spot_img
spot_img

ಓದಿನ ಆನಂದ ನೀಡುವ ಪುಸ್ತಕ

Must Read

- Advertisement -

ನಾವೇಕೆ ಓದುತ್ತೇವೆ? ಮಾಹಿತಿಗಾಗಿ? ಮನೋರಂಜನೆಗಾಗಿ? ಕಾಲಕ್ಷೇಪಕ್ಕಾಗಿ?… ಒಬ್ಬೊಬ್ಬರದು ಒಂದೊಂದು ಕಾರಣವಿರಬಹುದು.

ಯಾರು ಯಾವ ಕಾರಣಕ್ಕಾಗಿ ಓದಿದರೂ, ಈ ಎಲ್ಲ ಸಂಗತಿಗಳ ಹೊರತಾಗಿ, ಪುಸ್ತಕವೊಂದು ನಮಗೆ ಆನಂದವನ್ನು ನೀಡಬೇಕು. ‘ಓದಿನ ಸುಖ’ ಎನ್ನುತ್ತೇವಲ್ಲ, ಒಂದು ಪುಸ್ತಕದ ಓದು ನಮಗೆ ಆ ಸಂತೋಷವನ್ನು ಕೊಡಬೇಕು. ಬಹುಶಃ ಎಲ್ಲರ ಓದಿನ ಮೂಲ ಕಾರಣ ಇದೇ. ನಮಗಿಂದು ಓದಿಗೆ ಒದಗಬಲ್ಲ ಪುಸ್ತಕಗಳ ಸಂಖ್ಯೆಗೇನೂ ಕೊರತೆಯಿಲ್ಲ. ಅವರವರ ಅಭಿರುಚಿಗೆ ತಕ್ಕಂತೆ ಪುಸ್ತಕಗಳು ಇಂದು ದಂಡಿಯಾಗಿ ದೊರೆಯುತ್ತವೆ.

ಆದರೆ, ಆ ಪುಸ್ತಕಗಳ ಓದು ಸುಖ ಕೊಡುತ್ತಿದೆಯೇ? ಆನಂದವನ್ನು ಕೊಡುತ್ತಿದೆಯೇ? ಸ್ಪಷ್ಟವಾಗಿ ಹೇಳುವುದು ಕಷ್ಟ. ಕೆಲವು ಪುಸ್ತಕಗಳು ಮಾಹಿತಿಯನ್ನೊ ಮನೋರಂಜನೆಯನ್ನೊ ನೀಡಿದರೂ, ಅದು ಕೆಲವು ಸಮಯಗಳವರೆಗೆ ಮಾತ್ರ! ತಿಂಗಳು ಕಳೆಯುವಷ್ಟರಲ್ಲಿ ಓದಿದ್ದೆಲ್ಲ ಮರೆತುಹೋಗಿರತ್ತೆ. ಹಾಗಾಗಿಯೇ, ಎಷ್ಟೋ ಪುಸ್ತಕಗಳು ಹತ್ತಾರು ವರ್ಷದ ನಂತರ ಜನಮಾನಸದಿಂದಲೇ ಕಣ್ಮರೆಯಾಗುತ್ತವೆ.

- Advertisement -

ವಾಸ್ತವ ಹೀಗಿರುವಾಗ, ಈ ದೇಶದಲ್ಲಿ ರಾಮಾಯಣ_ಮಹಾಭಾರತಗಳು ಅದೆಷ್ಟು ಶತಮಾನಗಳಿಂದ ಉಳಿದುಕೊಂಡು ಬಂದಿವೆ ಎಂಬುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಅದಕ್ಕೆ ಕಾರಣ ಏನು? ಅವು ನೀಡುವ ಮನೋರಂಜನೆಯೆ? ಮಾಹಿತಿಯೆ?ಬಹುಶಃ ಮಾಹಿತಿ ಮನೋರಂಜನೆಗಳನ್ನು ಒದಗಿಸುವುದಷ್ಟೇ ಇವುಗಳ ಉದ್ದೇಶವಾಗಿದ್ದರೆ ಇವೆರಡೂ ಯಾವಾಗಲೋ ಕಣ್ಮರೆಯಾಗಿಬಿಡಬೇಕಿತ್ತು.

