ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬೆಳಗಾವಿ ಕನ್ನಡ ಭವನದಲ್ಲಿ ಲಿಂಗೈಕ್ಯ ಶ್ರೀ ಅಲ್ಲಮ ಪ್ರಭು ಮಹಾಸ್ವಾಮಿಗಳು ಚಿಂಚಣಿ ಅವರ ದಿವ್ಯ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ. ಶ್ರೀ.ಮೆಟಗುಡ್ಡ ಅವರು ಮಾತನಾಡುತ್ತಾ, ಕರ್ನಾಟಕದ ಗಡಿಯಲ್ಲಿ ಕನ್ನಡದ ಗುಡಿಯನ್ನು ಕಟ್ಟುವ ಕೈಂಕರ್ಯವನ್ನು ಶ್ರೀಗಳು ಮಾಡಿದ್ದಾರೆ ಎಂದು ಅವರ ಸೇವೆಯ ಗುಣಗಾನ ಮಾಡಿದರು.
ಹುಕ್ಕೇರಿ ತಾಲೂಕಿನ ಅಧ್ಯಕ್ಷರಾದ ಪ್ರಕಾಶ ಅವಲಕ್ಕಿ ಅವರು ಮಾತನಾಡಿ, ಪೂಜ್ಯ ಶ್ರೀಗಳ ಕನ್ನಡ ಅಭಿಮಾನದ ಕಾರ್ಯಕ್ರಮಗಳ ಕುರಿತು ಶ್ಲಾಘಿಸುತ್ತ ನುಡಿ ನಮನ ಸಲ್ಲಿಸಿದರು.
ತಾಲೂಕಾ ಅಧ್ಯಕ್ಷರುಗಳಾದ ಶ್ರೀಮತಿ ಭಾರತಿ ಮದಭಾವಿ, ಈರಣ್ಣ ಶಿರಗಾವಿ, ಸುರೇಶ ಹಂಜಿ, ರವೀಂದ್ರ ಪಾಟೀಲ, ಬಸವ ಪ್ರಭು ಹಿರೇಮಠ, ಕಾಮಣ್ಣವರ, ಪಾಂಡುರಂಗ ಜಟಗನ್ನವರ, ಎನ್. ಆರ್. ಠಕ್ಕಾಯಿ, ಡಾ. ಎಸ್. ಬಿ. ದಳವಾಯಿ, ಎಮ್ ವಾಯ್. ಮೆಣಸಿನಕಾಯಿ, ವೀರಭದ್ರ. ಮ. ಅಂಗಡಿ, ಪ್ರಭು ಹಿರೇಮಠ,ಚೇತನ ಏಣಗಿಮಠ, ಶ್ರೀಮತಿ. ಪ್ರತಿಭಾ. ಕಳ್ಳಿಮಠ, ವಿನೋದ ಜಗಜಂಪಿ ಮುಂತಾದ ಎಲ್ಲ ಕನ್ನಡಭಿಮಾನಿಗಳು ಉಪಸ್ಥಿತರಿದ್ದರು.