- Advertisement -
ಬೀದರ – ಹುಮನಾಬಾದ್ ತಾಲೂಕಿನ ಹುಡುಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಎಸ್ ಡಿಎ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ
ಆರೋಗ್ಯ ಕೇಂದ್ರ ಎಸ್ ಡಿಎ ಸುನೀಲ್ ಕಾಜಿ ಇಲ್ಲಿನ ನೌಕರರೊಬ್ಬರ ೧೦ ತಿಂಗಳ ಸಂಬಳ ಹಾಗೂ ಪ್ರಯಾಣ ಭತ್ಯೆ ಜಮಾ ಮಾಡಲು ೨೦ ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದನೆನ್ನಲಾಗಿದ್ದು ಹೆಲ್ತ್ ಇನ್ಸಪೆಕ್ಟರ್ ಶ್ರೀನಿವಾಸ ರೆಡ್ಡಿ ದೂರಿನ ಮೇರೆಗೆ ಲೋಕಾಯುಕ್ತ ದಾಳಿ ನಡೆದಿತ್ತು.
ಲೋಕಾಯುಕ್ತ ಡಿವೈಎಸ್ಪಿ ಓಲೇಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಈ ಭ್ರಷ್ಟ ಅಧಿಕಾರಿ ಸಿಕ್ಕಿ ಬಿದ್ದಿದ್ದಾನೆ
- Advertisement -
ವರದಿ : ನಂದಕುಮಾರ ಕರಂಜೆ, ಬೀದರ