spot_img
spot_img

ತಾಯ್ನಾಡಿಗೆ ಮರಳಿದ ಯೋಧನಿಗೆ ಸಂಭ್ರಮದ ಸ್ವಾಗತ

Must Read

ಸಿಂದಗಿ: ದೇಶ ಸೇವಕರಿಗೆ ಯಾವುದೇ ಜಾತಿಯಿಲ್ಲ ಭಾರತ ದೇಶ ಒಂದೇ ಕಾರಣ ನಾವೆಲ್ಲರೂ ಜಾತಿ ಭೇದ ಮರೆತು ಒಗ್ಗಟ್ಟಾಗಿ ಸೈನಿಕರೊಂದಿಗೆ ದೇಶ ಕಟ್ಟೋಣ ಎಂದು ನಿವೃತ್ತ ಡಿವೈಎಸ್ಪಿ ಎ.ಎಚ್.ಚಿಕ್ಕೊಡಿ ಸಲಹೆ ನೀಡಿದರು.

ತಾಲೂಕಿನ ಮಾಡಬಾಳ ಗ್ರಾಮದಲ್ಲಿ 22 ವರ್ಷ ದೇಶಸೇವೆ ಮಾಡಿ ನಿವೃತ್ತಿ ಹೊಂದಿ ಮರಳಿ ಗ್ರಾಮಕ್ಕೆ ಆಗಮಿಸಿದ ಜಾಹೀರಪಟೇಲ ಬಿರಾದಾರ ವೀರಯೋಧನಿಗೆ ಭವ್ಯ ಮೆರವಣಿಗೆಯೊಂದಿಗೆ ರಾಷ್ಟ್ರದ್ವಜದೊಂದಿಗೆ ರಾಷ್ಟ್ರದ ಯೋಧರ ಬಗ್ಗೆ ಜಯಘೋಷದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿ ಮಾತನಾಡಿದರು.

ಗ್ರಾಮದ ಮಧ್ಯಭಾಗದಲ್ಲಿ ಭವ್ಯ ವೇದಿಕೆ ರೂಪಿಸಿ ಹಿರಿಯರಾದಿಯಾಗಿ ಗ್ರಾಮದ ಯುವಕರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ ಯಳಮೇಲಿ ಮಾತನಾಡಿ, ಸೈನಿಕರು ದೇಶದ ಶ್ರೇಷ್ಠ ಆಸ್ತಿಗಳಲ್ಲಿ ಒಬ್ಬರು  ಎಂದರು.

ಕೃಷಿ ಅಧಿಕಾರಿ ಶಿವು, ಶಿಕ್ಷಕ ಸಿದ್ದಲಿಂಗ ಚೌಧರಿ ಮಾತನಾಡಿ, ಯುವಕರು ದುಶ್ಚಟದಿಂದ ದೂರವಿದ್ದು ಸೈನ್ಯ ಸೇರಿ ದೇಶ ಕಟ್ಟಬೇಕು. ಅನ್ನಕೊಡುವ ರೈತ, ದೇಶ ಕಾಯುವ ಯೋಧ ಕರ್ತವ್ಯ ಮರೆತರೆ ದೇಶವೇ ನಾಶವಾದೀತು ಎಂದು ಎಚ್ಚರಿಸಿದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಡಾ. ದಸ್ತಗೀರ ಮುಲ್ಲಾ ಮಾತನಾಡಿ, ನಾವೆಲ್ಲರೂ ದೇಶದೊಳಗೆ ಆರಾಮವಾಗಿದ್ದೇವೆ ಅಂದರೆ ಗಡಿಯಲ್ಲಿ ಸೈನಿಕರು ನಿದ್ದೆಗೆಟ್ಟು ಕಾಯುತ್ತಿರುವುದರಿಂದಲೇ ಸರಕಾರ ಸೈನಿಕರ ಬಗ್ಗೆ ಕಾಳಜಿವಹಿಸಬೇಕು ಎಂದು ಆಗ್ರಹಿಸಿದರು. ಶಂಕ್ರಯ್ಯ ಸ್ವಾಮಿ, ಸಿದ್ದರಾಮ ದೇವರು ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಯೋಧನ ತಂದೆ-ತಾಯಿ ಹಾಗೂ ಮುರಳೀದರ ಕುಲಕರ್ಣಿ, ನಬಿಸಾಬ ಮುಲ್ಲಾ, ಮಾಜಿ ಸೈನಿಕರಾದ ಶಬ್ಬೀರ ಪಟೇಲ ಬಿರಾದಾರ ಸೇರಿದಂತೆ ನಿವೃತ್ತ ಯೋಧರು, ಗ್ರಾಮದ ಸಂಘ, ಸಂಸ್ತೆಯ ಮುಖ್ಯಸ್ಥರು, ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಹಳ್ಳೆಪ್ಪ ಮೂಲಿಮನಿ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸಿಂದಗಿಯ ಬಸವೇಶ್ವರ ವೃತ್ತದಲ್ಲಿ ಮಾಡಬಾಳ ಗ್ರಾಮದವರೆಗೆ ಬೈಕ್ ರ್ಯಾಲಿ ಮೂಲಕ ಮೆರೆವಣಿಗೆ ನಡೆಸಿದರು.  ರಸ್ತೆ ಬದಿಯಲ್ಲಿ ಪ್ರತಿಮನೆಯ ಮುಂದೆ ಮಹಿಳೆಯರು ಆರತಿ ಮಾಡಿ ಪುಷ್ಪಾರ್ಚನೆ ಮಾಡಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!