spot_img
spot_img

ಮೈಸೂರಿನಲ್ಲಿ ಅದ್ದೂರಿಯಾಗಿ ನಡೆದ ಫ್ಯಾಷನ್ ಶೋ

Must Read

ಮೈಸೂರು – ದಿ.1-5-2022 ರಂದು ತಿಬ್ಬಾಸ್ ಗ್ರೂಪ್ ವತಿಯಿಂದ ತಿಬ್ಬಾಸ್ ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ ಸೀಸನ್ 2 ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯಿತು.

ಈ ಸ್ಪರ್ಧೆಯಲ್ಲಿ ತಿಬ್ಬಾಸ್ ಗ್ರೂಪ್ ವತಿಯಿಂದ 16 ವಿಭಾಗಗಳನ್ನು ಪರಿಚಯಿಸಲಾಯಿತು ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ವಿಭಾಗಗಳನ್ನು ಪರಿಚಯಿಸಿದ್ದು ತಿಬ್ಬಾಸ್ ಗ್ರೂಪ್ ಮಾಡೆಲಿಂಗ್ ಕಂಪನಿಗೆ ಈ ಹೆಮ್ಮೆ ಸಲ್ಲುತ್ತದೆ ಈ ಸಂಸ್ಥೆಯನ್ನು 2018 ರಲ್ಲಿ ಪ್ರಾರಂಭಿಸಲಾಯಿತು ಹಾಗೂ ಮೊದಲ ಬಾರಿಗೆ ಎಲ್ಲಾ ವಿಭಾಗದಲ್ಲೂ ಒಂದು ವರ್ಷದಿಂದ ಎಂಬತ್ತು ವರ್ಷದವರೆಗೂ ಮಾಡೆಲಿಂಗ್ ಸ್ಪರ್ಧೆಯನ್ನು ಏರ್ಪಡಿಸಿದ ಮೊದಲ ಸಂಸ್ಥೆ ಇದಾಗಿದೆ.

ವಿಭಾಗಗಳು:

ಪ್ರಿನ್ಸೆಸ್ ,ಪ್ರಿನ್ಸ್ , ಮಿಸ್ಟರ್, ಮಿಸ್, ಮಿಸ್ಟರ್ ಟೀನ್, ಮಿಸ್ ಟೀನ್, ಮಿಸಸ್( ಮ್ಯಾರೀಡ್ ಉಮೆನ್ಸ್), ಪೇರೆಂಟ್ಸ್ ವಿತ್ ಕಿಡ್ಸ್ ,ಮಾಮ್ ವಿತ್ ಕಿಡ್ಸ್ , ಗ್ರಾಂಡ್ ಫಾದರ್ ಅಂಡ್ ಗ್ರಾಂಡ್ ಮದರ್, ಅನ್ ಮ್ಯಾರಿಡ್ ಕಪಲ್ಸ್ ಹೀಗೆ ಅನೇಕ ವಿಭಾಗಗಳನ್ನು ಮಾಡಲಾಗಿದೆ.

ಈ ಸ್ಪರ್ಧೆಯಲ್ಲಿ ಫ್ಯಾಶನ್ ಮಾಡೆಲ್ ಮಿಸ್ಟರ್ ಏಷ್ಯಾ 2020 ಹೆಮ್ಮೆಯಕನ್ನಡಿಗ 2021ರ ವಿಜೇತರು ಫೇಮ ಆಫ್ ನಮ್ಮ ಬಾಹುಬಲಿ 2021 ಹಾಗೂ ತಿಬ್ಬಾಸ್ ಗ್ರೂಪ್ನನ ಸಂಸ್ಥಾಪಕರಾದ ನಾಗೇಶ್ ಡಿಸಿ ರವರು ಹಾಗೂ ನ್ಯಾಷನಲ್ ಐಕಾನ್ ಮಾಡೆಲ್ ಹಂಟ್ 2019ರ ವಿಜೇತರು ತಿಬ್ಬಾಸ್ ಗ್ರೂಪ್ ಮಾಡಲ್ ಶ್ರೀಮತಿ ಜ್ಯೋತಿ ರವರು ತೀರ್ಪುಗಾರರಾಗಿದ್ದರು.

ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಹಾಗೂ ಸ್ಪರ್ಧೆಯ ವಿಜೇತರಿಗೆ ಟ್ರೋಫಿಯನ್ನು ನೀಡಲಾಯಿತು ಈ ಸ್ಪರ್ಧೆಯ ಒಂದು ಸುತ್ತಿನಲ್ಲಿ ರೈತರ ಬಗ್ಗೆ ಗೌರವ ತೋರುವ ಥೀಮ್ ಅನ್ನು ಹೊಂದಿತ್ತು ಹಾಗೂ ಸ್ಪರ್ಧೆಯಲ್ಲಿ ರೈತರ ವೇಷಭೂಷಣಗಳನ್ನು ತೊಟ್ಟು ಅವರ ಬಗ್ಗೆ ಮಾತನಾಡುವ ಸ್ಪರ್ಧೆಯೂ ಈ ಕಾರ್ಯಕ್ರಮದ ವಿಶೇಷವಾಗಿತ್ತು ಹಾಗೂ ಈ ಮುಖಾಂತರವಾಗಿ ರೈತರಿಗೆ ಗೌರವ ಸಲ್ಲಿಸಲಾಗಿದೆ ಎಂದು ನಾಗೇಶ್ ಡಿಸಿ ಫ್ಯಾಶನ್ ಮಾಡೆಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!