ಬೀದರ – ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಕಾಡಿನಿಂದ ನಾಡಿಗೆ ಬಂದ ಜಿಂಕೆ ಮರಿ ಮನೆಯೊಂದರಲ್ಲಿ ಆಶ್ರಯ ಪಡೆದಿತ್ತು.
ಕಾಡಿನಿಂದ ನಿಂದ ಬಂದ ಜಿಂಕೆ ಮರಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಲು ಪ್ರಯತ್ನ ಮಾಡಿದವು ಆದರೆ ಜಿಂಕೆ ಮರಿ ಹೆದರಿ ಬಸವಕಲ್ಯಾಣ ನಗರದ ಶಿವ ಪುತ್ರ ಮುಖ್ಯ ರಸ್ತೆ ಯಲ್ಲಿ ಇರುವ ಪಾಟೀಲ ಆಸ್ಪತ್ರೆ ಒಳಗೆ ಓಡಿ ಹೋಗಿ ತನ್ನ ಪ್ರಾಣವನ್ನು ರಕ್ಷಿಸಿ ಕೊಂಡಿತು.
ಪಾಟೀಲ ಆಸ್ಪತ್ರೆ ವೈದ್ಯರು ತಮ್ಮ ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆ ಸೇರಿ ಜಿಂಕೆ ಮರಿ ರಕ್ಷಣೆ ಮಾಡಿ ಚಿಕಿತ್ಸೆ ನೀಡಿದರು.
ಜಿಂಕೆ ಮರಿಗೆ ಚಿಕಿತ್ಸೆ ನೀಡಿ ಅದು ಚೇತರಿಸಿಕೊಂಡ ಮೇಲೆ ಮತ್ತೆ ನಾಡಿನಿಂದ ಜಿಂಕೆ ಮರಿ ಗೆ ಕಾಡಿನ ಕಡೆ ಬಿಡಲಾಯಿತು. ಪಾಟೀಲ ಆಸ್ಪತ್ರೆ ವೈದ್ಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