ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

Must Read

ಬೆಳಗಾವಿ – ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ ಲೋಕೋಪಯೋಗಿ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿರೀಷ ಬಹುಮುಖ ಪ್ರತಿಭೆ ಸಂಘಟಕರಾಗಿ ಸಾಹಿತಿಗಳಾಗಿ ಸಂಗೀತಗಾರರಾಗಿ ರಂಗ ಕರ್ಮಿಯಾಗಿ ಗುರುತಿಸಿಕೊಂಡಿದ್ದಾರೆ

ಅವರು ಸಂಗೀತ ಆಧರಿಸಿ ಬರೆದ ಹಾರಿಹೋದ ಹಂಸ ಏಕಾಂಗಿ ,ಗುಜರಿ ತೋಡಿ ,ತಾನಸೇನ ಕೃತಿಗಳು ತುಂಬಾ ಜನಪ್ರಿಯವಾಗಿವೆ ಅವರ ಮಿಂಚು ನಾಟಕ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ದ ಪಠ್ಯವಾಗಿದೆ ಕರ್ನಾಟಕ ನಾಟಕ ಅಕಾಡೆಮಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ರಾಷ್ಟ್ರೀಯ ಸಿರಿಗನ್ನಡ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ

ಉದಯೋನ್ಮುಖ ಬರಹಗಾರರಿಗೆ ನೀಡುವ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಶಶಿ ತರೀಕೆರೆ ಅವರ ಪ್ಯೂಪಾ ಕವನ ಸಂಕಲನ ಆಯ್ಕೆಯಾಗಿದೆ ಬೆಂಗಳೂರಿನ ಇಸ್ರೋದಲ್ಲಿ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಶಶಿ ಚಿಕ್ಕಮಗಳೂರಿನ ತರಿಕೇರಿಯವರು ಛಂದ ಪುಸ್ತಕ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ ಟೋಟೋ ಪ್ರಶಸ್ತಿ ಮುಂತಾದ ಪ್ರಶಸ್ತಿ ಗಳಿಗೆ ಭಾಜನರಾಗಿರುವ ಶಶಿ ತಮ್ಮ ಡುಮಿಂಗ್, ತಿರಾಮಿಸು ಕಥಾಸಂಕಲನಗಳಿಂದ ಜನಪ್ರಿಯರಾಗಿದ್ದಾರೆ

ಇಬ್ಬರಿಗೂ ರವಿವಾರ ದಿ 21 /12/2025 ರಂದು ಬೆಳಗಾವಿಯಲ್ಲಿ ನಡೆವ ಸಮಾರಂಭದಲ್ಲಿ ನಗದು ಹಣ ಪ್ರಶಸ್ತಿ ಪತ್ರ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ ರಾಮಕೃಷ್ಣ ಮರಾಠೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group