- Advertisement -
ಸಿಂದಗಿ: ಪಟ್ಟಣದ ನಾಗೂರ ಬಡಾವಣೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ನೂಲ ಹುಣ್ಣಿಮೆಯ ಪ್ರಯುಕ್ತ ಸಂಭ್ರಮದ ರಕ್ಷಾಬಂಧನವನ್ನು ಆಚರಿಸಲಾಯಿತು.
ಶಾಲೆಯ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ಹಂಚಿ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಆರ್ ಡಿ ಕುಲಕರ್ಣಿ, ರಕ್ಷಾಬಂಧನವು ಸಹೋದರತ್ವ ಮತ್ತು ರಕ್ಷೆಯನ್ನು ನೀಡುವ ಸಂಭ್ರಮದ ಹಬ್ಬವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
- Advertisement -
ಸಂಸ್ಥೆಯ ನಿರ್ದೆಶಕರಾದ ಪಿ.ಡಿ. ಕುಲಕರ್ಣಿ, ಮುಖ್ಯೋಪಾಧ್ಯಾನಿಯರಾದ ಶ್ರೀಮತಿ ಎಮ್.ಪಿ. ಬುಕ್ಕಾ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.