ಸಿಂದಗಿ: ಇಡೀ ದೇಶವೇ ಲಾಕ್‍ಡೌನ್ ಆಗಿ ತತ್ತರಿಸಿ ಹೋಗಿದೆ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕಂಗಾಲಾಗಿದೆ ಇದರಿಂದ ಸಂಕಷ್ಟ ಎದುರಿಸುತ್ತಿದ್ದು ಅದಕ್ಕೆ ಕರೋನಾ ಹರಡಬಾರದು ಎನ್ನುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ರಾಜ್ಯವನ್ನೇ ಲಾಕ್‍ಡೌನ್ ಮಾಡಿದೆ ಆದರೆ ವಿದ್ಯುತ್‍ಶಕ್ತಿ ಸರಬರಾಜ ಕಂಪನಿ ಮಾತ್ರ ಮುಚ್ಚಿದ ಅಂಗಡಿ ಮುಗ್ಗಟ್ಟುಗಳಿಗೆ ಡೋರ್‍ಲಾಕ್ ಎಂದು ಅಂದಾಜು ಬಿಲ್ಲುನೊಂದಿಗೆ ದಂಡ ಸಹಿತ ಬಿಲ್ಲು ನೀಡಿ ಶಾಕ್ ನೀಡುತ್ತಿದೆ ಇದಕ್ಕೆ ಲಾಕ್‍ಡೌನ್ ನಿಯಮ ಅನ್ವಯವಾಗುವುದಿಲ್ಲವೇ ಎಂದು ಸಾರ್ವಜನಿಕರ ಪ್ರಶ್ನೆ ಮಾಡುವಂತಾಗಿದೆ.
ಹೌದು. ಜಿಲ್ಲೆ, ತಾಲೂಕು, ಗ್ರಾಮಗಳಿಂದ ಯಾರು ಮನೆ ಬಿಟ್ಟು ಹೊರಗಡೆ ಬರುವಂತಿಲ್ಲ, ನಿಗದಿತ ಸಮಯದವರೆಗೆ ದಿನಸಿ ವಸ್ತುಗಳ ಅಂಗಡಿಗಳು ಹೊರತು ಪಡಿಸಿದರೆ ಯಾವುದೇ ಅಂಗಡಿ ಮುಗ್ಗಟ್ಟುಗಳು ತೆರೆಯದಂತೆ ಇಡೀ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಮುಖೇನ ಆದೇಶ ಹೊರಡಿಸಿದೆ ಅದರನ್ವಯ ಗ್ರಾಮಗಳು ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಕಿರಾಣಿ ಅಂಗಡಿ, ಮದ್ಯದ ಅಂಗಡಿ, ಮೆಡಿಕಲ್, ದವಾಖಾನೆ ಸೇರಿದಂತೆ ದಿನ ಬಳಕೆ ವಸ್ತುಗಳ ಅಂಗಡಿಗಳನ್ನು ಹೊರತು ಪಡಿಸಿದರೆ ಯಾವುದೇ ಅಂಗಡಿಗಳು ಪ್ರಾರಂಭವಾಗದೇ ಸುಮಾರು ತಿಂಗಳುಗಳೆ ಕಳೆದಿವೇ ಇದರಿಂದ ವಿದ್ಯುತ್ ಬಳಕೆಯಾಗಿಲ್ಲ ಆದರೆ ವಿದ್ಯುತ್ ಸರಬರಾಜ ಕಂಪನಿ ಮಾತ್ರ ಮುಚ್ಚಿದ ಅಂಗಡಿಗಳಿಗೆ ಅಂದಾಜು ರೀಡಿಂಗ್ ಬಿಲ್ಲು ಹಾಕುವ ಮೂಲಕ ಅದಕ್ಕೆ ದಂಡ ಸಹಿತ ಬಿಲ್ಲು ಸಂದಾಯ ಮಾಡುತ್ತಿದೆ ಇದರಿಂದ ಲಾಕ್‍ಡೌನ್‍ನಿಂದ ಅಂಗಡಿ ಮುಚ್ಚಿದ್ದು ಮಾಲೀಕರಿಗೆ ದೊಡ್ಡ ಹೊಡೆತ ಬಿದ್ದು ಕಂಗಾಲಾಗಿದ್ದಾರೆ. ವಿದ್ಯುತ್ ಸರಬರಾಜು ಕಂಪನಿಯ ಸಿಬ್ಬಂದಿ ಮಾತ್ರ ದಂಡ ಸಮೇತ ಬಿಲ್ಲು ಸಂದಾಯ ಮಾಡುತ್ತಿದ್ದರಿಂದ ಇನ್ನಷ್ಟು ತಲೆ ನೋವು ಉಂಟು ಮಾಡಿದೆ ಆದರೆ ಕರೋನಾ ನಿಯಮಗಳಲ್ಲಿ ಲಾಕ್‍ಡೌನ್ ಹಾಕುವದಕ್ಕಿಂತ ಮುಂಚೆ ಎಲ್ಲ ಅಂಗಡಿ ಗ್ರಾಹಕರಿಗೆ ಕರೆಂಟ್ ಕಟ್ ಮಾಡಿಸಿಕೊಳ್ಳಿ ಮತ್ತೆ ಲಾಕ್‍ಡೌನ್ ತೆರೆದ ಬಳಿಕ ವಿದ್ಯುತ್ ಬಳಕೆಗೆ ಅವಕಾಶ ಕಲ್ಪಿಸಿಕೊಳ್ಳಿ ಎಂದು ಆದೇಶ ಮಾಡಿಬೇಕಾಗಿತ್ತು ಇಂತಹ ಯಾವುದೇ ನಿಯಮಗಳನ್ನು ಜಾರಿ ಮಾಡದೇ ಇರುವುದರಿಂದ ಮುಚ್ಚಿದ ಅಂಗಡಿಗಳಿಗೂ ವಿದ್ಯುತ್ದ ಸರಬರಾಜ ಕಂಪನಿಗೆ ವಿನಾಕಾರಣ ಬಿಲ್ಲು ಸಂದಾಯ ಮಾಡಬೇಕಾಗುವ ಪರಿಸ್ಥಿತಿ ಬಂದೊದಗಿದೆ ಸರಕಾರ ಇದರ ಬಗ್ಗೆ ತುಲನಾತ್ಮಕ ಚಿಂತನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.
