spot_img
spot_img

ಜಗತ್ತಿನ ಒಳಿತಿಗಾಗಿ ಬುಟ್ಟಿ ಜಾತ್ರೆ

Must Read

ಬೀದರ – ಜಗತ್ತಿಗೆ ಉತ್ತಮ ಮಳೆ ಬೆಳೆಯಾಗಿ ರೈತರ ಜೀವನ ಸುಖವಾಗಿ ಸಾಗಲಿ ಎಂದು ಪುರಾತನ ಕಾಲದಿಂದಲೂ ದೇವರಿಗೆ ಪೂಜೆ, ಪುನಸ್ಕಾರ ಮಾಡುವುದು ಮತ್ತು ಜಾತ್ರೆ ಮಾಡುವುದು ನಡೆದುಕೊಂಡು ಬಂದ ಪದ್ದತಿ. ಇಂತಹ ಒಂದು ಜಾತ್ರೆಯಲ್ಲಿ  ಬುಟ್ಟಿ ಜಾತ್ರೆ ವಿಶೇಷ. ಬೀದರ ತಾಲೂಕಿನ ಸಿರ್ಸಿ ಎ ಊರಿನಿಂದ ಬರೋಬ್ಬರಿ ಎರಡು ಕಿಲೋಮೀಟರ್ ದೂರದಲ್ಲಿರುವ
ಸಿದ್ದೇಶ್ವರ ದೇವಸ್ಥಾನದ ಗುಡ್ಡದಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ಈ ಜಾತ್ರೆಯನ್ನು ನಡೆಸಲಾಗುವುದು.

ಹೌದು ಬೀದರ್ ತಾಲ್ಲೂಕಿನ ಸಿರ್ಸಿ ಎ ಗ್ರಾಮದಲ್ಲಿ ಬುಟ್ಟಿ ಜಾತ್ರೆಯಿಂದ ಒಳ್ಳೆಯ ಮಳೆ, ಬೆಳೆ ಯಾಗುತ್ತದೆ ಎಂಬ ನಂಬಿಕೆಯಿಂದ ಪ್ರತಿ ವರ್ಷವೂ ಈ ಜಾತ್ರೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ರಸ್ತೆ ಉದ್ದಕ್ಕೂ ಭಜನೆ, ಕೀರ್ತನೆ ಮಾಡುತ್ತಾ ಹೆಣ್ಣು ಮಕ್ಕಳು ಬುತ್ತಿಯ ಬುಟ್ಟಿಯನ್ನು ತಲೆ ಮೇಲೆ ಇಟ್ಟುಕೊಂಡು ಸಾಗುತ್ತಾರೆ.

ಯಾವುದೇ ಜಾತಿ-ಧರ್ಮ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಅಚ್ಚುಕಟ್ಟಾಗಿ ಈ ಜಾತ್ರೆಯನ್ನು ಆಚರಿಸುತ್ತಾರೆ.

ಇದಕ್ಕಿಂತ ಮುಂಚೆ ಊರಿನ ಹಿರಿಯರು ಜಾತ್ರೆ ದಿನವನ್ನು ಗೊತ್ತುಮಾಡಿ, ಅದನ್ನು ಊರಲ್ಲಿ ಡಂಗುರ ಸಾರಿಸುತ್ತಾರೆ.  ದೇವರಿಗೆ ನೈವೇದ್ಯ ಅರ್ಪಿಸಲು ಜಾತ್ರೆಯ ದಿನ ದಪ್ಪಟ್ಟಿ (ಕಾರ ರೊಟ್ಟಿ), ಹೋಳಿಗೆ, ಹಾಲು, ತುಪ್ಪ, ಸಜ್ಜೆ ರೊಟ್ಟಿ, ಮಾಲದಿ,  ಚಿತ್ರಾನ್ನ ಮತ್ತು ಅನೇಕ ರೀತಿಯ ತಿನಿಸುಗಳನ್ನು ತಯಾರಿಸಿ  ಬುಟ್ಟಿಯಲ್ಲಿ  ಇಟ್ಟುಕೊಂಡು ಜಾತ್ರೆಗೆ ತೆರಳುವರು.

ದೇವಸ್ಥಾನಕ್ಕೆ ಬಂದ ಮೇಲೆ ದೇವಸ್ಥಾನದಲ್ಲಿನ  ಗುಡ್ಡದಲ್ಲಿ ಝರಿಯಾಗಿ  24ಗಂಟೆ ಹರಿಯುವ ನೀರನ್ನು ಬಿಂದಿಗೆಯಲ್ಲಿ ತಂದು ದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸುತ್ತಾರೆ.

ದೇವರ ಪೂಜೆಯಾದ ಬಳಿಕ, ಎಲ್ಲರೂ ಒಂದೆಡೆ ಕೂತು ಮನೆಯಿಂದ ತಂದ ಊಟವನ್ನು ಹಂಚಿಕೊಂಡು ತಿನ್ನುವರು. ಊಟದ ನಂತರ ಮಕ್ಕಳು ಕಬಡ್ಡಿ, ಲಗೋರಿ, ಕಣ್ಣಾಮುಚ್ಚಾಲೇ, ದಪ್ಪನ-ದುಪ್ಪಿ(ಚೆಂಡಿನ ಆಟ), ಆಣೆಕಲ್ಲು, ಕುಂಟೆ-ಪಿಲ್ಲಿ, ಕ್ರಿಕೆಟ್ ಮುಂತಾದ ಆಟಗಳನ್ನು ಆಡುವರು.

ಬುಟ್ಟಿ ಜಾತ್ರೆ ದಿನವೇ ಒಮ್ಮೊಮ್ಮೆ ಸಣ್ಣದಾಗಿಯಾದರೂ ಮಳೆಯಾಗುತ್ತದೆ ಸೂರ್ಯ ಮುಳುಗುವ ಹೊತ್ತಿಗೆ, ದೇವರಿಗೆ ಜೈಕಾರ ಹೇಳುತ್ತಾ ಜನರು ಊರಿನ ಕಡೆ ತೆರಳುವರು ಬುಟ್ಟಿ ಜಾತ್ರೆ ದಿನವೇ ಒಮ್ಮೊಮ್ಮೆ ಸಣ್ಣದಾಗಿಯಾದರೂ ಮಳೆಯಾಗುತ್ತದೆ, ಆಗ ಮಳೆಯಲಿ ತೋಯಿಸಿಕೊಂಡೇ ಮನೆಗೆ ಬರಬೇಕು ಎಂದು ಹಿರಿಯರು ಹೇಳುತ್ತಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!