spot_img
spot_img

ಇಂಜಿನೀಯರ್ ಗೆ ಲಂಚ ರೂಪದಲ್ಲಿ ತನ್ನ ಎತ್ತುಗಳನ್ನೇ ನೀಡಲು ಮುಂದಾದ ರೈತ! ಬೀದರ ಜಿಲ್ಲೆಯ ಭ್ರಷ್ಟ ಅಧಿಕಾರಿಯ ಕಥೆ

Must Read

spot_img
- Advertisement -

ಬೀದರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗೆ ಗ್ರಾಮ ಪಂಚಾಯತ್ ಅಧಿಕಾರಿ ಲಂಚದ ಬೇಡಿಕೆ ಇಟ್ಟಿದ್ದರಿಂದ  ಬೇಸತ್ತ ರೈತನೊಬ್ಬ ಲಂಚದ ಹಣದ ಬದಲಿಗೆ ತನ್ನ 2 ಎತ್ತುಗಳನ್ನೇ ಲಂಚದ ರೂಪದಲ್ಲಿ ನೀಡಲು ತಾಲ್ಲೂಕು ಪಂಚಾಯತ್‌ಗೆ ಆಗಮಿಸಿದ ಪ್ರಸಂಗ ಜರುಗಿದೆ.

ಗಡಿ ಜಿಲ್ಲೆ ಬೀದರನ ಬಸವಕಲ್ಯಾಣದಲ್ಲಿ ನಡೆದ ಒಂದು ಘಟನೆ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹಾಗು ರಾಜ್ಯದ ಮುಖ್ಯ ಮಂತ್ರಿ ನೊಡಲೇಬೇಕಾದ ಸುದ್ದಿ. ರಾಜ್ಯದ ಭ್ರಷ್ಟ ಅಧಿಕಾರಿಗಳ ಕರ್ಮಕಾಂಡವನ್ನು ಬಯಲು ಮಾಡಿದೆ.

ಒಬ್ಬ ರೈತನ ಉದ್ಯೋಗ ಖಾತ್ರೆ ಯಲ್ಲಿ ಮಂಜೂರಾದ ದುಡ್ಡಿಗೆ ಪರ್ಸೆಂಟೇಜ್ ಗೆ ಬೇಡಿಕೆ ಇಟ್ಟ ಬಸವಕಲ್ಯಾಣ ತಾಲೂಕು ಇಂಜಿನಿಯರ ಒಬ್ಬನಿಂದಾಗಿ ಬಿಜೆಪಿ ಸರ್ಕಾರದ ವಿರುದ್ಧ ಈ ಹಿಂದೆ ಇದ್ದ 40% ಆರೋಪ ಸತ್ಯವಾಯಿತು ಎಂದು ಹೇಳಬಹುದು. 

- Advertisement -

ಸುದ್ದಿ ತಿಳಿದ ತಾಪಂ ಅಧಿಕಾರಿ ಸಂತೋಷ ಚವ್ಹಾಣ್ ಅವರು ರೈತನಿಗೆ ಭೇಟಿಮಾಡಿ ವಿಷಯದ ಕುರಿತು ಚರ್ಚಿಸಿ ಈ ಕೂಡಲೇ  ಸ್ಥಳಕ್ಕೆ ಭೇಟಿ ನೀಡಿ ಬಿಲ್ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೈತನಿಗೆ ಭರವಸೆ ನೀಡಿದ ನಂತರ ರೈತ ಪ್ರಶಾಂತ ಬಿರಾದಾರ ತಮ್ಮ ಎತ್ತುಗಳ ಸಹಿತ ಮನೆಗೆ ವಾಪಾಸ್ ತೆರಳಿದ ಪ್ರಸಂಗ ಜರುಗಿತು.

ಹಳ್ಳಿಯ ಮುಗ್ಧ ರೈತರಿಗೆ, ಕಾರ್ಮಿಕರಿಗೆ ಉದ್ಯೋಗದ ಖಾತ್ರಿ ದೊರೆಯಲಿ ಎಂಬ ಸದುದ್ದೇಶದಿಂದ ಪ್ರಧಾನಿಯವರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟ ಅಧಿಕಾರಿಗಳು ಯಾವ ರೀತಿ ಸುಲಿಗೆ ಮಾಡುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ.

ಪ್ರತಿ ಪಂಚಾಯಿತಿಗಳಲ್ಲೂ ಸೇರಿಕೊಂಡಿರುವ ಇಂಥ ಭ್ರಷ್ಟರ ವಿರುದ್ಧ ಈ ರೈತನಂತೆ ಎಲ್ಲರೂ ನಿಲ್ಲಬೇಕಾಗಿದೆ. ತಮ್ಮ ಹಕ್ಕು ಆಗಿರುವ ಉದ್ಯೋಗ ಖಾತ್ರಿಯ ಹಣವನ್ನು ಯಾವುದೇ ಮುಲಾಜಿಲ್ಲದೆ ಪಡೆದುಕೊಳ್ಳಲು ಮುಂದಾಗಬೇಕಾಗಿದೆ.


- Advertisement -

ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group