spot_img
spot_img

ಮಾಧವಾನಂದರ ಚರಿತ್ರೆಯನ್ನು ಪಠ್ಯದಲ್ಲಿ ಸೇರಿಸಲು ಆಗ್ರಹ

Must Read

ಸಿಂದಗಿ: ಮಾಧವಾನಂದರ ಜೀವನ ಚರಿತ್ರೆಯನ್ನು ಕಾಲೇಜು ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳ ಓದುವ ಪಠ್ಯಕ್ರಮದಲ್ಲಿ ಅಳವಡಿಸಬೇಕು ಅದರೊಂದಿಗೆ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದಲ್ಲಿ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಯವರ ಭಾವಚಿತ್ರವನ್ನು ಇಟ್ಟು ಪೂಜಿಸಬೇಕು ಎಂದು ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಗ್ರೇಡ್ 2 ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಶ್ವಪ್ರಕಾಶ ಮಲಗೊಂಡ ಮಾತನಾಡಿ, ಶ್ರೇಷ್ಠ ಪರಂಪರೆಯನ್ನು ಹಾಗೂ ಗುರುವೃಂದವನ್ನು ಪಡೆದಿದ್ದು ನಮ್ಮ ಭಾರತೀಯ ತಾಯ್ನಾಡಿನ ಪುಣ್ಯ ಹಾಗಾಗಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದಲ್ಲಿ ಮಾಧವಾನಂದ ಪ್ರಭುಜಿಯವರು, ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಯವರು ಸ್ವಾತಂತ್ರ್ಯಕ್ಕಾಗಿ ಸಲ್ಲಿಸಿದ ಸೇವೆ ಸ್ಮರಣೆಯಾಗಲಿ ಹಾಗೂ ಭಾರತದ ಯುವ ಸಮುದಾಯಕ್ಕೆ ಶ್ರೀಗಳು ತಾಯ್ನಾಡಿಗೋಸ್ಕರ ಗೈದ ಸೇವೆ ಪ್ರೇರಣೆಯಾಗಲಿ ಎಂಬ ಮಹಾದಾಸೆ ಇಂಚಗೇರಿ ಸಂಪ್ರದಾಯದ ಎಲ್ಲ ಸದ್ಗುರುಗಳ ಹಾಗೂ ಸದ್ಭಕ್ತರದಾಗಿದೆ ಕಾರಣ ಸ್ವಾತಂತ್ರ್ಯೋತ್ಸವ ದಿನದಂದು ಅವರ ಭಾವಚಿತ್ರವನ್ನು ಇಟ್ಟು ಪೂಜಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಸರ್ಕಾರಕ್ಕೆ ಮಾಧವಾನಂದ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮ ಆಗುವಂತೆ ಸಂಪ್ರದಾಯದ ಹಿರಿಯರು ಸಹಿ ಸಂಗ್ರಹ ಅಭಿಯಾನ ನಡೆಸಿ ಮನವಿಗಳನ್ನು ಅನೇಕ ಬಾರಿ ಸರ್ಕಾರಕ್ಕೆ ವಿತರಣೆ ಮಾಡಿದ್ದಾರೆ ದಯವಿಟ್ಟು ಸರ್ಕಾರ ಈ ಒಂದು ಕಾರ್ಯವನ್ನು ಜಾರಿಗೆ ತಂದು ಸದ್ಗುರು ಸಮರ್ಥರ ಆಶೀರ್ವಾದಕ್ಕೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಪಾತ್ರರಾಗಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಹರ್ಷವರ್ಧನ ಪೂಜಾರಿ ಮಾತನಾಡಿ, ಮಹಾತ್ಮಾ ಗಾಂಧೀಜಿ, ಸುಭಾಶ್ಚಂದ್ರ ಭೋಸ್ ಅವರೊಂದಿಗೆ ನಿಕಟ ಸಂಪರ್ಕವನ್ನು ಮಾಧವಾನಂದ ಪ್ರಭುಜಿಯವರು ಹೊಂದಿದ್ದರ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಳಿ ಇರುವ ಶ್ರೀ ಗಿರೀಶ ಆಶ್ರಮದಲ್ಲಿ ಸ್ವಾತಂತ್ರ್ಯ ಹೋರಾಟ ಕುರಿತಾಗಿ ಮಾಧವಾನಂದ ಪ್ರಭುಜಿಗಳು ನಡೆಸಿದ ಗುಪ್ತ ಸಭೆಯಲ್ಲಿ ಸುಭಾಶ್ಚಂದ್ರ ಭೋಸ್ ಅವರು ಪಾಲ್ಗೊಂಡಿದ್ದು ಗಮನಾರ್ಹವಾಗಿದೆ ಹಾಗೂ ಬ್ರಿಟೀಷರ ಕಪಿಮುಷ್ಠಿಯಿಂದ ತಾಯ್ನಾಡನ್ನು ಹೇಗಾದರೂ ಮುಕ್ತ ಮಾಡಬೇಕೆನ್ನುವ ಸಂಕಲ್ಪದಿಂದ ಕೊಟ್ಟಲಗಿಯಲ್ಲಿ ಬಂದೂಕ ಫ್ಯಾಕ್ಟರಿಯನ್ನು ಪ್ರಾರಂಭಿಸಿದ ಪೂಜ್ಯರು ಮಾಧವಾನಂದ ಪ್ರಭುಜಿಯವರು ತಮ್ಮ 1948 ರಲ್ಲಿ ಬಸವೇಶ್ವರರ ಪರಿಕಲ್ಪನೆಯ ಅಂರ್ತಜಾತಿ ವಿವಾಹವನ್ನು ಮಾಡಿಸಿ ಅಂರ್ತಜಾತಿ ಹರಿಕಾರರಾದರು ಈ ಒಂದು ಪರಿಣಾಮದಿಂದ 20 ಸಾವಿರಕ್ಕೂ ಅಧಿಕ ಅಂತರ್ಜಾತಿ ವಿವಾಹವನ್ನು ಮಾಡಿಸಿದ ಕೀರ್ತಿ ಶ್ರೀಮಠಕ್ಕೆ ಸಲ್ಲುತ್ತದೆ ಸದ್ಗುರು ಮಾಧವಾನಂದರು ಕರ್ನಾಟಕ ಏಕೀಕರಣ ಹಾಗೂ ಸಂಸ್ಥಾನ ವಿಲೀನಿಕರಣ ಹಾಗೂ ಹೈದ್ರಾಬಾದ ಸಂಸ್ಥಾನ ವಿಲೀನಿಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರಲ್ಲಿ ಇಂಚಗೇರಿಮಠದ ಕ್ರಾಂತಿಯೋಗಿ ಸ್ವತಂತ್ರ ಹೋರಾಟಗಾರ ಬಾಲಬ್ರಹ್ಮಚಾರಿ ಶ್ರೀ ಸ.ಸ. ಮಾಧವಾನಂದ ಪ್ರಭುಜಿಯವರು ಅವರ ಭಾವಚಿತ್ರ ಇಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಆರೀಫ ಅಂತರಗಂಗಿ, ವಿವೇಕಾನಂದ ಹಿರೇಮಠ, ವಿಶ್ವ ಬಿರಾದಾರ, ಸಿದ್ದು ತಳಲಿ, ರಾಜು ಗುಬ್ಬೇವಾಡ, ಕುಮಾರ ಹಿಪ್ಪರಗಿ, ಸೇರಿದ್ದಂತೆ ಅನೇಕರು ಇದ್ದರು.

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!