ಗುರುವಿಲ್ಲದಾ ಜೀವನ ಸೂತ್ರವಿಲ್ಲದ ಗಾಳಿಪಟ – ಬಸವರಾಜ ಹಲಗತ್ತಿ

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ಸವದತ್ತಿ: ಗುರುವಿಲ್ಲದಾ ಜೀವನ ಸೂತ್ರವಿಲ್ಲದ ಗಾಳಿಪಟ.ಭಗವಂತನ ಕರುಣೆ ಗುರುಗಳ ಮೂಲಕ ಹರಿದು ಬರುತ್ತದೆ. ಗಾಳಿಪಟವು ಸೂತ್ರವಿಲ್ಲದೇ ಸರಿಯಾಗಿ ಹಾರಲಾಗದು.bಹಾಗೆಯೇ ಗುರುವಿನ ಮಾರ್ಗದರ್ಶನವಿಲ್ಲದೇ ನಮ್ಮ ಬದುಕಿನಲ್ಲಿ ನಡೆಯಲಾಗದು. ಮನುಷ್ಯನಿಗೆ ಗುರುವನ್ನು ಬಿಟ್ಟು ಬೇರೆ ಗತಿಯಿಲ್ಲ.

ಅಂದರೆ ಮುಕ್ತಿ ಇಲ್ಲ.ಮುಕ್ತಿಯನ್ನು ಹೊಂದುವುದೇ ಮಾನವ ಜನ್ಮದ ಸಾಫಲ್ಯವು. ಇಂಥ ಒಂದು ಸಾರ್ಥಕತೆಯನ್ನು ಹೊಂದಬೇಕಾದರೆ ಮುಖ್ಯವಾಗಿ ಗುರುವನ್ನು ಆಶ್ರಯಿಸಬೇಕು. ಹಾಗಾದರೆ ಗುರು ಏನು ಮಾಡುವನು ಎಂದರೆ ಮಾನವರಾದ ನಮ್ಮನ್ನು ದೇವಮಾನವರನ್ನಾಗಿ ಮಾಡುವರು.

- Advertisement -

ಅವರು ನಮ್ಮ ಕಣ್ಣು,ಕಿವಿ.ಮನಸ್ಸುಗಳಿಗೆ ಆಗಾಗ ಕವಿಯುವ ಪೊರೆಯನ್ನು ತಮ್ಮ ಜ್ಞಾನಾಮೃತ ನುಡಿಗಳಿಂದ ಜಿಡ್ಡುಗಳನ್ನು ತಗೆದು ಮುಕ್ತಿ ನೀಡುವರು ಎಂದು ಹಿರಿಯ ಸತ್ಸಂಗಿಗಳಾದ ಬಸವರಾಜ ಹಲಗತ್ತಿಯವರು ನುಡಿದರು.

ಅವರು ಸಿಂದೋಗಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಜರುಗಿದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಸಂತ ಶಿಶುನಾಳ ಷರೀಫರ ನಿಶ್ಚಿಂತನಾಗಬೇಕಂತಿ, ಬಹು ದುಶ್ಚಿಂತಿಯೊಳಗೆ ನೀ ಕುಂತಿ ಗೀತೆಯನ್ನು ಹಾಡಿದರು.ನಂತರ ಮಾತನಾಡಿದ ಸತ್ಸಂಗಿಗಳಾದ ಚನಬಸು ನಲವಡೆಯವರು ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ವಿಜಯಾನಂದ ಪೂಜ್ಯರನ್ನು ಸ್ಮರಿಸುತ್ತ ಅವರು ಮಠದಲ್ಲಿದ್ದ ಸತ್ಸಂಗಿಗಳಿಗೆ ಏನೇ ಕೆಲಸ ಮಾಡಿದರೂ ಪರಿಪೂರ್ಣ ಮಾಡಬೇಕು ಎಂಬುದನ್ನು ತಿಳಿಸುತ್ತಿದ್ದರು.

