spot_img
spot_img

ಬೀದಿಗೆ ಬಂದ ಕೇಂದ್ರ ಸಚಿವ ವರ್ಸಸ್ ಶಾಸಕರ ಜಗಳ

Must Read

spot_img

ಶಾಸಕ ಸಲಗರ್ ಗೆ ಸರ್ಕಾರ ಶಾಕ್..!

ಶಾಸಕರ ತಹಶೀಲ್ದಾರ ಪತ್ನಿ ಬಸವಕಲ್ಯಾಣದಿಂದ ಕಲಬುರಗಿಗೆ ಎತ್ತಂಗಡಿ

ಬೀದರ – ಇದೆ ಅಗಸ್ಟ್ 13 ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ದ ವಾಕಥಾನ್ ವೇಳೆ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಾಗರ್ ಮಧ್ಯೆ ನಡೆದ ವಾಗ್ವಾದಕ್ಕೆ ಹೊಸ ತಿರುವು ಸಿಕ್ಕಿದ್ದು ಶರಣು ಸಲಗರ ಪತ್ನಿ ತಹಶೀಲ್ದಾರ ಸಾವಿತ್ರಿ ಸಲಗರ ಅವರನ್ನು ಕರಬುರ್ಗಿಗೆ ವರ್ಗಾಯಿಸಲಾಗಿದೆ.

ಪಕ್ಷದ ಆಂತರಿಕ ಗುದ್ದಾಟದಿಂದಾಗಿ ಶಾಸಕ ಶರಣು ಸಲಗರ್ ಪತ್ನಿ ಸಾವಿತ್ರಿ ಸಲಗರ್ ರನ್ನು ಕಲಬುರಗಿ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ ಇದನ್ನು ಈ ಶಾಸಕ ಶರಣು ಸಲಗರಗರ  ಮೊದಲ ಹಿನ್ನಡೆ ಎಂದು ಬಣ್ಣಿಸಲಾಗುತ್ತಿದೆ. ತಮ್ಮದೆ ಪಕ್ಷದ ಶಾಸಕನಿಗೆ ಸರ್ಕಾರ ಶಾಕ್ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಅಮೃತ ಮಹೋತ್ಸವದ ಮೆರವಣಿಗೆ ವೇಳೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದರು. ಆ ಸಮಯದಲ್ಲಿ ಶಾಸಕ ಶರಣು ಸಲಗರ ಕೂಡ ಅಲ್ಲಿಯೇ ಇದ್ದರು. ಇದರಿಂದ ಬಿಜೆಪಿಯ ಲ್ಲಿ ಸದ್ಯ ಗುದ್ದಾಟ ನಡೆದಿದೆ ಎನ್ನಲಾಗುತ್ತಿತ್ತು. ಈಗ ಶಾಸಕರ ಪತ್ನಿಯನ್ನು ಸರ್ಕಾರ ಕಲಬುರ್ಗಿಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದು  ಶಾಸಕ ಶರಣು ಸಲಗರ್ ಅವರ ಮುಂದಿನ ನಡೆ  ಕುತೂಹಲ ಮೂಡಿಸಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!