ಬೀದರ: ಹಲವು ದಿನಗಳಿಂದ ನಡೆಯುತ್ತಿರುವ ಬೇಡ ಜಂಗಮ ಪ್ರಮಾಣಪತ್ರದ ಹೋರಾಟ ಗಡಿ ಜಿಲ್ಲೆ ಈಗ ಗಂಭೀರ ಸ್ವರೂಪದ ಪಡೆದುಕೊಂಡಿದೆ.
ರಾಜ್ಯದ ಮುಖ್ಯ ಮಂತ್ರಿಗಳೇ ಬೇಡ ಜಂಗಮರ ತಾಳ್ಮೆ ಪರೀಕ್ಷಿಸಬೇಡಿ ನಾವು ಬೇಡ ಜಂಗಮ ಜಾತಿ ಪ್ರಮಾಣಕ್ಕಾಗಿ ಹೊರಾಟ ಮಾಡುತ್ತಿದ್ದೇವೆ.
ನಮ್ಮ ಮನವಿಗೆ ತಕ್ಷಣ ಸ್ಪಂದಿಸಬೇಕು ಎಂದು ಕರ್ನಾಟಕ ಬೇಡ ಜಂಗಮ ಸಂಘಟನೆಯ ಒಕ್ಕೂಟದ ಕಲ್ಯಾಣ ಕರ್ನಾಟಕ ಬೇಡ ಜಂಗಮ ಹೋರಾಟ ಸಮಿತಿ ಹುಮನಾಬಾದ್ ಇವರು ರಕ್ತದಿಂದ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಹುಮನಾಬಾದ್ ಇವರ ಮುಖಾಂತರ ರವಾನಿಸಿ ಎಚ್ಚರಿಸಿದ್ದಾರೆ.
ತಹಸೀಲ್ದಾರ ಕಛೇರಿಯ ಹತ್ತಿರ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಕಾಲ ಜಾತಿ ಪತ್ರ ನೀಡುವಂತೆ ಪ್ರತಿಭಟನೆ ಇಂದು ಹೊಸ ತಿರುವು ಪಡೆದುಕೊಂಡಿದೆ ರಾಜ್ಯದ ಮುಖ್ಯ ಮಂತ್ರಿಗಳಿಗೆ ರಕ್ತ ದಿಂದ ಬರೆದ ಮನವಿ ಪತ್ರ ರವಾನೆ ಮಾಡಲಾಗಿದೆ.
ಬರುಬರುತ್ತ ಗಂಭೀರ ಸ್ವರೂಪ ಪಡೆಯುತ್ತಿರುವ ಈ ಹೋರಾಟದ ಕುರಿತಂತೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆಯೆಂಬುದನ್ನು ಕಾದು ನೋಡಬೇಕಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