spot_img
spot_img

ರಾಯಣ್ಣನ ಕಂಚಿನ ಮೂರ್ತಿಗೆ ಮೂಡಲಗಿಯಲ್ಲಿ ಭವ್ಯ ಸ್ವಾಗತ

Must Read

spot_img

ಮೂಡಲಗಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನರ ಕಂಚಿನ ಮೂರ್ತಿಯ ರಥಕ್ಕೆ ಮೂಡಲಗಿ ಪಟ್ಟಣದ ಶ್ರೀ ಕಲ್ಮೇಶ್ವರ ವೃತ್ತದಲ್ಲಿ ಬುಧವಾರದಂದು ಭವ್ಯ ಸ್ವಾಗತ ಕೋರಲಾಯಿತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ರಥಕ್ಕೆ ಕಹಾಮ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಮಲ್ಲಿಕಾರ್ಜುನ ಯಕ್ಸಂಬಿ ಹಾಗೂ ಮೂಡಲಗಿ ಪುರಸಭೆಯ ಅಧ್ಯಕ್ಷ ಹನುಮಂತ ಗುಡ್ಲಮನಿ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಡಾ ಎಸ್ ಎಸ್ ಪಾಟೀಲ ಮಾತನಾಡಿ, ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಹೋರಾಡಿದ ಅಪ್ರತಿಮ ಹೋರಾಟಗಾರರಾಗಿದ್ದರು. ಅಷ್ಟೇ ಅಲ್ಲದೆ ಒಂದೇ ಸಮಾಜಕ್ಕೆ ಸೀಮಿತವಾಗದೆ ಈ ದೇಶಕ್ಕಾಗಿ ಹೋರಾಡಿ ಪ್ರಾಣ ಬಲಿದಾನ ನೀಡಿದ ಮಹಾನ್ ನಾಯಕ ಸಂಗೊಳ್ಳಿ ರಾಯಣ್ಣ ಎಂದು ಹೇಳಿದರು.

ಯುವ ಮುಖಂಡ ಸಿದ್ದಣ್ಣ ದುರದುಂಡಿ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟನಾಗಿ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದ ಅಪ್ಪಟ ಕ್ರಾಂತಿವೀರ ರಾಯಣ್ಣ ಎಂದು ಹೇಳಿದರು.

ರಾಯಣ್ಣನ ಮೂರ್ತಿ ಸೇವಕ ಸಚಿನ ಭೂತಾಳಿ ಹಾಲುಮತ ಸಮಾಜದ ಮುಖಂಡರಾದ ಜಡೆಪ್ಪ ಮಂಗಿ ಈರಪ್ಪ ಶಾಬಣ್ಣವರ, ಭೀಮಸಿ ಮಂಗಿ, ಗೋಪಾಲ ಶಾಬಣ್ಣವರ, ಕೃಷ್ಣ ಶಾಬಣ್ಣವರ, ಸಂಜು ಶಾಬಣ್ಣವರ, ಸತ್ಯಪ್ಪ ರಾಜಾಪುರ, ಅಲ್ಲಪ್ಪ ಹಳ್ಳೂರ, ಮಲ್ಲು ಶಾಬಣ್ಣವರ, ಮಲಕಾರಿ ದುರದುಂಡಿ, ಆನಂದ ಲಂಗೋಟಿ, ಲೋಹಿತ್ ಗಸ್ತಿ, ವೆಂಕಪ್ಪ ಗುಡ್ಲಮನಿ, ಶ್ರೀಕಾಂತ ಕೌಜಲಗಿ, ಕರೆಪ್ಪ ಹೊಸಮನಿ, ಮುತ್ತಪ್ಪ ಹಳ್ಳೂರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಸಮಾಜ ಬಂಧುಗಳು ಮುಂತಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!