ಮಠದಲ್ಲಿ ಶಾಸ್ತ್ರವನ್ನು ಸತ್ಸಂಗಿಗಳಿಗೆ ಓದುವ ಕ್ರಮವನ್ನು ರೂಢಿಸಿದ್ದರು. ದಿವಂಗತ ಕಾಳಪ್ಪ ಹೊನ್ನಳ್ಳಿಯವರು ಒಂದು ಸಲ ಶಾಸ್ತ್ರ ಓದುವಾಗ ಷಣ್ಮುಖ ಶಬ್ದವನ್ನು ಸಣ್ಮುಖ ಎಂದು ತಪ್ಪಾಗಿ ಓದಿದಾಗ ಅದನ್ನು ಸರಿ ಓದಿಸುವವರೆಗೆ ಬಿಡಲಿಲ್ಲ. ಸರಿಯಾಗಿ ಓದಿದ ನಂತರ ಮುಂದಿನ ವಾಕ್ಯವನ್ನು ಓದಿಸುತ್ತಿದ್ದರು.ಎಲ್ಲರಿಗೂ ಶಾಸ್ತ್ರವನ್ನು ಮನನ ಮಾಡಿಸಿದರು ಎಂದು ಸ್ಮರಿಸುತ್ತ ಬಾಗಿಲಿಗೆ ಚಿಲಕವನ್ನು ಕೊಂಡಿಯ ಒಳಗೆ ಹಾಕಬೇಕು.ಯಾರಾದರೂ ಅಪೂರ್ಣ ಹಾಕಿದರೋ ಅದು ಪೂಜ್ಯರ ಕಣ್ಣಿಗೆ ಬಿದ್ದರೆ ಸಾಕು ಸರಿಯಾಗಿ ಹಾಕಿ ಬರುವವರೆಗೆ ಬಿಡುತ್ತಿರಲಿಲ್ಲ.ಹೀಗೆ ಬದುಕಿನ ಪ್ರತಿಯೊಂದು ಹಂತದಲ್ಲಿ ನಮ್ಮನ್ನು ತಿದ್ದಿ ತೀಡಿದರು.ಅಂತಲೇ ಈ ದಿನ ನಮ್ಮ ಗುರು ಪೂರ್ಣಿಮೆಯಂದು ಸತ್ಸಂಗವನ್ನು ನಮಗೆ ನಡೆಸುವಂತಾಗಿದೆ ಎಂದರೆ ಪರಮಪೂಜ್ಯರು ನಮಗೆ ಹಾಕಿಕೊಟ್ಟ ಸಂಸ್ಕಾರ ಕಾರಣಎಂದು ನುಡಿದರು.

ಹಿರಿಯರಾದ ಸತ್ಸಂಗಿಗಳಾದ ಯಶವಂತ ಗೌಡರ ಮಾತನಾಡುತ್ತ, ನಮ್ಮ ಆಲೋಚನೆಗಳು ಉಪಯೋಗವಿಲ್ಲದ ವಿಚಾರಗಳತ್ತ ಯೋಚಿಸದೇ ಗುರುವಿನ ಮುಖೇನ ಒಳ್ಳೆಯ ಆಲೋಚನೆಯನ್ನು ಹೊಂದೋಣ ಎನ್ನುತ್ತ ಹಿಂದೆ ಬಲ್ಕ ಒಂದು ರಾಜ್ಯವಿತ್ತು. ಅಲ್ಲಿ ಒಬ್ಬ ರಾಜನಿದ್ದ.ಸುಭೀಕ್ಷವಾದ ರಾಜ್ಯವಾಗಿತ್ತು. ಸೂಫಿ ಸಂತರ ನಾಡು.ರಾಜ ಅಂತಪುರದಲ್ಲಿ ಮಲಗಿದ್ದಾಗ ಮಹಡಿಯ ಮೇಲೆ ಯಾರೋ ಓಡಾಡಿದಂತೆ ಸದ್ದು ಕೇಳಿ ಯಾರವರು.? ಎಂದು ಪ್ರಶ್ನಿಸಿದ.ಆಗ ಮಹಡಿಯ ಮೇಲಿದ್ದ ವ್ಯಕ್ತಿ ನಾನು ಮಹಡಿಯ ಮೇಲೆ ಓಡಾಡುತ್ತಿದ್ದುದು ಬಹಳ ದಿನವಾಗಿದೆ. ಎಂದು ಹೇಳಿದ.