ಲಾಕ್‍ಡೌನ್‍ನಿಂದ ದಿನಸಿ ವಸ್ತುಗಳ ಅಂಗಡಿಗಳು ಹೊರತು ಪಡಿಸಿದರೆ ಯಾವುದೇ ಅಂಗಡಿ ಮುಗ್ಗಟ್ಟುಗಳು ತೆರೆಯದಂತೆ ಸರಕಾರದ ಆದೇಶವಿದೆ ಆದರೆ ವಿದ್ಯುತ್ ಸರಬರಾಜ ಕಂಪನಿ ಮಾತ್ರ ಬಿಲ್ಲು ತಡೆಹಿಡಿಯುವಂತೆ ಆದೇಶ ನೀಡಿಲ್ಲ ಡೋರ್‍ಲಾಕ್ ಇದ್ದರೂ ಕೂಡಾ ಅಂದಾಜು ರಿಡಿಂಗ್ ವಿದ್ಯುತ್ ಬಳಕೆ ಬಿಲ್ಲು ಸಂದಾಯ ಮಾಡಲಾಗುತ್ತಿದೆ ಅಂಗಡಿಗಳು ತೆರೆದ ನಂತರ ಬಳಕೆಯಾದ ವಿದ್ಯುತ್ ಬಿಲ್ಲ ಸೇರಿಕೊಳ್ಳುತ್ತದೆ ಕರೋನಾ ನಿಯಮ ನಮ್ಮ ಕಂಪನಿಗೆ ಅನ್ವಯಾಗುವುದಿಲ್ಲ.
ಚಂದ್ರಕಾಂತ ನಾಯಕ.
ಎಇಇ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಸಿಂದಗಿ.
ಕರೋನಾದಿಂದ ಲಾಕ್‍ಡೌನ್ ಹಾಕುವದಕ್ಕಿಂತ ಮುಂಚೆ ಎಲ್ಲ ಅಂಗಡಿ ಗ್ರಾಹಕರಿಗೆ ಕರೆಂಟ್ ಕಟ್ ಮಾಡಿಸಿಕೊಳ್ಳಿ ಮತ್ತೆ ಲಾಕ್‍ಡೌನ್ ತೆರೆದ ಬಳಿಕ ವಿದ್ಯುತ್ ಬಳಕೆಗೆ ಅವಕಾಶ ಕಲ್ಪಿಸಿಕೊಳ್ಳಿ ಎಂದು ಆದೇಶ ಮಾಡಿಬೇಕಾಗಿತ್ತು ಇಂತಹ ಯಾವುದೇ ನಿಯಮಗಳನ್ನು ಜಾರಿ ಮಾಡಿಲ್ಲ ಇದರಿಂದ ಮುಚ್ಚಿದ ಅಂಗಡಿಗೂ ಕರೆಂಟ್ ಬಿಲ್ಲು ಕಟ್ಟಬೇಕಾಗಿದೆ ಸರಕಾರಕ್ಕೆ ಉಗಿಬೇಕೋ. ನಮ್ಮ ಬದುಕಿಗೆ ನಮಗೆ ನಾವೇ ಉಗಿದುಕೊಳ್ಳಬೇಕೊ ಗೊತ್ತಾಗುತ್ತಿಲ್ಲ.
ಜಿಲಾನಿ ಮುಲ್ಲಾ.
ಅಂಗಡಿ ಮಾಲೀಕ
ವರದಿ: ಪಂಡಿತ ಯಂಪೂರೆ