ಮೂಡಲಗಿ:-ತಾಲೂಕಿನ ಗುರ್ಲಾಪೂರ ಕ್ರಾಸದಲ್ಲಿ ಗುರುವಾರದಿಂದ ಪ್ರಾರಂಭವಾಗಿದ್ದ ರೈತರ ಪ್ರತಿಭಟನೆ ಸೋಮವಾರ ಐದನೆಯ ದಿನಕ್ಕೆ ಬೃಹತ್ ಹೋರಾಟಕ್ಜೆ ಕಾಲಿಟ್ಟಿದ್ದು ಮುಷ್ಕರ ನಿರತ ರೈತನೊಬ್ಬ ವಿಷ ಸೇವಿಸಿದ ಘಟನೆ ನಡೆಯಿತು.
ಐದನೆಯ ದಿನ ಸೋಮವಾರ ರೈತರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಸಂಸದರಾದ ಜಗದೀಶ ಶೆಟ್ಟರ ಮಾತನಾಡುವ ಸಮಯದಲ್ಲಿ ರಾಯಬಾಗ ತಾಲೂಕಿನ ಆಲಕನೂರ ಗ್ರಾಮದ ರೈತ ಲಕ್ಕಪ್ಪ ಗುಣದಾಳ (೩೦) ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದನು. ನಂತರ ಹೋರಾಟಗಾರರು ಕೂಡಿ ಹಾರೂಗೇರಿ ಆಸ್ಪತ್ರೆಗೆ ಸೇರಿಸಲಾಯಿತು.
ಸುಮಾರು ೪೦ ಸಾವಿರಕ್ಕಿಂತ ಹೆಚ್ಚು ರೈತರು ಹೋರಾಟದಲ್ಲಿ ಭಾಗಿಯಾಗಿಯಾಗಿದ್ದಾರೆ.ನಾಲ್ಕು ದಿನಗಳಿಂದ ಪ್ರತಿಭಟನೆ ನಡೆದಿದೆ ಆದರೂ ಯಾವುದೆ ಸಕ್ಕರೆ ಕಾರ್ಖಾನೆಯವರು ಸ್ಪಂದಿಸಿಲ್ಲ ಸ್ವಾಮೀಜಿಗಳು, ಶಾಸಕರು,ಜಿಲ್ಲಾಧಿಕಾರಿ ಮತ್ತು ಇನ್ನು ಅನೇಕರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಸಚಿವರು ಭೇಟಿ ನೀಡುತ್ತಿಲ್ಲವೆಂದು ರೈತರಿಗೆ ಬೇಸರ ಉಂಟಾಗಿದ್ದು
ಚುನಾವಣೆ ಸಮಯದಲ್ಲಿ ಭೇಟಿ ಆಗುವುದಕ್ಕೆ ಅವರಿಗೆ ಸಮಯ ಸಿಗುತ್ತದೆ, ರೈತರು ಸಂಕಟದಲ್ಲಿದ್ದಾಗ ಮಾತ್ರ ಅವರಿಗೆ ಬಿಡುವು ಸಿಗುವುದಿಲ್ಲ.ಇದಕ್ಕೆಲ್ಲ ಕಾರಣ ನಮ್ಮಲ್ಲಿ ಹೊಂದಾಣಿಕೆ ಇಲ್ಲದ ಕಾರಣಕ್ಕಾಗಿ ರೈತರು ಒಗ್ಗಟ್ಟಾಗಿದ್ದರೆ ಎಲ್ಲವನ್ನು ಗೆಲ್ಲಬಹುದು.ಮೊದಲು ನಮ್ಮಲ್ಲಿ ಒಗಟ್ಟು ತಪ್ಪದ ಹಾಗೆ ನಾವೆಲ್ಲರೂ ಒಂದೇ ಅನ್ನುವುದು ಸರ್ಕಾರಕ್ಕೆ ಗೊತ್ತಾಗುವಂತೆ ನಾವು ಇರೋಣ ಅಂತ ಕೆಲ ರೈತರು ಹೇಳಿದರು.
