, ಭೀಮಪ್ಪ ಡಬ್ಬನ್ನವರ, ಈರಪ್ಪ ರಾಮದುರ್ಗ, ಬಸಪ್ಪ ಅರಳಿಮಟ್ಟಿ, ಗುರುನಾಥ ಬೋಳನ್ನವರ, ಬಸಯ್ಯ ಹಿರೇಮಠ, ಶಿವಪ್ಪ ಕೌಜಲಗಿ, ಪ್ರಕಾಶ ಅಂಗಡಿ, ಯಲ್ಲಾಲಿಂಗ ಹೊಸಟ್ಟಿ, ರೇವಯ್ಯ ಮಠದ, ಮಲ್ಲು ಕೊಂಗಾಲಿ, ಗಂಗಪ್ಪ ಡಬ್ಬನ್ನವರ, ಸಿದ್ದು ಬಡಿಗೇರ, ಮಾದೇವ ಬೆಣಚಿನಮರಡಿ ಸೇರಿದಂತೆ ಹಳ್ಳೂರ, ಶಿವಾಪೂರ ಗ್ರಾಮದ ಎಲ್ಲ ಸಹಕಾರಿ ಸಂಘದ ಸಿಬ್ಬಂದಿಗಳು,ಗ್ರಾಮಸ್ಥರಿದ್ದರು.