ಮಾಹಿತಿ ಮನೋರಂಜನೆಯ ಹೊರತಾಗಿ, ಇವೆರಡೂ ಕೃತಿಗಳು ನೀಡುವ ಓದಿನಸುಖ ಇದೆಯಲ್ಲ, ಅದು ದೊಡ್ಡದು. ಆ ‘ಸುಖ’ ನಮಗೆ ಕೇವಲ ಸಂತೋಷವನ್ನಷ್ಟೆ ನೀಡುವುದಿಲ್ಲ; ನಮ್ಮ ಬದುಕಿಗೆ ಮಾರ್ಗದರ್ಶನವನ್ನೂ ಮಾಡುತ್ತದೆ, ಗೆದ್ದಾಗ ಸಂಯಮದಿಂದಿರುವುದನ್ನೂ ಸೋತಾಗ ಕುಗ್ಗದೆ ಧೈರ್ಯದಿಂದಿರುವುದನ್ನೂ ಕಲಿಸುತ್ತದೆ. ಹಾಗಾಗಿ, ಒಮ್ಮೆ ರಾಮಾಯಣವನ್ನೊ ಮಹಾಭಾರತವನ್ನೊ ಓದಿದವರು, ಕಥೆಗಳನ್ನು ಕೇಳಿದವರು ಅವುಗಳನ್ನು ಮರೆಯಲು ಸಾಧ್ಯವಿಲ್ಲ.

ಒಂದು ಕೃತಿಯನ್ನು ನಾವು ಓದಬೇಕಾಗಿರುವುದು ಬದುಕಿನಲ್ಲಿ ಭರವಸೆಯನ್ನು ತುಂಬಿಕೊಳ್ಳುವುದಕ್ಕಾಗಿ!

- Advertisement -

ಈ ಉದ್ದೇಶಕ್ಕೆ ಒದಗಿಬರುವ ರಾಮಾಯಣ_ಮಹಾಭಾರತಗಳನ್ನು ನಾವೂ ಓದಬೇಕು; ನಮ್ಮ ಪ್ರೀತಿಪಾತ್ರರಿಗೂ ಓದಿಸಬೇಕು.  ರಾಮಾಯಣ ಮಹಾಭಾರತಗಳನ್ನು ಮತ್ತು ಸದಭಿರುಚಿಯ ಉತ್ತಮ ಪುಸ್ತಕಗಳನ್ನು ಆಸಕ್ತರಿಗೆ ತಲಪಿಸುವ ಉದ್ದೇಶದಿಂದ ಪ್ರಾರಂಭವಾದ ಸಾಹಿತ್ಯಭಾರತಿ ಗೆ ಈಗ ವರ್ಷಪೂರ್ತಿ ಯ ಸಂದರ್ಭ.

ಈ ಸಂಭ್ರಮದ ಸಮಯದಲ್ಲಿ, ರಾಮಾಯಣ_ಮಹಾಭಾರತ ಕೃತಿಗಳನ್ನು ಹೆಚ್ಚು ಜನರಿಗೆ ತಲಪಿಸುವ ಉದ್ದೇಶದಿಂದ ರಿಯಾಯಿತಿಯಲ್ಲಿ ನೀಡಲು ಉದ್ದೇಶಿಸಿದ್ದೇವೆ. ಜುಲೈ ೧ರಿಂದ ೫ರ ವರೆಗೆ ಈ ಅವಕಾಶವಿದ್ದು, ಆಸಕ್ತರು ಇದರ ಸದುಪಯೋಗ ಪಡೆಯಬೇಕೆಂದು ಕೋರಲಾಗಿದೆ.


ಹೆಚ್ಚಿನ ವಿವರಗಳಿಗಾಗಿ WhatsApp ಮಾಡಿ: 7483681708

- Advertisement -
- Advertisement -

Latest News

ಬಡವರ ಮನೆ ಊಟ ಚಂದ ಸ್ಥಿತಿವಂತರ ಮನೇಲಿ ಆಟ ಚಂದ ಆದರೂ ಯಾರ ನೆಮ್ಮದಿ ಎಲ್ಲಿ ಅಡಗಿದೆಯೋ ಬಲ್ಲವರಾರು?

ಅಮ್ಮ ನಿನಗ್ ಎಷ್ಟ ಸಲ ಹೇಳಿದಿನಿ ಪಕ್ಕದ ಮನೆಗೆ ಹೋಗಬೇಡಾ ಅಂತ.ನಿನಗೆ ಬೇಜಾರಾದ್ರೆ ಟಿವಿ ನೋಡು,ನಿದ್ದೆ ಮಾಡು, ಬೇಕಿದ್ರೆ ಮನೇಲೆ ಭಜನೆ, ದೇವರ ನಾಮಸ್ಮರಣೆ ಇಂತದ್ದೇನೋ...
- Advertisement -

More Articles Like This

- Advertisement -
close
error: Content is protected !!
Join WhatsApp Group