ಆಗ ರಾಜ ಪ್ರತಿಕ್ರಯಿಸಿ ಅದು ಸರಿ ನೀನು ಬಹಳ ದಿನಗಳಿಂದ ಓಡಾಡುತ್ತಿರಬಹುದು.ನನಗೆ ಇವತ್ತು ಗೊತ್ತಾಗಿದೆ.ಮೇಲೆ ಓಡಾಡಲು ಕಾರಣ.? ಎಂದ. ಆಗ ಆತ ನನ್ನ ಒಂಟೆ ಕಳುವಾಗಿದೆ.ಅದನ್ನು ಹುಡುಕುತ್ತಿರುವೆ. ಎಂದನು.ರಾಜನಿಗೆ ಆಶ್ಚರ್ಯ ಹುಚ್ಚಪ್ಪ ಮಹಡಿಯ ಮೇಲೆ ಒಂಟೆ ಹತ್ತುತ್ತದೆಯೇ,? ಎಂದ ಆಗ ಆತ ಬೋಗ ಐಶ್ಚರ್ಯ ಅಧಿಕಾರದಿಂದ ಸುಖ ಸಿಗುತ್ತದೆ ಎಂದರೆ ಮಹಡಿಯ ಮೇಲೆ ಒಂಟೆ ಸಿಗಬಾರದೇ.?ಎಂದು ಹೇಳಿ ಕಣ್ಮರೆಯಾದ.

ರಾಜನಿಗೆ ಈ ಮಾತು ವಿಚಿತ್ರವೆನಿಸಿದರೂ ಅದರ ತಾತ್ಪರ್ಯ ತಿಳಿಯಲು ರಾತ್ರಿಯಿಡೀ ನಿದ್ರಿಸಲಿಲ್ಲ. ಮರುದಿನ ಅಂತಃಪುರದಲ್ಲಿ ಮಂತ್ರಿಗಳ ಸಭೆ ಸೇರಿತ್ತು. ಒಬ್ಬ ವ್ಯಕ್ತಿ ದ್ವಾರ ಬಾಗಿಲಿನಲ್ಲಿ ನಿಂತಿದ್ದ ರಾಜಭಟರನ್ನು ಲೆಕ್ಕಿಸದೇ ಅಂತಃಪುರ ಪ್ರವೇಶಿಸಿದ. ಹಿಂದಿನಿಂದ ರಾಜಭಟರು ಓಡಿ ಬಂದರೂ ಅವನು ನಿಲ್ಲದೇ ರಾಜನೆದುರಿಗೆ ಬಂದು ನಿಂತ.ಆಗ ರಾಜ ಈ ರೀತಿ ಹೇಳದೇ ಕೇಳದೇ ಒಳ ನುಗ್ಗಲು ಇದೇನು ಧರ್ಮಶಾಲೆಯೇನು.? ಎಂದ. ಆಗ ಆ ಅಪರಿಚಿತ ಹೌದು ಇದೊಂದು ಧರ್ಮಶಾಲೆ.

ಈ ಹಿಂದೆ ನಾನು ಬಂದಾಗ ಬೇರೊಬ್ಬ ರಾಜನಿದ್ದ. ನಂತರ ಹಲವು ದಶಕ ಕಳೆದು ಬಂದಾಗ ಮತ್ತೊಬ್ಬ ರಾಜನಿದ್ದ ಈಗ ನೀವಿರುವಿರಿ.ಮತ್ತೆ ಇದೊಂದು ಧರ್ಮಶಾಲೆಯಲ್ಲದೇ ಬೇರೇನು.? ಬಂದು ಹೋಗುವ ಮನುಜನಿಗೆ ಇದೊಂದು ಧರ್ಮಶಾಲೆಯಲ್ಲದೇ ಮತ್ತೇನು.? ಎನ್ನಲು ರಾಜನಿಗೆ ಜ್ಞಾನೋದಯವಾಯಿತು. ಒಂಟೆ ಹುಡುಕಲು ಬಂದ ಮಹಾತ್ಮ ಇವರು. ಇವರ ಮಾತುಗಳು ಸತ್ಯ. ಈ ಶರೀರ ಶಾಶ್ವತವಲ್ಲ.ಇದು ನಶ್ವರ ಎಂದು ತಿಳಿದು ಅವರನ್ನು ಉಪಚರಿಸಿದ. ರಾಜ ತನ್ನ ಸಾಮ್ರಾಜ್ಯವನ್ನು ತೊರೆದು ಸೂಫಿ ಸಂತನಾದನು ಇದು ಗುರು ಮಹಿಮೆ ಎಂದು ತಿಳಿಸಿದರು.

ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಪೂಜ್ಯರು ಮಾತನಾಡುತ್ತ, ನಮ್ಮ ಮಠದ ಪೂಜ್ಯರು ಸತ್ಸಂಗ ಬಳಗಕ್ಕೆ ಎಲ್ಲ ವಿಧದ ಮಾರ್ಗದರ್ಶನ ನೀಡಿರುವರು.ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನೀವು ನಡೆದುಕೊಂಡು ಬರುತ್ತಿದ್ದೇವೆ. ಆ ಗುರುನಾಥನ ಕೃಪೆಯ ಮೂಲಕ ಪ್ರತಿ ವರ್ಷ ಗುರುವಿನ ಸ್ಮರಣೆಯನ್ನು ಗುರು ಪೂರ್ಣಿಮೆಯಂದು ನಡೆದುಕೊಂಡು ಬರುತ್ತಿದ್ದೇವೆ.

ಇಂದು ಮಾತನಾಡಿದ ಮೂವರು ಸತ್ಸಂಗಿಗಳು ಗುರುವಿನ ಗುಲಾಮನಾಗುವ ತನಕ ದೊರೆಯದೆನ್ನ ಮುಕುತಿ ಎಂಬುದನ್ನು ತಮ್ಮ ಅನುಭವಾಮೃತದ ಮೂಲಕ ನೀಡಿರುವರು.ಈ ಮಾನವ ಜನ್ಮದಲ್ಲಿ ನಾವೆಲ್ಲ ಗುರುವಿನ ಕರುಣೆಯ ಕೃಪೆಗೆ ಪಾತ್ರರಾಗಬೇಕು. ತಂತಿಯಲ್ಲಿ ವಿದ್ಯುತ್ ಹೇಗೆ ಪ್ರವಹಿಸುತ್ತವೆಯೋ ಹಾಗೆಯೇ ಗುರು ಕರುಣೆ ನಮ್ಮ ಶರೀರದ ಜ್ಞಾನಚಕ್ಷುವಿನ ಮೂಲಕ ಹರಿದು ಬರುವುದು.ಎಂಬುದನ್ನು ಹಲವು ದೃಷ್ಟಾಂತಗಳ ಮೂಲಕ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸುಧಾ ಗೌಡರ.ಸವಿತಕ್ಕ ಕೆಂದೂರ.ಜಯಶ್ರೀ ಕುಲಕರ್ಣಿ, ಪಂಚನಗೌಡ ಬಿಕ್ಕನಗೌಡರ, ವೈ.ಬಿ.ಕಡಕೋಳ.ಬಿ.ಬಿ.ಹುಲಗೊಪ್ಪ.ವ್ಹಿ.ವ್ಹಿ.ಕೊಳಕಿ.ಸುಭಾಸ ಗಂಗನ್ನವರ.ಜೆ.ಎಚ್.ಪಾಟೀಲ.ಮಲ್ಲಿಕಾರ್ಜುನ ಶಿವಪೇಟೆ.ಚನ್ನಮ್ಮ ಹಲಗತ್ತಿ.ಶ್ರೀಕಾಂತ ಮಿರಜಕರ.ವೆಂಕಪ್ಪ ಯಕ್ಕುಂಡಿ.ಕಾಶಪ್ಪ ನಲವಡೆ.ಹೂವಪ್ಪ ಬಾರಕೇರ.ಅನುರಾಧ ಬೆಟಗೇರಿ.ಗೌರಿ ಜೇವೂರ.ಇಂದ್ರಕ್ಕ ಕದಂ.ವಸಂತ ಸಣಕಲ್.ವಿಜಯಲಕ್ಷ್ಮೀ ಬಂಡಿ.ಮೊದಲಾದ ಸತ್ಸಂಗಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಅನಸೂಯ ಹೊನ್ನಳ್ಳಿ ಜಯಶ್ರೀ ಹೊನ್ನಳ್ಳಿ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ವೀರಣ್ಣ ಕೊಳಕಿ ವಂದಿಸಿದರು.


ವರದಿ: ವೈ.ಬಿ.ಕಡಕೋಳ ಸಂಪನ್ಮೂಲ ಶಿಕ್ಷಕರು ಮುನವಳ್ಳಿ

- Advertisement -
- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!