ಗೋಕಾಕ ಶೂನ್ಯ ಮಠದ ಶ್ರೀ ಮುರಘರಾಜೇಂದ್ರ ಸ್ವಾಮೀಜಿ, ಘಟಪ್ರಭಾ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಹುಣಶ್ಯಾಳ (ಪಿಜಿ ) ಶ್ರೀ ನಿಜಗುಣ ದೇವರು ಶ್ರೀಗಳು,ಬಟಕುರ್ಕಿ ಮಠದ ಗಂಗಯ್ಯ ದೇವರು ಶ್ರೀಗಳು, ರಾಚೋಟೇಶ್ವರ ದೇವರು ಶ್ರೀಗಳು, ಮೃತ್ಯಂಜಯ ದೇವರು ಶ್ರೀಗಳು, ಗುರುದೇವ ಮಹಾರಾಜರು,ಬಬಲಾದಿ ಸಿದ್ದರಾಮಯ್ಯ ಶ್ರೀಗಳು ಅನ್ನ ಹಾಕುವ ಕೈ ನಾಲ್ಕೈದು ದಿನ ಬಿಸಿಲು,ಹಗಲು-ರಾತ್ರಿ ಮತ್ತು ಮಳೆ ಎನ್ನದೆ ಕುಳಿತರು ನಿಮ್ಮ ಮನ ಕರಗುತ್ತಿಲ್ಲ.ರೈತರ ಶಾಪ ನಿಮಗೆ ತಟ್ಟದೇ ಬಿಡದು. ವರ್ಷವಿಡೀ ಬೆಳೆದ ಬೆಳೆಗೆ ತಕ್ಕ ದರ ನೀಡಿ ಎಂದು ರೈತರು ನ್ಯಾಯುತವಾಗಿ ಕೇಳುತ್ತಿದ್ದಾರೆ ಅಂತ ಶ್ರೀಗಳು ನೊಂದ ಮನಸ್ಸಿನಿಂದ ಹೇಳಿದರು.
ರವಿವಾರ ಸಂಧಾನಕ್ಕಾಗಿ ಆಗಮಿಸಿದ ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಶನ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೀಮಾಶಂಕರ ಗುಳೇದ ಟನ್ ಕಬ್ಬಿಗೆ ರೂ.೩೨೦೦ ಕೊಡಲು ಕಾರ್ಖಾನೆ ಮಾಲೀಕರ ಜೊತೆ ಚರ್ಚೆ ಆಗಿದೆ, ನೀವು ಒಪ್ಪಿಕೊಳ್ಳಿ ಎಂದರು. ಆದರೆ ರೈತರು ಒಪ್ಪಿಗೆ ನೀಡಿಲವೆಂದು ತುಳಿದು ಬಂದಿರುವುದು.
ಸೋಮವಾರ ಮತ್ತೆ ಹೋರಾಟ ಮುಂದುವರೆಯುವುದು ಅಂತ ರೈತರು ಪಟ್ಟು ಬಿಡುತ್ತಿಲ್ಲ.
ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ,ರಾಜಕೀಯ ಮುಖಂಡರಾದ ಲಕ್ಕಣ್ಣ ಸವಸುದ್ದಿ, ರಾಯಬಾಗ ಶಾಸಕರಾದ ದುರ್ಯೋಧನ ಐಹೊಳೆ,ಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣವರ,ಮಹಾರಾಷ್ಟ್ರದ ಮಾಜಿ ಸಂಸದರಾದ ರಾಜು ಶೆಟ್ಟಿ ಇನ್ನು ಅನೇಕ ಜನಪ್ರತಿನಿಧಿಗಳು ಭೇಟಿ ನೀಡಿ ಬೆಂಬಲ ಸೂಚಿಸಿದರು.

