ಹಿರಿಯರು ನಮ್ಮ ಸಮಾಜದ ಆಸ್ತಿ – ತಹಶೀಲ್ದಾರ ಚವಲರ
ಸಿಂದಗಿ: ಹಿರಿಯರು ನಮ್ಮ ಸಮಾಜದ ಆಸ್ತಿ, ಅವರನ್ನು ಗೌರವಿಸುವ ಪೂಜಿಸುವ ಸಂಪ್ರದಾಯ ನಮ್ಮದು ಎಂದು ಆಲಮೇಲ ತಹಶಿಲ್ದಾರ ಸುರೇಶ ಚವಲರ ಹೇಳಿದರು.
ತಾಲೂಕಿನ ದೇವಣಗಾಂವ ಗ್ರಾಪಂ ಸಭಾಭವನದಲ್ಲಿ ಅಂತಾರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನಾಚರಣೆ ನಿಮಿತ್ತ ಹಿರಿಯ ಮತದಾರರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯ ಭಾಗವಾಗಿ ಹಿರಿಯರನ್ನು ವೃದ್ದಾಶ್ರಮಕ್ಕೆ ಸೇರಿಸುವ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ ಇದು ನಿಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಶತಾಯುಷಿ ಮತದಾರ ತುಳಜಾಬಾಯಿ ಸೇವುಸಿಂಗ್ ರಜಪುತ ಅವರಿಗೆ ತಾಲೂಕಾ ಆಡಳಿತದ ವತಿಯಿಂದ ಸನ್ಮಾನಿಸಿ, ಅಭಿನಂದನಾ ಪತ್ರ ನೀಡಿ, ಸಿಹಿ ಹಂಚಿದರು.
ಜಿಪಂ ಮಾಜಿ ಸದಸ್ಯ ಕಾಶಿನಾಥ ಗಂಗನಳ್ಳಿ, ತಾಪಂ ಮಾಜಿ ಸದಸ್ಯ ಶಂಕರಲಿಂಗ ಕಡ್ಲೇವಾಡ, ಗ್ರಾಪಂ ಅಧ್ಯಕ್ಷ ಬಸವರಾಜ ಹೀರಾಪುರ, ಗ್ರಾಪಂ ಸದಸ್ಯ ಸಂಗನಬಸು ಸುತಾರ, ಕಂದಾಯ ನಿರೀಕ್ಷಕ ಎಂ.ಎ.ಅತ್ತಾರ, ಗ್ರಾಮಲೆಕ್ಕಾಧಿಕಾರಿ ಶ್ರೀನಿವಾಸ ಕಾಂಬಳೆ, ಹಣಮಂತ ಮಲ್ಲಾಡ, ದೇವೇಂದ್ರ ಕಟ್ಟಿ, ಹಣಮಂತ ರಜಪುತ, ಸುರೇಶ ರಜಪುತ, ಜಯಸಿಂಗ್ ರಜಪುತ, ಸಂಜು ರಜಪುತ, ಶಿಕ್ಷಕ ಬಿ.ಬಿ.ಸಿಂಪಿ, ಎನ್.ಎ.ನಿಂಬರ್ಗಿ, ಮಾಂತಪ್ಪ ಕರ್ಶಿ, ಮೈಬೂಬ ಕಸಾಬ ಇದ್ದರು.